ಇಂಡಿ : ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರತಿಯೊಬ್ಬರೂ ಮುಂದಾಗಬೇಕು. ಸೌಹಾರ್ದತೆಗೆ ದಕ್ಕೆ ತರುವ, ಕಾನೂನು ಉಲ್ಲಂಗನೆ ಮಾಡುವ ಕೆಟ್ಟ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದು ಡಿ.ವಾಯ್.ಎಸ್.ಪಿ. ಶ್ರೀಧರ ದೊಡ್ಡಿ ಹೇಳಿದರು. ಪಟ್ಟಣದ ಪೋಲಿಸ್ ಉಪವಿಭಾಗ ಕಛೇರಿಯ ಸಭಾಭವನದಲ್ಲಿ ಆಯೋಜನೆ ಗೊಳಿಸಿರುವ ಕಾನೂನು ಸುವ್ಯವಸ್ಥೆ ಕಾಪಾಡಲು ಪೋಲಿಸರಿಗೆ ಸಹಕಾರ ನೀಡಿ ಎಂಬ ಕಾರ್ಯಕ್ರಮದಲ್ಲಿ ಮಾತಾನಾಡಿದರು.
ಇದೇ ಸಂದರ್ಭದಲ್ಲಿ ರೈತ ಮೂರ್ಚಾ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ವಿನಾಯಕ ಗುಣಸಾಗರ, ಸಿದ್ದಲಿಂಗ ಹಂಜಗಿ, ಇಲಿಯಾಸ್ ಬೊರಾಮಣಿ, ಪ್ರಶಾಂತ ಕಾಳೆ, ರೈಸ್ ಅಷ್ಟೇಕರ, ಅಯೂಬ್ ನಾಟೀಕಾರ ಮಾತಾನಾಡಿದ ಅವರು, ತಾಲ್ಲೂಕಿನ ಶಾಂತಿ ಸೌಹಾರ್ದತೆಗೆ ಮತ್ತು ಕಾನೂನಿಗೆ ದಕ್ಕೆ ತಂದರೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದರು. ಎಲ್ಲೊ ಕುಂದಾಪುರ ಉಡುಪಿ ಯಲ್ಲಿ ನಡೆಯುವ ಗಲಭೆಗಳು ತಾಲೂಕಿಗೆ ಸ್ಪರ್ಷಿಸದಂತೆ ನೋಡಿಕೊಳ್ಳಬೇಕು. ಈಗಾಗಲೇ ಎರಡು ವರ್ಷ ಕೊರೊನಾ ಕಾಟದಿಂದ ಮಕ್ಕಳ ಭವಿಷ್ಯ ತಾಳ ತಪ್ಪಿದಂತಾಗಿ ಶಿಕ್ಷಣದ ಗುಣಮಟ್ಟ ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿದೆ. ಅರಿಯದ ಮುಗ್ಧ ಮಕ್ಕಳು ಹಿಜಾಬ್, ಕೇಸರಿ,ನೀಲಿ ಎಂಬ ಹೆಸರಲ್ಲಿ ಕೆಟ್ಟ ಚಟುವಟಿಕೆಗಳಿಗೆ ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲಾ. ಒಂದು ವೇಳೆ ಮಕ್ಕಳ ಮೇಲೆ ದೂರು ದಾಖಲೆಯಾದರೇ ಅವರ ಭವಿಷ್ಯ ಮಣ್ಣು ಪಾಲು ಆಗುತ್ತೆ. ಇದು ಎಲ್ಲೊ ಒಂದು ಕಡೆ ರಾಜಕೀಯ ವಾಸನೆ ಖಂಡಿದ್ದು ಖೇದಕರ ಬೇಳವಣಿಗೆ ಎಂದರು. ಆದರೆ ಅದು ನಮ್ಮ ತಾಲ್ಲೂಕಿಗೆ ಬೇಡ ನಾವುಲ್ಲರೂ ಸಹಬಾಳ್ವೆ ಜೀವನ ನಡೆಸೊಣ, ಮುಂದೆ ಇಂತಹ ಅಹಿತಕರ ವಿಚಾರಗಳು ಪೋಲಿಸ್ ಇಲಾಖೆಯವರು ಗಮನಕ್ಕೆ ತಂದರೆ, ನಾವುಲ್ಲರೂ ಸಹಕಾರ ನೀಡಿ ಶಾಂತಿ ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡುತ್ತೆವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಸಿ.ಎಸ್ ಕುಲಕರ್ಣಿ, ನಗರ ಸಿಪಿಐ ಭೀಮನಗೌಡ ಬಿರಾದಾರ,ಗ್ರಾಮೀಣ ಸಿಪಿಐ ರಾಜಶೇಖರ ಬಡದೇಸಾರ, ಪುರಸಭೆ ಉಪಾಧ್ಯಕ್ಷ ಇಸ್ಮಾಯಿಲ್ ಅರಬ್ , ಜಗದೀಶ್ ಕ್ಷತ್ರಿ, ಯಮುನಾಜಿ ಸಾಳೊಂಕೆ, ಜಬ್ಬರ್ ಅರಬ್,ಅಯೂಬ್ ಬಾಗವಾನ, ಅಸ್ಲಂ ಕಡಣಿ,ದೇವೆಂದ್ರ ಕುಂಬಾರ, ಯಲ್ಲಪ ಹದಿರಿ, ನಾಗೇಶ ಶಿವಶರಣ, ಪ್ರಕಾಶ ಬಿರಾದಾರ ಇನ್ನೂ ಮುಖಂಡರು ಉಪಸ್ಥಿತರು.