VOJ ನ್ಯೂಸ್ ಡೆಸ್ಕ್:
ರಷ್ಯಾ ಉಕ್ರೇನ್ ಕದನ ಹಿನ್ನಲೆಯಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿಯೋರ್ವ ಸಾವನ್ನೊಪ್ಪಿದ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಎನ್ನುವ ವಿದ್ಯಾರ್ಥಿ ಕಳೆದ 4 ವರ್ಷಗಳಿಂದ ಉಕ್ರೇನ್ ನ ಕಾರ್ಖೀವ್ ನಲ್ಲಿ ಓದುತ್ತಿದ್ದ. ಕಾರ್ಖೀವ್ ನಿಂದ ರೆಲ್ವೆ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ರಷ್ಯಾದ ಶೆಲ್ ದಾಳಿಗೆ ಮೃತಪಟ್ಟಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆಯಿಂದ ಮಾಹಿತಿ ದೊರತಿದೆ.
ಕಾರ್ಖೀವ್ ನಲ್ಲಿ ಐದು ಜನ ಸ್ನೇಹಿತರೊಂದಿಗೆ ಇದ್ದ ನವೀನ್ ಬೆಳಿಗ್ಗೆ ಉಪಹಾರ ತರಲು ತೆರಳಿದ ಸಂದರ್ಭದಲ್ಲಿ ರಷ್ಯಾದ ಶೆಲ್ ದಾಳಿಗೆ ಬಲಿಯಾಗಿದ್ದಾರೆ. ಇನ್ನು ನವೀನ್ ಮೃತದೇಹ ಕಾರ್ಖೀವ್ ನ ಶವಗಾರದಲ್ಲಿ ಇರಿಸಲಾಗಿದೆ ಎನ್ನಲಾಗುತ್ತಿದೆ.