ಕನ್ನಡ ನಾಡು, ನುಡಿ ಜಾಗೃತಿಗೊಳಿಸೋಣ : ಎಸಿ ಅಬೀದ್ ಗದ್ಯಾಳ
ಇಂಡಿ: ಕನ್ನಡ ನಾಡು, ನುಡಿ, ಭಾಷೆ, ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಬುಧವಾರ ಪಟ್ಟಣದ ಹಂಜಗಿ ಕ್ರಾಸ್ ಹತ್ತಿರ ಹೊರ್ತಿಯಿಂದ ಆಗಮಿಸಿದ ಕನ್ನಡ ರಥಕ್ಕೆ ತಾಲೂಕಾ ಆಡಳಿತ ಮತ್ತು ಸಮಸ್ತ ಕನ್ನಡ ಪರ ಸಂಘಟನೆ ವತಿಯಿಂದ ಸ್ವಾಗತಿಸಿ ಅವರು ಮಾತನಾಡಿದರು. ಆಡಳಿತದಲ್ಲಿ ಕನ್ನಡ ಹೆಚ್ಚು ಬಳಕೆ ಮಾಡಿ ಕನ್ನಡದ ಬೆಳವಣೆಗೆ ಮಾಡಬೇಕಾಗಿದೆ. ಬಳಕೆಯಲ್ಲಿ ಇದ್ದದ್ದು ಹೆಚ್ಚು ಉಳಿಯುತ್ತದೆ ಎಂದರು.
ವಿಜಯಪುರ ಜಿಲ್ಲಾ ಕಸಾಪ ಅಧ್ಯಕ್ಷ ಹಾಸೀಂಪೀರ ವಾಲಿಕಾರ ಮಾತನಾಡಿ, ಕರ್ನಾಟಕ ರಾಜ್ಯ ಜನಪದ, ಕಲೆ, ಸಾಹಿತ್ಯ ಮತ್ತು ಪ್ರಕೃತಿ ಸೌಂದರ್ಯದಲ್ಲಿ ಅಡಗಿದೆ. ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಲನ ನಡೆಯಲಿದ್ದು ಅದರ ಪ್ರಚಾರಾರ್ಥ ಮತ್ತು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ೫೦ ವರ್ಷ ಆಗುತ್ತಿದ್ದು ಈ ದಿಶೆಯಲ್ಲಿ ರಥ ಸಾಗುತ್ತಿದ್ದು ಅದಕ್ಕೆ ಹೆಚ್ಚಿನ ಪ್ರಚಾರ ನೀಡಬೇಕಾಗಿದೆ ಎಂದರು.
ಕ್ಷೇತ್ರಶಿಕ್ಷಣಾದಿಕಾರಿ ಟಿ.ಎಸ್. ಅಲಗೂರ, ಕಸಾಪ ಇಂಡಿ ಘಟಕದ ಅಧ್ಯಕ್ಷ ರಾಘವೇಂದ್ರ ಕುಲಕಣ ð ಮಾತನಾಡಿದರು.
ಸಮಾರಂಭದಲ್ಲಿ ಡಾ. ರಾಜಕುಮಾರ ಅಡಕಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ರಮೇಶ ನರಳೆ, ಜಾವೇದ ಬಾಗವಾನ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಸಂಗಣ್ಣ ಭೈರಜಿ, ಕಜಾಪ ಅಧ್ಯಕ್ಷ ಆರ್.ವಿ. ಪಾಟೀಲ, ಸಂಜಯ ಚಟ್ಟರಕಿ, ಸತ್ಯಣ್ಣ ಹಡಪದ, ಕೆ.ಜಿ. ನಾಟಿಕಾರ, ಎಸ್.ಡಿ. ಕಲ್ಯಾಣ , ಎಸ್.ಆರ್. ಗದ್ಯಾಳ, ಪಿ.ಎಂ. ಮಠಪತಿ, ಸಿದರಾಯ ಆಲೂರ, ಜಾವೇದ ಮೋಮಿನ, ಜಟ್ಟೆಪ್ಪ ರವಳಿ, ಪ್ರಶಾಂತ ಕಾಳೆ, ಹುಚ್ಚಪ್ಪ ತಳವಾರ, ಬಿ.ವಾಯ್. ದಳವಾಯಿ, ಪ್ರದೀಪ ಪವಾರ, ಕರವೇ ಸ್ವಾಭಿಮಾನಿ ಬಣದ ಶಿವಾನಂದ ಬಡಿಗೇರ, ಧನಪಾಲಶೆಟ್ಟಿ ದೇವೂರ ಪಾರ್ವತಿ ಸೊನ್ನದ, ಸಿ.ಎಂ. ಕಾಳೆ, ಲಲಿತಾ ಮಾದರ, ಶಾರದಾ ಗಿರಣ ವಡ್ಡರ, ಜಯಶ್ರೀ ತೆಲಗ, ಸಾವಿತ್ರಿ ಮಣ್ಣೂರ, ಸುಲೋಚನಾ ಮಾದರ ಮತ್ತಿತರಿದ್ದರು.
ಇಂಡಿ: ಪಟ್ಟಣಕ್ಕೆ ಆಗಮಿಸಿದ ಕನ್ನಡ ರಥಕ್ಕೆ ಸ್ವಾಗತಿಸಿ ಎಸಿ ಅಬೀದ್ ಗದ್ಯಾಳ ಮಾತನಾಡಿದರು.