ಇಂಡಿ : ತಾಲ್ಲೂಕಿನ ಸುಕ್ಷೇತ್ರ ಅಹಿರಸಂಗ ಮತ್ತು ಲಚ್ಯಾಣ ಗ್ರಾಮದ ಕೊರವಂಜಿ ಮಹೋತ್ಸವ ಜ.೧೭ ರಂದು ಜರುಗಲಿದೆ. ಕುದರಿ ಗೋಡಿಹಾಳ, ನಾಯ್ಕೊಡಿ ವಸ್ತಿಯ ಮದ್ಯದಲ್ಲಿ ಲಚ್ಯಾಣದಿಂದ ಇಂಡಿಯ ರಸ್ತೆಯ, ಅಹಿರಸಂಗ ಹಾಗೂ ಆಳೂರ ಗೇಟ್ ಹತ್ತೀರುವ ಇರುವ ಕೊರವಂಜಿದೇವಿ ಜಾತ್ರಾ ಮಹೋತ್ಸವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ಪತ್ರಿಕಾ ಪ್ರಕಟಣೆಗೆ ಜಾತ್ರಾ ಕಮಿಟಿ ಆಡಳಿತ ಮಂಡಳಿ ಅವರು ಮಾಹಿತಿ ನೀಡಿದ್ದಾರೆ.
ಬೆಳಿಗ್ಗೆ ಕೊರವಂಜಿದೇವಿಗೆ ಪಂಚಾಮೃತ್ ಅಭಿಷೇಕ, ಉಡಿ ತುಂಬುವ,ಮುತೈದರಿಂದ ಅಂಬಲಿ ಬಿಂದಗಿ ಕಾರ್ಯಕ್ರಮ ಜರಗುವುದು. ನಂತರ ೧೦೦೧ ಮುತೈದೇಯರಿಗೆ ಉಡಿ ತುಂಬುವ ಕಾರ್ಯಕ್ರಮ ಪೂಜ್ಯ ಡಾ. ವೃಷಭಲಿಂಗ ಮಹಾಶಿವಯೋಗಿಗಳು ಬಂಥನಾಳ, ಶ್ರೀ ಷ ಬ್ರ ಅಭಿನವ ರಾಚೋಟೇಶ್ವರ ಶಿವಾಚಾರ್ಯರರು ತಡವಲಗಾ, ಶ್ರೀ ಷ.ಬ್ರ ಮಲ್ಲಿಕಾರ್ಜುನ ಶಿವಾಚಾರ್ಯರರು ಅವರಿಂದ ಜರುಗುವುದು. ಬೆಳಿಗ್ಗೆ ೧೦ ಘಂಟೆಗೆ ರೇಣುಕಾ ಮಣ್ಣೂರ, ಮಾಳಿಂಗರಾಯ ಗಾಯನ ಸಂಘ ಮಣ್ಣೂರ ತಾ. ಅಫಜಲಪುರ ಹಾಗೂ ಶಾಂತಕ್ಕ ಅಮೋಘಸಿದ್ದ ಗಾಯನ ಸಂಘ ಹಡಲಗೇರಿ ತಾ. ಮುದ್ದೇಬಿಹಾಳ ಇವರಿಂದ ಸುಪ್ರಸಿದ್ಧ ಡೊಳ್ಳಿನ ಪದ ಜರಗುವುದು ಎಂದು ತಿಳಿಸಿದರು. ಉದ್ಘಾಟಕರಾಗಿ ಶಾಸಕ ಯಶವಂತರಾಯಗೌಡ ಪಾಟೀಲ, ಅಧ್ಯಕ್ಷತೆ ದಯಾಸಾಗರ ಪಾಟೀಲ, ಮುಖ್ಯ ಅತಿಥಿ ಕಾಸುಗೌಡ ಬಿರಾದರ ಹಾಗೂ ಬಿ.ಡಿ. ಪಾಟೀಲ ಭಾಗವಹಿಸಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೊರಂಜಿದೇವಿಯ ಆಶೀರ್ವಾದ ಪಡೆಯಬೇಕು ಎಂದು ರೇವಣಸಿದ್ದ ಹತ್ತಳ್ಳಿ ಮಾಹಿತಿ ನೀಡಿದರು.