ಕನಕದಾಸರ ತತ್ವಾದರ್ಶ ಮನುಕುಲಕ್ಕೆ ದಾರಿದೀಪ :
ಸಂತೋಷ ಬಂಡೆ
ಇಂಡಿ: ಕನಕದಾಸರ ಭಕ್ತಿ, ಶ್ರದ್ಧೆ ಮತ್ತು ನಿಷ್ಢೆಗಳನ್ನು ಅಳವಡಿಸಿಕೊಂಡಾಗ ಮನುಷ್ಯಪರಿಪೂರ್ಣನಾಗಲು ಸಾಧ್ಯ. ನುಡಿಯಲ್ಲಿ ಅವರ ಜೀವನ ಮತ್ತು ಸಾಹಿತ್ಯ ನಮ್ಮ ಬಾಳಿಗೆ ಮಾರ್ಗದರ್ಶನದಂತಿದೆ. ಅವರ ಆದರ್ಶಗಳನ್ನು ಪಾಲಿಸುವ ಪ್ರಯತ್ನ ಮಾಡಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಗುರುವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಕನಕದಾಸರ ಜಯಂತಿ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕನಕದಾಸರು ಸಮಾಜ ಸುಧಾರಕ – ರಾಗಿದ್ದು, ಅವರ ಜೀವನದ ಪ್ರತಿಘಟ್ಟವೂ ಒಂದೊಂದು ತತ್ವಗಳನ್ನು ಆದರ್ಶಿಸುವ ಅಧ್ಯಾಯವಾಗಿದೆ. ಅವರು ಹಾಕಿಕೊಟ್ಟ ಮಾರ್ಗ ಎಲ್ಲರ ಬದುಕಿಗೆ ಬುನಾದಿಯಾ – ಗಬೇಕು ಎಂದು ಹೇಳಿದರು.
ಶಿಕ್ಷಕಿ ಎನ್.ಬಿ. ಚೌಧರಿ ಮಾತನಾಡಿ, ಕನಕದಾಸರು ಒಬ್ಬ
ಶ್ರೇಷ್ಠ ಸಂತಕವಿ. ಅವರ ಸದಾಚಾರಗಳನ್ನು ಜೀವನದಲ್ಲಿ ರೂಢಿಸಿಕೊಂಡು ಭಕ್ತಿವಂತರಾಗಿ ಬದುಕನ್ನು ಸಾಗಿಸಿದರೆ ಸಮಾಜ ಸಮೃದ್ಧವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಶಾಲಾ ಹಿರಿಯ ಶಿಕ್ಷಕ ಎಸ್.ಎಸ್. ಅರಬ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನಕದಾಸರು ಸಂತಕವಿ. ಹರಿದಾಸ ಪರಂಪರೆಯ ಮತ್ತು ದಾಸ ಸಾಹಿತ್ಯದ ಅಶ್ವಿನಿ
ದೇವತೆಗಳಲ್ಲಿ ಒಬ್ಬರಾಗಿದ್ದಾರೆ. ಜಾತಿ ಪದ್ಧತಿ
ಹೋಗಲಾಡಿಸಲು ಅವಿರತವಾಗಿ ಶ್ರಮಿಸಿದ್ದಾರೆ ಎಂದು
ತಿಳಿಸಿದರು. ಶಿಕ್ಷಕಿ ಎಸ್.ಪಿ. ಪೂಜಾರಿ, ಅಡುಗೆ ಸಿಬ್ಬಂದಿ ಹಾಗೂ ಮಕ್ಕಳು ಭಾಗವಹಿಸಿದ್ದರು.
ಇಂಡಿ: ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಕನಕದಾಸರ ಜಯಂತಿ ಆಚರಣೆಗೆ ಚಾಲನೆ ನೀಡಿ ಸಂತೋಷ ಬಂಡೆ ಮಾತನಾಡಿದರು.