ಮೋಬೈಲ್ ನಿಂದ ಮಕ್ಕಳಿಗೆ ದೂರವಿಡಿ : ವಿಶ್ವರಾಧ್ಯ ಶ್ರೀ
ಅಫಜಲಪುರ:ಇಳಿ ವಯಸ್ಸಲ್ಲಿ ಹೆತ್ತವರನ್ನು ಮಕ್ಕಳಂತೆ ಪೋಷಣೆ ಮಾಡಿ ವಿದ್ಯೆ ಮತ್ತು ಸಂಸ್ಕಾರ ಒಂದಾದರೆ ಆದರ್ಶ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ತಿಳಿಸಿದರು.
ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮದಲ್ಲಿ ಶ್ರೀ ಮಹಾಂತಮ್ಮ ಯಶವಂತರಾವ್ ಪಾಟೀಲ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆಯ ಅಡಿಯಲ್ಲಿ ನಡೆಯುವ ಜ್ಞಾನಜ್ಯೋತಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಮತ್ತು ಜ್ಞಾನಸಿಂಧು ನವೋದಯ, ಸೈನಿಕ ಕೋಚಿಂಗ್ ಸೆಂಟರ್ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ,ಬದುಕು ಪರಿಪೂರ್ಣವಾಗಬೇಕಾದರೆ ಮನಸ್ಸು ಪರಿಶುದ್ದವಾಗಿರಬೇಕು.ಅದರಲ್ಲೂ ವಿದ್ಯೆ ಮತ್ತು ವಿನಯಗಳು ಎಲ್ಲರೂ ಬದುಕಿನಲ್ಲಿ ಮೈಗೂಡಿಸಿಕೊಂಡರೆ ಬುದಕಿಗೆ ಶ್ರೇಯಸ್ಸು ಬರಲು ಸಾಧ್ಯವಿದೆ.ಹಿಂದಿನ ಕಾಲದಲ್ಲಿ ಗ್ರಾಮೀಣ ಭಾಗಗಳಲ್ಲಿ ಶಾಲೆಗಳಿರಲಿಲ್ಲ.ಹೀಗಾಗಿ ಅನಕ್ಷರತೆ ಹೆಚ್ಚಾಗಿತ್ತು.ಈಗ ಶಿಕ್ಷಣ ಪ್ರೇಮಿಗಳ ಸೇವಾ ಮನೋಭಾವ ಮತ್ತು ಸಾಹಸದಿಂದ ಹೆಚ್ಚಿನ ಶಾಲೆಗಳು ಹುಟ್ಟಿಕೊಳ್ಳುತ್ತಿವೆ.ಹೀಗಾಗಿ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರಕುವಂತಾಗಿದೆ ಎಂದ ಅವರು ಮಕ್ಕಳ ಪಾಲಕರು ನಿಮ್ಮ ದೈನಂದಿನ ಕೆಲಸ ಕಾರ್ಯಗಳ ಜತೆಗೆ ಮಕ್ಕಳ ಚಲನವಲನಗಳ ಮೇಲೆ ನೀಗಾ ಇಡಿ,ಮಕ್ಕಳಿಗೆ ಸರಿಯಾದ ಸಂಸ್ಕಾರ ನೀಡಿ ಇಲ್ಲದಿದ್ದರೆ ಭವಿಷ್ಯದಲ್ಲಿ ಮಕ್ಕಳು ನಿಮ್ಮ ಕೈಗೆಟುಕದಷ್ಟು ದುಬಾರಿಯಾಗಲಿದ್ದಾರೆ.ಸಂಸ್ಥೆಯ ಕಾರ್ಯದರ್ಶಿ ಗುಂಡೇರಾವ್ ದೇಶಮುಖ ದಂಪತಿಗಳಿಂದ ಈ ಸಂಸ್ಥೆ ಉತ್ತಮ ರೀತಿಯಲ್ಲಿ ಶಿಕ್ಷಣ ಜತೆಗೆ ಸಂಸ್ಕಾರವು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಮ್ಮರವಾಗಿ ಈ ಭಾಗದಲ್ಲಿ ಬೆಳೆಯಲಿ ಎಂದರು.
