ರೈತ ಸಂಘದ ಗ್ರಾಮ ಘಟಕ ನಾಮ ಫಲಕ ಉದ್ಘಾಟನೆ ಕಾರ್ಯಕ್ರಮ.
ಹನೂರು : ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿ ನೂತನವಾಗಿ ಕರ್ನಾಟಕ ರಾಜ್ಯ ರೈತ ಸಂಘದ ಘಟಕವನ್ನ ಕೊಳ್ಳೇಗಾಲ ತಾಲ್ಲೂಕುಅಧ್ಯಕ್ಷ ಶಿವಮಲ್ಲು ರವರು ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿದರು.
ರೈತ ಗೀತೆ ಹಾಡಿ,ರೈತ ಸಂಘದ ನೂತನ ನಾಮಫಲಕ ವನ್ನ ಉದ್ಘಾಟನೆ ಮಾಡಿದರು. ಇದೇ ವೇಳೆ ಮಾತನಾಡಿದ ಹನೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷರ ಅಮ್ಜಾದ್ ಖಾನ್,ನಮಗೆ ಮತದಾನ ಮಾಡುವ ಹಕ್ಕಿದೆ, ಆದರೆ ಮೂಲಭೂತ ಸೌಕರ್ಯ ಪಡೆಯುವ ಹಕ್ಕಿಲ್ಲ. ಒಡೆಯರಪಾಳ್ಯ ದಲ್ಲಿ ಟಿಬೆಟಿಯನ್ನರಿಗೆ ಸಮರ್ಪಕ ರಸ್ತೆ, ವಸತಿ ಮುಂತಾದ ಮೂಲಭೂತ ಸೌಕರ್ಯ ಒದಗಿಸುತ್ತದೆ. ಆದರೆ ಅವರಿಗೆ ಮತದಾನದ ಹಕ್ಕಿಲ್ಲ , ನಮಗೆ ಮತದಾನದ ಹಕ್ಕಿದ್ದರು ಸೌಕರ್ಯ ನೀಡುತ್ತಿಲ್ಲ. ಇಡೀ ದೇಶದಲ್ಲಿ ಟವರ್ ಇದೆ, ಆದರೆ ಪೆದ್ದನಪಾಳ್ಯ ಹಾಗೂ ಕೂಡಲೂರು ಗ್ರಾಮಗಳಲ್ಲಿ ಟವರ್ ಇಲ್ಲ.ಈ ಗ್ರಾಮದ ಸಮಸ್ಯೆಗಳಿಗೆ ಎಲ್ಲರೂ ಒಟ್ಟಾಗಿ ನಿಂತು ಹೊರಟ ಮಾಡಿ ಬಗೆಹರಿಸಿಕೊಳ್ಳಬೇಕು. ನಿಮ್ಮ ಜೊತೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ರೈತ ಸಂಘದ ಪದಾಧಿಕಾರಿಗಳು ಇರುತ್ತಾರೆ. ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿ 3 ದಿನಗಳ ಕಾಲ ಪಾದಯಾತ್ರೆ ಹಮ್ಮಿಕೊಂಡು ಸರ್ಕಾರ ಇತ್ತ ಕಡೆ ಗಮನ ಹರಿಸುವ ಹಾಗೆ ಮಾಡಬೇಕು.
ಕಟ್ಟಕಡೆ ತಮಿಳುನಾಡು ಗಡಿ ಭಾಗದ ಕುಗ್ರಾಮದಲ್ಲಿ 43 ವರ್ಷಗಳ ಬಳಿಕ ರೈತ ಸಂಘಟನೆ ಉದ್ಘಾಟನೆ ಯಾಗುತ್ತಿರುವುದು ಸಂತೋಷದ ವಿಷಯ. ಇಡೀ ರಾಜ್ಯಧ್ಯಾಂತ ರೈತ ಸಂಘಟನೆ ಉದ್ಘಾಟನೆಯಾಗಿವೆ. ಸಂಘದಲ್ಲಿ ನಮ್ಮ ಕೆಲಸವನ್ನ ನಾವೇ ಮಾಡಿಕೊಳ್ಳಬೇಕು. ರೈತರ ಹಸಿರು ಶಾಲನ್ನ ಮೂರು ಪಕ್ಷದ ರಾಜಕಾರಣಿಗಳು ಹಾಕುತ್ತಾರೆ, ರೈತರ ಹಸಿರು ಶಾಲಿಗೆ ಶಕ್ತಿ ಇದೆ. ಕಳೆದ 15 ದಿನಗಳ ಹಿಂದೆ ನಾಲ್ ರೋಡ್ ನಲ್ಲಿ ರೈತ ಸಂಘಟನೆ – ಯಿಂದ ಮಾರುಕಟ್ಟೆ ತೆರೆಯಲಾಗಿದೆ. ಕಾಡು ಪ್ರಾಣಿಗಳು ಬೆಳೆ ನಾಶ ಪಡಿಸಿದರೆ, ಅರಣ್ಯ ಇಲಾಖೆಯಿಂದ ನಾವು ಪರಿಹಾರ ಪಡೆದುಕೊಳ್ಳಬೇಕು. ರೈತ ಸಂಘದಲ್ಲಿ ನಮ್ಮ ಸಮಸ್ಯೆಗಳನ್ನ ನಾವೇ ಬಗೆಹರಿಸಿಕೊಳ್ಳಲು,ನಾವೆಲ್ಲ ಒಗ್ಗಟ್ಟಾಗಿ ನಿಂತುಕೊಳ್ಳಬೇಕು ಎಂದು ಕೊಳ್ಳೇಗಾಲ ರೈತ ಸಂಘದ ಗೌಡೇಗೌಡ ತಿಳಿಸಿದರು.
