ಇಂಡಿ : ಕೇಂದ್ರದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಎಸ್ ಎಸ್ ಪ್ಯಾರಾಮೆಡಿಕಲ್ ಕಾಲೇಜು ಅಧ್ಯಕ್ಷ ಸಂತೋಷ ಕೆಂಬೋಗಿ ಹೇಳಿದರು.
ಪಟ್ಟಣದ ಪ್ರತಿಷ್ಠಿತ ಎಸ್.ಎಸ್. ಪ್ಯಾರಾಮೆಡಿಕಲ್ ಕಾಲೇಜು ಆಶ್ರಯದಲ್ಲಿ ನಡೆದ ೬೭ ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತಾನಾಡಿದ ಅವರು, ನೆಲ,ಜಲ,ಗಡಿ,ನುಡಿ ಎಂದು ಮರೆಯಬಾರದು.
ಅದಕ್ಕಾಗಿ ಸಹಸ್ರಾರು ಸಂಖ್ಯೆಯಲ್ಲಿ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಇನ್ನೂ ಗ್ರಾಮೀಣ ಭಾಗದಿಂದ ಕೂಡಿದ ನಮ್ಮ ನಾಡಿನ ಜನರು ಕೇಂದ್ರ ಸರಕಾರ ನಡೆಸುವ ನೇಮಕಾತಿ ಮತ್ತು ಇತರೆ ಪರೀಕ್ಷೆಗಳು ಇಂಗ್ಲೀಷ್ ಹಿಂದಿ ಭಾಷೆಯಲ್ಲಿ ಎದುರಿಸಬೇಕಾಗಿರುವುದು ನಮ್ಮ ಯುವಕರಿಗೆ ಕಷ್ಟಕರ ಸವಲಾಗಿದೆ. ಹಾಗಾಗಿ ಕನ್ನಡ ಭಾಷಿಕರಿಗೆ ಕೇಂದ್ರದಲ್ಲಿ ಉದ್ಯೋಗ ಪಡೆಯಲು ಸಮಸ್ಯೆಯಾಗುತ್ತಿದೆ ಎಂದರು. ಇನ್ನೂ ರಾಜ್ಯದ ರಾಜಿಧಾನಿಯಲ್ಲಿ ಹಲವಾರು ರಾಜ್ಯದ ಭಾಷಿಕರು ಆಗಮಿಸುತ್ತಾರೆ. ಅವರಿಗೆ ನಮ್ಮ ರಾಜ್ಯ ಆಶ್ರಯ ನೀಡಿ ಅವರ ಜೀವನಕ್ಕೆ ಫಲಪ್ರದ ನೀಡಿದೆ. ಆದರೆ ಕನ್ನಡ ಭಾಷೆ ಬಳಸಲು ಮಾತಾನಾಡಲು ಹಿಂದೇಟು ಹಾಕುತ್ತಾರೆ ಎಂದರು.
ಪ್ರಸ್ತುತವಾಗಿ ಕನ್ನಡ ಭಾಷೆ ಕಷ್ಟದಾಯಕ ಕಾಲದಲ್ಲಿದೆ.
ಅದಕ್ಕಾಗಿ ಕನ್ನಡ ನಾಡಿನ ಸ್ವಾಭಿಮಾನಿಗಳು, ಕನ್ನಡಪರ ಸಂಘಟನೆಗಳು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಆಳುವ ಸರ್ಕಾರಗಳು ಅತೀವ ಕಾಳಜೀವಹಿಸಿ ವಿಶೇಷ ಕಾರ್ಯಕ್ರಮ ಗಳನ್ನು ಆಯೋಜಸಿ ಕನ್ನಡ ಭಾಷೆ ಛಾಪು ಮೂಡಲು ಕಾರಣರಾಗಬೇಕು, ಹೊಸ ಮೈಲುಗಲ್ಲಿಗೆ ಹೊಸದೊಂದು ಹೆಜ್ಜೆ ಇಡುವ ಅವಶ್ಯಕತೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿ ವಕೀಲ ಪ್ರದೀಪ ಮೂರಮೂನ ಮಾತಾನಾಡಿದ ಅವರು, ಆಲೂರು ವೆಂಕಟರಾಯರು ೧೯೦೫ ರಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ಮಾಡಿದವರು, ೧೯೭೩ ರಲ್ಲಿ ಮುಖ್ಯ ಮಂತ್ರಿ ದೇವರಾಜ್ ಅರಸ್ ರವರು ಕರ್ನಾಟಕ ಎಂದು ನಾಮಕರಣ ಮಾಡಿದವರು ಇಂತಹ ಮಹಾನ ಚೇತನಗಳನ್ನ ಇಂದು ಸ್ಮರಿಸಿಕೊಳ್ಳುಬೇಕು. ಇನ್ನೂ ಈ ನೆಲದಲ್ಲಿ ನಾವು ಜನ್ಮತಾಳಿದ್ದು ನಮ್ಮ ಪೂರ್ವ ಜನ್ಮದ ಪುಣ್ಯ. ಈ ನೆಲದ ಭಾಷೆ, ಗಾಳಿ, ನೀರು, ಆಹಾರ ಸೇವಿಸುತ್ತೆವೆ. ಹಾಗಾಗಿ ಈ ನೆಲದ ಋಣ ನಮ್ಮ ಮೇಲಿದೆ. ಇದರ ಋಣ ತೀರಿಸಬೇಕಾಗಿದ್ದು ನಮ್ಮ ಜವಾಬ್ದಾರಿ ಇದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಡಾ.ಸರಸಂಬಿ, ಡಾ ಸಾಗರ, ಶ್ರೀಶೈಲ ಹೂಗಾರ, ಗಣಪತಿ ಹೂಗಾರ, ಶೀಲ್ಪಾ ಕೊಲಾರ, ಶೋಭಾ ಸಾರವಾಡ, ಶೋಭಾ ಬಡಿಗೇರ, ಅಲ್ಮಸ್ ಬೇನೂರ, ಸಧಾರಾಣಿ ರೂಗಿ, ಮಹಾಂತೇಶ ಪಾಟೀಲ, ಸೌಮ್ಯ ರೂಗಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.