ಲಿಂಗಸೂಗೂರು: ಕರ್ನಾಟಕ ರಕ್ಷಣಾ ವೇದಿಕೆ ಲಿಂಗಸುಗೂರ ತಾಲೂಕ ಘಟಕದ ವತಿಯಿಂದ ಜಲಾನಿ ಪಾಷ ಅವರ ನೇತೃತ್ವದಲ್ಲಿ ತಾಲೂಕಿನ ನಾರಾಯಣಪುರ ಜಲಾಶಯದ ಮುಂದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರಿನ ರಾಷ್ಟ್ರೀಯ ಉದ್ಯಾನವನ ನಿರ್ಮಿಸಿ 101 ಅಡಿ ಎತ್ತರದ ಉಕ್ಕಿನ ಪುತ್ಥಳಿ ನಿರ್ಮಾಣ ಮಾಡಬೇಕೆಂದು ಕರವೇ ಕಾರ್ಯಕರ್ತರು ಪಟ್ಟಣ ದಲ್ಲಿ ಬ್ರಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಂತರ ತಹಶೀಲ್ದಾರ ಬಲರಾಮ ಕಟ್ಟಿಮನಿ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುದಗಲ್ ಕ.ರ.ವೇ. ಅಧ್ಯಕ್ಷ ಎಸ್.ಎ.ನಯೀಮ್ ಮಾತನಾಡಿ ಕನ್ನಡ ನಾಡಿನ ವರ ನಟ ಡಾ॥ರಾಜಕುಮಾರ್ ಅವರ ಸುಪುತ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರು ಬಡವರಿಗೆ, ನಿರ್ಗತಿಕರಿಗೆ, ಸಹಾಯ ಮಾಡಿದ್ದಾರೆ. ಅನಾಥರಿಗೆ ಇಪ್ಪತ್ತಕ್ಕೂ ಹೆಚ್ಚು ವೃದ್ದಾಶ್ರಮಗಳನ್ನು ತೆರೆದು ಅವರ ಬದುಕಿಗೆ ಆಸರೆ ಯಾಗಿದ್ದಾರೆ. ಅಂತಹ ಮಹಾ ನಾಯಕ ನಟ ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಆಧರಿಸಿ ಪುನೀತ್ ರಾಷ್ಟ್ರೀಯ ಉದ್ಯಾನವನ ನಿರ್ಮಾಣ ಮಾಡುವುದರಿಂದ ಸರಕಾರಕ್ಕೆ ಆದಾಯದ ಮೂಲ ಸಹ ಆಗುತ್ತದೆ. ಮತ್ತು ಪುನೀತ್ ಅವರ ಹೆಸರು ಅಜರಾಮರವಾಗಿ ಉಳಿಯಲಿದ್ದು ಅವರಿಗೆ ಗೌರವ ಸಲ್ಲಿಸಿದ ಹಾಗೆ ಸಹ ಆಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಜಿಲಾನಿ ಪಾಷ, ತಹಶೀಲ್ದಾರ ಬಲರಾಮ್ ಕಟ್ಟಿಮನಿ, ಸಿಪಿಐ ಮಹಾಂತೇಶ ಸಜ್ಜನ, ಹನುಮಂತ ನಾಯಕ, ಸಾಬು ಹುಸೇನ, ರವಿಕುಮಾರ ಬರಗುಡಿ, ನಾಗರಾಜ ನಾಯಕ, ಬಾಲಪ್ಪ ನಾಗರಹಾಳ, ಸಂಗಪ್ಪ ಹೂನೂರ, ಅಜೀಜ್ ಪಾಶ, ಇಮಾಮ ಹುಸೇನ್ ಉಪಸ್ಥಿತರಿದ್ದರು.