ಪೆದ್ದನಪಾಳ್ಯ ಹಾಗೂ ಕೂಡಲೂರು ಸಮಸ್ಯೆಗಳು :-ಸಮಯಕ್ಕೆ ಸರಿಯಾಗಿ ಸರಿಯಾದ ವಿದ್ಯುತ್ ನೀಡುತ್ತಿಲ್ಲ, ಹಾಗೂ ದಿನಕ್ಕೆ 2-3 ಗಂಟೆಗಳ ಕಾಲ ವಿದ್ಯುತ್ ನೀಡುತ್ತಾರೆ. ವಿದ್ಯುತ್ ಕೊರತೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ. ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆದ ಬೆಳೆಗಳು ನಾಶ ಪಡಿಸುತ್ತವೆ.
ರೈತರು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಇಲ್ಲದೆ, ಬೆಳೆ ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಮಾಡಬೇಕು. ಸರಿಯಾದ ರಸ್ತೆ ಸಂಪರ್ಕ ವಿಲ್ಲ.
ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಇಲ್ಲ.
ಉತ್ತಮವಾದ, ಬಿತ್ತನೆ ಬೀಜ ಹಾಗೂ ರಾಸಾಗೊಬ್ಬರ ಸರಿಯಾಗಿ ಸಿಗುತ್ತಿಲ್ಲ. ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ ಓದಲು 20 ಕಿ ಮೀ ಹೋಗಿ ಓದಬೇಕು. ಟಿ. ಸಿ ಕೊರತೆಯಿದ್ದು ಸರಿಯಾಗಿ ವಿದ್ಯುತ್ ಇಲಾಖೆ ಸ್ಪಂದಿಸುತಿಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.
ರೈತ ಸಂಪರ್ಕ ಕೇಂದ್ರವಿಲ್ಲದೆ ದಿನನಿತ್ಯ 25 ಕಿ ಮೀ ಸಂಚರಿಸಬೇಕು ಹಾಗಾಗಿ ಈ ಭಾಗದ ರೈತರಿಗೆ ಅನುಕೂಲವಾಗುವಂತೆ ಈ ಭಾಗದಲ್ಲಿ ರೈತ ಸಂಪರ್ಕ ಕೇಂದ್ರ ತೆರೆಯಬೇಕು. ಸರ್ವರ್, ವಿದ್ಯುತ್, ನೆಟ್ವರ್ಕ್ ಸಮಸ್ಯೆ ಆದಷ್ಟು ಬೇಗ ಬಗೆಹರಿಸಿ ಕೊಡಬೇಕು ಎಂಬುದಾಗಿ ತಿಳಿಸಿದರು.
ಕೂಡ್ಲೂರು ಗ್ರಾಮ ಘಟಕದ ಗೌರವಧ್ಯಕ್ಷ ಮಾದೇಶ್, ಅಧ್ಯಕ್ಷ ಕಾಶಿ ಗೌಡ, ಉಪಾಧ್ಯಕ್ಷ , ಕಾರ್ಯದರ್ಶಿ ಮೂರ್ತಿ, ಉಪಕಾರ್ಯದರ್ಶಿ ಮಾದೇಶ್ , ಸಂಘಟನ ಕಾರ್ಯದರ್ಶಿ, ಖಜಾಂಚಿ, ಹಾಗೂ ಮುನಿಯಪ್ಪ, ಮಣಿ, ನಾಗರಾಜು, ಸೆಲ್ವಾ, ನಾಗರಾಜು, ಮುರುಗೇಶ್, ನಂಜಪ್ಪ, ಸೇರಿದಂತೆ 100ಕ್ಕೂ ಹೆಚ್ಚು ರೈತರು ನೂತನ ರೈತ ಸಂಘಕ್ಕೆ ಆಯ್ಕೆಯಾದರು.
ಇದೇ ಸಂದರ್ಭದಲ್ಲಿ ಕೊಳ್ಳೇಗಾಲ ತಾಲುಕು ಅಧ್ಯಕ್ಷ ಶಿವಮಲ್ಲು, ಕೊಳ್ಳೇಗಾಲ ಮಾಜಿ ಕಾರ್ಯದರ್ಶಿ ರವಿ ನಾಯ್ಡು, ಹನೂರು ಕಾರ್ಯದರ್ಶಿ ಗೋಪಾಲ್, ಸಂಘಟನೆ ಕಾರ್ಯಧರ್ಶಿ ಬಸವರಾಜು, ಮಾಮರದೊಡ್ಡಿ ಗ್ರಾಮ ಮಹಿಳಾ ಘಟಕದ ಅಧ್ಯಕ್ಷ ಮನೋಜಮ್ಮ, ಚೌಕತ್,ಪೆದ್ದನಪಾಳ್ಯ ಗ್ರಾಮ ಘಟಕದ ಗೌರವಧ್ಯಕ್ಷ ಸಿದ್ದಲಿಂಗ, ಅಧ್ಯಕ್ಷ ಈರಣ್ಣ ಹಾಗೂ ಪೆದ್ದನಪಾಳ್ಯ ಗ್ರಾಮ ಘಟಕದ ನೂತನ ಪದಾಧಿಕಾರಿಗಳು, ರೈತರು ಹಾಜರಿದ್ದರು.
ವರದಿ: ಚೇತನ್ ಕುಮಾರ್ ಎಲ್, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ..