ಇಂಡಿ : ಇಂದಿನ ಜಿದ್ದಾಜಿದ್ದಿನ ಜಗತ್ತಿನಲ್ಲಿ ಬಡವರು ಬಾಳು ಕರುಣಾಜನಕ, ಒಂದು ಬಡ ಕುಟುಂಬವೂ ಬದುಕಿ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೇ, ಆ ಇಡೀ ಕುಟುಂಬ ಅತ್ಯಂತ ಹರ ಸಾಹಸ ಪಡಬೇಕು ಇಂತಹ ಸಂದರ್ಭದಲ್ಲಿ ಕೊರೊನಾ ಮಹಾಮಾರಿಯ ಪ್ರಳಯ ಸದೃಶ ರುದ್ರ ನರ್ತನಕ್ಕೆ ಭಕ್ತ ಕುಂಬಾರನ ಹಸುಗೂಸು ನುಜ್ಜುಗುಜ್ಜಾದಂತೆ ಕೊವಿಡ್ ಹೊಡೆತಕ್ಕೆ ಮಾನವ ಕುಲಕ್ಕೆ ನಲುಗಿ ಹೋಗಿದೆ. ಅದು ಕುಟುಂಬಗಳು ಒಡೆಯನನ್ನು ಕಳೆದುಕೊಂಡು ಅವರ ಜೀವನ ಬಿದಿ ಪಾಲಾಗಿದೆ. ಸರಕಾರ ಅವರ ಜೀವನಪಯೋಕ್ಕಾಗಿ ಪರಿಹಾರ ಕೊಡುವುದಾಗಿ ಬರವಸೆ ಕೊಟ್ಟಿದೆ, ಆ ಭರವಸೆ ಏನಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ಸದನದಲ್ಲಿ ಚುಕ್ಕೆ ಗುರುತಿಲ್ಲದೇ ಪ್ರಶ್ನೆ ಮಾಡುವ ಮೂಲಕ ಸರಕಾರಕ್ಕೆ ಗಮನ ಸೆಳೆದರು.
ಈ ಸಂದರ್ಭದಲ್ಲಿ ಉತ್ತರಿಸಿದ ಕಂದಾಯ ಸಚಿವರು,
ಕೊವಿಡ್-19 ಸಾಂಕ್ರಾಮಿಕ ಆರೋಗ್ಯ ಇಲಾಖೆಯ ಕೊವಿಡ್ ಬುಲೆಟಿನ್ ವರದಿಯ ಪ್ರಕಾರ ಕೊವಿಡ್ ರೋಗದಿಂದ ಮೊದಲನೇ ಹಾಗೂ ದಿನಾಂಕ 03.03.2022 ರವರೆಗೆ ರಾಜ್ಯದಲ್ಲಿ ಒಟ್ಟು 39976 ಎರಡನೇ ಹಂತದಲ್ಲಿ ಮೃತಪಟ್ಟವರ ಕೋವಿಡ್ -19 ಮೃತ ಪ್ರಕರಣಗಳು ದಾಖಲಾಗಿರುತ್ತದೆ. ಸದರಿ ರೋಗದಿಂದ ಮೃತಪಟ್ಟವರ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಕೋವಿಡ್ ನಿಂದ ಕುಟುಂಬಗಳಿಗೆ ಸರ್ಕಾರ ಮೃತಪಟ್ಟ ಎಲ್ಲಾ ಪ್ರಕರಣಗಳಲ್ಲಿ ರೂ.50,000/-ಗಳ ಪರಿಹಾರ ಧನವನ್ನು ರಾಜ್ಯ ವಿಪತ್ತು ಪರಿಹಾರ (SDRF)ಯಿಂದ ನೇರ ಹಣ ಸಂದಾಯದ ಮೂಲಕ ಪರಿಹಾರ ಧನ ಹಂಚಿಕೆ ಮಾಡಲಾಗಿದೆ. ಈಗಾಗಲೇ 28266 ಅರ್ಜಿಗಳು ಸ್ವೀಕೃತವಾಗಿದ್ದು, ಜಿಲ್ಲಾಧಿಕಾರಿಗಳು ಅನುಮೋದಿಸಲಾದ 27970 ಪ್ರಕರಣಗಳಿಗೆ ತಲಾ ರೂ.50,000/-ದಂತ ಪರಿಹಾರ ವಿತರಣೆಗೆ ಕ್ರಮವಹಿಸಲಾಗಿದೆ. ಉಳಿದ 296 ಪ್ರಕರಣಗಳು ಪರಿಶೀಲನಾ ಹಂತದಲ್ಲಿದ್ದು, ಜಿಲ್ಲಾ ಮಟ್ಟದಲ್ಲಿ ಪರಿಶೀಲಿಸಿ ಅನುಮೋದನೆ ನೀಡಿದ ನಂತರ ಅರ್ಹ ಪ್ರಕರಣಗಳಿಗೆ ಶೀಘ್ರವೇ ಪರಿಹಾರ ವಿತರಿಸಲು ಕ್ರಮವಹಿಸಲಾಗುವುದು.
