ಅಬ್ಬಬ್ಬಾ..! ಏನು ಜೋರು..! ರೂಗಿ ಗ್ರಾಮದಲ್ಲಿ ಕನ್ನಡ ಜ್ಯೋತಿ ರಥಯಾತ್ರೆ.
ಇಂಡಿ : ಕರ್ನಾಟಕ ಸಂಭ್ರಮ-50ರ ಸಂಭ್ರಮಾಚರಣೆ ನಿಮಿತ್ತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಯ ಭಾನುವಾರ ತಾಂಬಾ ಗ್ರಾಮದಿಂದ ರೂಗಿ ಗ್ರಾಮಕ್ಕೆ ಆಗಮನ ಹಿನ್ನೆಲೆಯಲ್ಲಿ ಗ್ರಾಮಸ್ಥರು ಡೊಳ್ಳು ಕುಣಿತ, ಚಿಟ್ಟ ಹಲಗೆ ವಿವಿಧ ವಾದ್ಯಗಳೊಂದಿಗೆ ಅದ್ದೂರಿ ಸ್ವಾಗತ ಕೋರಿ ಗ್ರಾಮದಲ್ಲಿ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಿದರು. ಅದಲ್ಲದೇ ಶಾಲಾ ಮಕ್ಕಳಿಂದ ನಾಡು ನುಡಿ ಗೀತೆಗೆ ಹೆಜ್ಜೆ ಹಾಕಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖ ಮುಖಂಡರು, ಸ್ಥಳೀಯ ಜನ ಪ್ರತಿನಿಧಿಗಳು, ಸರ್ವ ಸದಸ್ಯರು, ಪಿ ಕೆ ಪಿ ಎಸ್ ಸಹಕಾರಿ ಅಧ್ಯಕ್ಷ ಹಾಗೂ ಸಂಘದ ಸದಸ್ಯರು,
ಕಂದಾಯ ನೀರಿಕ್ಷಕ ಎಚ್ ಎಸ್ ಗುನ್ನಾಪುರ ಗ್ರಾಮ ಆಡಳಿತ ಅಧಿಕಾರಿ ಹಂಚನಾಳ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವರಾಜ ಬಬಲಾದ ಮತ್ತು ಶಿಕ್ಷಕರು ಸೇರಿದಂತೆ ಅನೇಕ ಕನ್ನಡ ಅಭಿಮಾನಿಗಳು ಹಾಗೂ ಯುವಕರಸ್ತೊಮವೇ ತುಂಬಿತ್ತು ಎಂದು ತಿಳಿಸಿದರು.