ಕಾಂಗ್ರೆಸ್ ಪಕ್ಷದ ಎಲ್ಲಾ ಗ್ಯಾರಂಟಿಗಳು ಪ್ರತಿ ವರ್ಗದ ಜನರಿಗೆ ತಲುಪಿದೆ ಕಾಂಗ್ರೆಸ್ ಪಕ್ಷ ಯಾವುದೇ ಜಾತಿ ಧರ್ಮ ನೋಡದೆ ಎಲ್ಲರಿಗೂ ಯೋಜನೆಗಳನ್ನು ನೀಡಿದ್ದೇವೆ.
ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ನೂತನ ಸದಸ್ಯರ ಪದಗ್ರಹಣ ಶಕ್ತಿ ಸಮಾವೇಶ
ವರದಿ :ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ ; ಕಾಂಗ್ರೆಸ್ ಪಕ್ಷದ ಎಲ್ಲಾ ಗ್ಯಾರಂಟಿಗಳು ಪ್ರತಿ ವರ್ಗದ ಜನರಿಗೆ ತಲುಪಿದೆ ಕಾಂಗ್ರೆಸ್ ಪಕ್ಷ ಯಾವುದೇ ಜಾತಿ ಧರ್ಮ ನೋಡಿಲ್ಲವೆಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಮಾಜಿ ಶಾಸಕಿ ಶ್ರೀಮತಿ ಸೌಮ್ಯ ರೆಡ್ಡಿ ಹೇಳಿದರು ಬುಧುವಾರ ಪಟ್ಟಣದ ಟಾಪ್ ಇನ್ ಟೌನ್ ಹಾಲ್ ನಲ್ಲಿ ನಡೆದ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ನೂತನ ಸದಸ್ಯರ ಪದಗ್ರಹಣ ಶಕ್ತಿ ಸಮಾವೇಶ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು ರಾಜ್ಯದ ಮಹಿಳೆಯರ ಕೈ ಬಲಪಡಿಸಲು ಕಾಂಗ್ರೆಸ್ ಸರಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಪ್ರತಿ ತಿಂಗಳು ೨ ಸಾವಿರೂ ಗೃಹ ಲಕ್ಷ್ಮೀ ಯೋಜನೆ ಮಾಡಿದೆ ಅದರಿಂದ ಮನೆ ಖರ್ಚು, ಮಕ್ಕಳ ಶಾಲಾ ಫೀಜು ಸೇರಿದಂತೆ ಮಹಿಳೆ ಸ್ವಾವಲಂಬಿಯಾಗಿ ಬದಕಲು ಶಕ್ತಿ ನೀಡಿದೆ ,ಯುವಕರಿಗೆ ಯುವನಿಧಿ ನೀಡಿದೆ ಕಾಂಗ್ರೆಸ್ ಪಕ್ಷದ ಈ ಜನಪಯೋಗಿ ಕಾರ್ಯಗಳನ್ನು ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಬೇಕು ಕಾಂಗ್ರೆಸ್ ಪಕ್ಷದ ಕೈ ಬಲಪಡಿಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೆ ಎಸ್ ಡಿ ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್ ನಾಡಗೌಡ ಅಪ್ಪಾಜಿ ಹಾಗೂ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಲ್ಲವಿ ನಾಡಗೌಡ ಕಾಂಗ್ರೆಸ್ ಪಕ್ಷದ ಪಂಚ ಗ್ಯಾರಂಟಿ ಮೂಲಕ ಜನರಿಗೆ ನೆರವು ನೀಡಿದೆ ಮಹಿಳಾ ಸಬಲಿಕರಣಕ್ಕೆ ಮಹಿಳೆಯರಿಗೆ ರಾಜಕೀಯದಲ್ಲಿ ವಿಶೇಷ ಮೀಸಲಾತಿ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಪಂಚ ಗ್ಯಾರಂಟಿ ಸಮಿತಿಯ ತಾಲೂಕ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ವೈ ಹೆಚ್ ವಿಜಯಕರ, ವಿಜಯಲಕ್ಷ್ಮಿ ಇರಕಲ್ ಮಾತನಾಡಿದರು .
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮಹಿಳೆಯರ ಪದಗ್ರಹಣ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುತಾರನಾಳ, ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ,ಬಿ ಕೆ ಬಿರಾದಾರ, ಬಾಪುರಾವ ದೇಸಾಯಿ, ವಾಯ್ ಎಚ್ ವಿಜಯಕರ, ವಿಜಯಲಕ್ಷ್ಮಿ ಇರಕಲ್ಲ,ನೀಲಮ್ಮ ಪಾಟೀಲ,(ಬೋರಾವತಿ) ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು ಶೋಭಾ ಶೆಳ್ಳಗಿ ಸ್ವಾಗತಿಸಿದರು ಅಕ್ಷತಾ ಚಲವಾದಿ ನಿರೂಪಿಸಿ ವಂದಿಸಿದರು.