ಝಗಮಗಿಸಿತು ಶಾಂತೇಶ್ವರ ಜಾತ್ರೆ..!
ಸರ್ಜಿಕಲ್ ಸ್ಟ್ರೈಕ್ ಯಶಸ್ಸು…!
ಪ್ರಜ್ವಲಿಸಿದರು ಸಿದ್ದೇಶ್ವರರು…!
ಇಂಡಿ : ಒಂದು ರಾಷ್ಟ್ರ ಅಭಿವೃದ್ಧಿ ಯಾಗಬೇಕೆಂದರೆ ಶಿಕ್ಷಣ ಕಾರಣ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಸೋಮುವಾರ ಪಟ್ಟಣದ ಗಾಂಧಿ ಬಾಜಾರ ಸರಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು. ನೂರಾರು ವರ್ಷಕ್ಕೆ ಒಮ್ಮೆ ಅಂತಹ ಮಹಾನ ಅಪರೂಪದ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಾರೆ. ಅವರ ಸರಳತೆ ಬದುಕಿನ ಸ್ವರೂಪ ಚಿಂತನೆ ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಇಂದು ಪ್ರಪಂಚದ ತುಂಬೆಲ್ಲಾ ಆಧ್ಯಾತ್ಮಿಕ ಲೋಕದ ಸುಹಾವಸನೆ ಬೀರುವಂತೆ ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿಯವರು ಎಂದು ಹೇಳಿದರು. ಇನ್ನೂ ಸ್ಮಾರ್ಟ್ ಕ್ಲಾಸ್, ಪರಿಶುದ್ಧ ಕುಡಿಯುವ ನೀರಿನ ಘಟಕ, ಹೈಟೆಕ್ ಶೌಚಾಲಯ ವ್ಯವಸ್ಥೆ ಮಾಡಿಸಲಾಗುವುದು. ವಿಧ್ಯಾರ್ಥಿಗಳು ಈ ಭಾಗದ ಹೆಸರು ಮುಗಿಲ ಎತ್ತರಕ್ಕೆ ಒಯ್ಯುವ ಕೆಲಸ ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಾಸ್ಥಾವಿಕ ನ್ಯಾಯವಾದಿ ಸೋಮು ನಿಂಬರಗಿಮಠ ಬಿಇಒ ವಸಂತ ರಾಠೋಡ ಮಾತನಾಡಿದರು.
ವೇದಿಕೆ ಮೇಲೆ ಎಸ್ ಡಿ ಎಂ ಅಧ್ಯಕ್ಷ ಶ್ರೇಣಿಕರಾಜ ಹಳ್ಳಿ, ವೇದ ಮೂರ್ತಿ ಶಾಂತಯ್ಯ ಹಿರೇಮಠ, ಪುಸರಭೆ ಮಾಜಿ ಅಧ್ಯಕ್ಷ ಯಮುನಾಜಿ ಸಾಳಂಕೆ, ಶ್ರೀಕಾಂತ ಕುಡಿಗನೂರ, ಪುರಸಭೆ ಸದಸ್ಯ ಬುದ್ದುಗೌಡ ಪಾಟೀಲ, ಭೀಮನಗೌಡ ಪಾಟೀಲ, ಸತೀಶ ಕುಂಬಾರ, ರೇಣುಕಾ ಉಟಗಿ ಹಾಗೂ ಎಸ್ ಡಿ ಎಂ ಸಿ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಇನ್ನೂ ಅನೇಕ ಉಪಸ್ಥಿತರಿದ್ದರು. ಸ್ವಾಗತ ಮುಖ್ಯ ಗುರುಗಳು ಯು.ಎಚ್ ಚವ್ಹಾಣ ಮಾಡಿಕೊಂಡರು, ಪಿ.ಜಿ ಕಲ್ಮನಿ ನಿರೂಪಿಸಿದರು.
***KGS ಶಾಲೆಯ ವಿಶೇಷ ಕಾರ್ಯಕ್ರಮಗಳು***
ನಗರದ ಕೆಜಿಎಸ್ ಶಾಲೆಯಲ್ಲಿ ವಾರ್ಷಿಕೋತ್ಸವದಲ್ಲಿ ಪವಾಡ ಪುರುಷ ಶಾಂತೇಶ್ವರ ಜೀವನ ಚರಿತ್ರೆ ಸಂಗೀತ ರೂಪದಲ್ಲಿ ಅನಾವರಣ ಗೊಂಡಿತು. ಶಿಕ್ಷಕ ದಶರಥ ಕೋರೆ ನಿರ್ದೇಶನದಲ್ಲಿ ಶಾಂತೇಶ್ವರರ ಪವಾಡ ಅವರ ಜೀವನ ಐಕ್ಯವಾದ ದೃಶ್ಯಗಳನ್ನು ಮನೋಜ್ಞ ವಾಗಿ ಮಕ್ಕಳು ಅಭಿನಯಿಸಿದರು. ಜಾತ್ರೆ ವೈಶಿಷ್ಟ್ಯ ಗಳಾದ ನಂದಿಕೋಲು ಕೂಸು ಹಾರಿಸುವುದು, ಚಮತ್ಕಾರ ಅಕ್ಕಿ ಪವಾಡ ಗಳೊಂದಿಗೆ ಛತ್ರಿ, ಛಾಮರ, ಚೌರ, ಹಗಲು ದಿವಟಿಗೆ, ಪತಾಕೆ, ಜಂಗಿ ನಿಕಾಲಿ ಕುಸ್ತಿ, ಮದ್ದು ಸುಡುವುದು, ವಾದ್ಯ ವೈಭವದ ಪಲ್ಲಕ್ಕಿ ಸುಮಂಗಲಿಯರಿಂದ ಇಡೀ ವೇದಿಕೆ ವಿಧ್ಯಾರ್ಥಿಗಳ ಅಭಿನಯದಿಂದ ಪ್ರಶಂಸೆನಿಯವಾಗಿ ಅಭಿನಯಸಲ್ಪಿಟಿತ್ತು. ಸರ್ಜಿಕಲ್ ದಾಳಿಯ ಕಥಾ ಹಂದರವಿರುವ ವೀರಯೊಧರ ಪಾತ್ರಗಳಿಂದ ಅಭಿನಯ ಸಲ್ಪಟ್ಟಿರುವ ಕಿರು ನಾಟಕ ಜನಮೆಚ್ಚುಗೆ ಗಳಿಸಿತು.
ವೇದಿಕೆ ಯಲ್ಲಿ ಅಗ್ನಿ ಬ್ರಹ್ಮೊಸ್ ಮಿಸೈಲ್ ಮಾದರಿ ತೋಪುಗಳ ಘರ್ಜನೆ ಮೊಳಗಿತು. ನಡೆದಾಡುವ ದೇವರು ಸಿದ್ದೇಶ್ವರ ಕುರಿತು ಜೀವನ ಚರಿತ್ರೆ ಹಾಡು ಅಭಿನಯ ಗೀತೆಯಾಗಿ ಹೊರಹೊಮ್ಮಿ ಜನರ ಕಣ್ಣಲ್ಲಿ ಕಣ್ಣೀರು ನೀರು ತರಿಸಿತು. ಹೊಸ ಇತಿಹಾಸ ಸೃಷ್ಟಿ ಸಿದ ಸರಕಾರಿ ಶಾಲೆ ಕುರಿತು ಶಾಸಕರು ಮೆಚ್ಚುಗೆ ವ್ಯಕ್ತ ಪಡಿಸಿದರು.