ಕಲಬುರಗಿ ಉತ್ತರ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ್ ಸೊನ್ನ ಮಾತನಾಡಿ,ಕೇವಲ 40 ಮಕ್ಕಳಿಂದ ಪ್ರಾರಂಭ ಮಾಡಿದ ಈ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದ ನಿಂತಿರುವುದು ಸಂತಸದ ವಿಷಯವಾಗಿದೆ.ಗ್ರಾಮ ಗಾತ್ರದಲ್ಲಿ ಸಣ್ಣದಾಗಿದ್ದರೂ ಕೂಡ ಇಲ್ಲಿನವರ ಮನಸ್ಸು ಬಹಳ ದೊಡ್ಡದಾಗಿದೆ.ಸದಾ ಶಿಕ್ಷಣಕ್ಕೆ ಒತ್ತು ನೀಡುವ ಈ ಊರಿನವರ ಪ್ರೋತ್ಸಾಹ,ಪ್ರೇರಣೆಯಿಂದ ಇದು ಸಾಧ್ಯವಾಗಿದೆ ಎಂದರು.
ಸಿ.ಆರ್.ಪಿ ಸಿದ್ದಪ್ಪ ಬಿರಾದಾರ ಮಾತನಾಡಿ,ಕುಟುಂಬದ ಏಳಿಗೆ ಶಿಕ್ಷಣವನ್ನು ಅವಲಂಬಿಸಿದೆ ಗ್ರಾಮಸ್ಥರು ತಮ್ಮ ಮಕ್ಕಳಿಗೆ ಶಿಕ್ಷಣ ಜತೆಗೆ ಸಂಸ್ಕಾರ ಕೊಡಿಸುವ ಕೆಲಸ ಮಾಡಬೇಕು.ಈ ಭಾಗದಲ್ಲಿ ಜ್ಞಾನ ಜ್ಯೋತಿ ಶಿಕ್ಷಣ ಸಂಸ್ಥೆಯು ಉತ್ತಮ ಶಿಕ್ಷಣ ನೀಡುವ ಮೂಲಕ ಹೆಸರುವಾಸಿಯಾಗಿದೆ ಎಂದರು.
ಕಾರ್ಯಕ್ರಮಕ್ಕೆ ಪ್ರಥಮ ದರ್ಜೆ ಗುತ್ತಿಗೆದಾರರಾದ ಎಸ್.ವೈ.ಪಾಟೀಲ್ ಉದ್ಘಾಟಿಸಿದರು.ವೇ.ಗುರುಪಾದಯ್ಯ ಚರಂತಿಮಠ,ಸಿದ್ದಯ್ಯ ಆಕಾಶಮಠ,ಕಲ್ಯಾಣಿ ಸಿಂದಗೇರಿ,ಶಿವರುದ್ರ ಬಬಲಾದ,ಮಾಳಪ್ಪ ಬಿದನೂರ,ನವಿನಗೌಡ ಪಾಟೀಲ್,ಪುಜಾ ಸಿ.ಐ,ಶರಣಬಸು ದೇಶಮುಖ,ಶರಣಬಸು ದೇಶಮುಖ,ಶಿವಪುತ್ರ ಜೇವರ್ಗಿ,ಸಿದ್ರಾಮಯ್ಯ ಹಿರೇಮಠ,ಭಾಗ್ಯವಂತಿ ಆಯೋರ, ಸಿದ್ದು ತೊನಶ್ಯಾಳ,ಸಂಸ್ಥೆಯ ಅಧ್ಯಕ್ಷೆ ಗಂಗಾಶ್ರೀ ದೇಶಮುಖ, ಕಾರ್ಯದರ್ಶಿ ಗುಂಡೇರಾವ್ ದೇಶಮುಖ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


