ಮುಂದುವರೆದು, ರಾಜ್ಯ ಸರ್ಕಾರವು ಬಿ.ಪಿಎಲ್ ಕುಟುಂಬದವರಿಗೆ ಘೋಷಿಸಿರುವ ಹೆಚ್ಚುವರಿ ರೂ.1.00 ಲಕ್ಷ ಪರಿಹಾರಕ್ಕಾಗಿ ಒಟ್ಟು 13986 ಅರ್ಜಿಗಳು ಸ್ವೀಕೃತವಾಗಿದ್ದು, ಪರಿಶೀಲನೆಯ ನಂತರ ಜಿಲ್ಲಾಧಿಕಾರಿಗಳು /ಬಿಬಿಎಂಪಿ ಜಂಟಿ ಆಯುಕ್ತರಿಂದ ಅನುಮೋದನೆಯಾದ 13860 ಪ್ರಕರಣಗಳಿಗೆ ತಲಾ ರೂ.1.00 ಲಕ್ಷ ಪರಿಹಾರವನ್ನು ಚೆಕ್ ಮೂಲಕ ಒದಗಿಸಲಾಗುವದು ಎಂದು ಉತ್ತರಿಸಿದ್ದಾರೆ. ಇನ್ನೂಳಿದ 126 ಪ್ರಕರಣಗಳು ಪರಿಶೀಲನಾ ಹಂತದಲ್ಲಿದ್ದು, ಜಿಲ್ಲಾ ಮಟ್ಟದಲ್ಲಿ ಪರಿಶೀಲಿಸಿ ಅನುಮೋದನೆ ನೀಡಿದ ನಂತರ ಅರ್ಹ ಪ್ರಕರಣಗಳಿಗೆ ಶೀಘ್ರ ಪರಿಹಾರ ವಿತರಿಸಲು ಕ್ರಮವಹಿಸಲಾಗುವುದು.
ಬಾಕಿ ಇರುವ ಪ್ರಕರಣಗಳಿಗೆ ಕೊವಿಡ್ ಸಾವು ದೃಢಪಟ್ಟಿದ್ದು, ಆರೋಗ್ಯ ಇಲಾಖೆಯ ಕಾಲಮಿತಿಯೊಳಗೆ ಪರಿಹಾರ ಧನ ದತ್ತಾಂಶದಲ್ಲಿ ಲಭ್ಯವಿಲ್ಲದ ಪ್ರಕರಣವಾದಲ್ಲಿ State Covid War Room Linelist ನಲ್ಲಿ ಸೇರ್ಪಡೆಗೊಳಿಸಿ SDRF ಮಾರ್ಗಸೂಚಿಯನ್ವಯ ಪರಿಹಾರ ಪಾವತಿಸಲು ಸರ್ಕಾರದ ಆದೇಶ ಸಂಖ್ಯೆ: ಕಂಇ 400 ಟಿಎನ್ಆರ್ 2021, ದಿನಾಂಕ: 10.01.2022 ರಲ್ಲಿ ಆದೇಶಿಸಲಾಗಿದೆ. ಅಂತೆಯೇ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಅಪರ ಜಿಲ್ಲಾಧಿಕಾರಿಗಳ login ನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಅದರಂತೆ ರಾಜ್ಯದಲ್ಲಿ ಒಟ್ಟು 17174 ಪ್ರಕರಣಗಳನ್ನು State Covid War Room
Linelist ನಲ್ಲಿ ಸೇರ್ಪಡೆಗೊಳಿಸಿದ್ದು, ಈ ಪೈಕಿ ಪರಿಶೀಲಿಸಿ
ಜಿಲ್ಲಾಧಿಕಾರಿಗಳು ಅನುಮೋದಿಸಲಾದ 12481 ಪ್ರಕರಣಗಳಿಗೆ ತಲಾ ರೂ.50,000 ದಂತೆ ಪರಿಹಾರ ವಿತರಣೆಗೆ ಕ್ರಮವಹಿಸಲಾಗಿದೆ. ಉಳಿದ 4693 ಪ್ರಕರಣಗಳು ಪರಿಶೀಲನಾ ಹಂತದಲ್ಲಿದ್ದು, ಜಿಲ್ಲಾ ಮಟ್ಟದಲ್ಲಿ ಪರಿಶೀಲಿಸಿ ಅನುಮೋದನೆ ನೀಡಿದ ನಂತರ ಅರ್ಹ ಪ್ರಕರಣಗಳಿಗೆ ಶೀಘ್ರವೇ ಪರಿಹಾರ
ವಿತರಿಸಲು ಕ್ರಮವಹಿಸಲಾಗುವುದು ಎಂದು ಹೇಳಿದರು.