ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆಯಿಂದ ಪ್ರತಿಭಟನೆ
ವರದಿ ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು: ಪಟ್ಟಣದ ಅರಣ್ಯ ಇಲಾಖೆ ಕಚೇರಿ ಮುಂಭಾಗ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ರೈತರು ಪ್ರತಿಭಟನೆ ನಡೆಸಿದರು.
ಆಲಂಬಾಡಿ, ಜಂಬುಕಾ, ಪಟ್ಟಿ ಮಾರಿ ಕೊಟ್ಟೆ, ಪುದೂರ್‌ಅಂಬುಕಾ ಪಟ್ಟಿ ವಿವಿಧ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರದಿಂದ ಸಿಗುವ ಸೌಲಭ್ಯ ತಡೆಗಟ್ಟುತ್ತಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಭರವಸೆ
ನೀಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಗೌಡೆಗೌಡ ಮಾತನಾಡಿ ಮಲೆ ಮಹದೇಶ್ವರ ವನ್ಯ ಧಾಮ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿ ಮಾಡಬಾರದು, ಅರಣ್ಯದೊಳಗೆ ವ್ಯವಸಾಯ ಮಾಡುತ್ತಿರುವ ರೈತರ ಜಮೀನುಗಳನ್ನು ಜಂಟಿ ಸರ್ವೆ ಮಾಡಿಸಿ ಹಕ್ಕುಪತ್ರ ನೀಡಲು ಅನುಕೂಲ ಮಾಡಿಕೊಡಬೇಕು, ಆನೆ ಸೇರಿದಂತೆ ವನ್ಯಜೀವಿಗಳು ರೈತರ ಜಮೀನುಗಳಿಗೆ ಬಾರದಂತೆ ಸೋಲಾರ್ ಬೇಲಿ ಸಮೇತ ರೈಲ್ವೆ ಬ್ಯಾರಿ ಬ್ಯಾರಿಕೇಡ್ ಬೇಲಿಯನ್ನು ಅರಣ್ಯದ ಗಡಿಯುವುದಕ್ಕೂ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಹನೂರು ತಾಲೂಕು ಘಟಕದ ಅಧ್ಯಕ್ಷರಾದ ಅಮ್ಜದ್ ಖಾನ್ ಮಾತನಾಡಿ ಹೂಗ್ಯಂ ಗ್ರಾಮದ ರೈತರೊಬ್ಬರ ಜಮೀನಿಗೆ ಆನೆ ದಾಳಿ ಮಾಡಿದಾಗ ನಿರ್ಲಕ್ಷ ವಹಿಸಿದ ಅರಣ್ಯ ಇಲಾಖೆಯ ನೌಕರರಿಗೆ ಹಾಗೂ ರೈತ ಮಹಿಳೆಯರು ಇಬ್ಬರು ಮೇಲು ಸಹ ಕೇಸ್ ದಾಖಲಾಗಿದ್ದು ಇದನ್ನು ಇಬ್ಬರು ಸಹ ವಾಪಸ್ ಪಡೆಯಬೇಕು ಹಾಗೂ ಅರಣ್ಯದೊಳಗೆ ಜಾನುವಾರುಗಳ ಪ್ರವೇಶ ನಿರ್ಬಂಧವನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಮಹಿಳಾ ಕಾರ್ಯದರ್ಶಿ ಪೊಂಗುಡಿ ಮಾತನಾಡಿ ಸ್ವಾತಂತ್ರ್ಯ ಬಂದು ಹಲವು ವರ್ಷಗಳಾದರೂ ಸಹ ನಮಗೆ ಸ್ವಾತಂತ್ರ್ಯವಿಲ್ಲದಂತೆ ಆಗಿದೆ ನಾವು ಇನ್ನೂ ಸಹ ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್, ರಸ್ತೆ ಇನ್ನಿತರ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟಗಳನ್ನು ಮಾಡುತ್ತಿದ್ದೇವೆ. ಅಧಿಕಾರಿಗಳು ಆದಷ್ಟು ಬೇಗ ಇದಕ್ಕೆ ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿದರು.
ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಹಾಗೂ ಆಗಸ್ಟ್ 14ರ ಒಳಗೆ ತಾಲೂಕಿನ ಗಡಿ ಗ್ರಾಮದ ಅಲಂಬಾಡಿಯಲ್ಲಿ ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆತಂದು ಸಭೆ ನಡೆಸಿ ರೈತ ಮುಖಂಡರುಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಚೈತ್ರ ತಾಲೂಕು ದಂಡಾಧಿಕಾರಿ
ಮೂಲಭೂತ ಸೌಕರ್ಯಗಳಿಗಾಗಿ ರೈತರು ಮನವಿ ನೀಡಿದ್ದಾರೆ ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಶಿಫಾರಸು ಮಾಡಲಾಗುತ್ತದೆ.
ಸುರೇಂದ್ರ. ಡಿಸಿಎಫ್ ಕಾವೇರಿ ವನ್ಯಜೀವಿ ವಿಭಾಗ
ಈ ವೇಳೆ ತಾಲೂಕು ಘಟಕದ ಸದಸ್ಯರುಗಳಾದ ರವಿ ನಾಯ್ಡು, ತಂಗವೇಲು, ಪಳನಿಸ್ವಾಮಿ, ಮಣಿ ಕೂಡೂರು, ವೆಂಕಟೇಶ್, ವೀರಣ್ಣ, ರತ್ನವೇಲು, ಪೊಂಗುಡಿ ,ಶಾಂತಿ, ದಂಟಳ್ಳಿ ಶಿವು , ಪ್ರಿಯದರ್ಶಿನಿ ಇನ್ನು ಮುಂತಾದವರು ಹಾಜರಿದ್ದರು.