ಇಂಡಿ: 16ನೇ ಶತಮಾನದಲ್ಲಿ ಕನಕದಾಸರು ಅಸ್ಪ್ರಶ್ಯತೆಯ ಮತ್ತು ಶ್ರೇಣಿಕ್ರತ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ. ತನ್ನ ಕೀರ್ತನೆಗಳ ಮೂಲಕ ಮಾನವೀಯತೆಯ ಸಂದೇಶ ಸಾರಿದರೆಂದು ವಿಶ್ವಭಾರತಿ ಸಂಸ್ಥೆಯ ಅಧ್ಯಕ್ಷ ವಿ.ಜಿ. ಕಲ್ಮನಿ ಹೇಳಿದರು.
ಗುರುವಾರ ತಾಲೂಕಿನ ಹಿರೇಬೇವನೂರ ಗ್ರಾಮದ
ವಿಶ್ವಭಾರತಿ ವಿದ್ಯಾಕೇಂದ್ರ ಪ್ರಾಥಮಿಕ, ಪ್ರೌಢ ಹಾಗೂ
ಶ್ರೀ ಬೀರಲಿಂಗೇಶ್ವರ ಪಬ್ಲಿಕ್ ಆಂಗ್ಲ ಮಾಧ್ಯಮ
ಶಾಲೆಯಲ್ಲಿ ಹಮ್ಮಿಕೊಂಡಿ ಭಕ್ತ ಕನಕದಾಸರ 536ನೇ
ಜಯಂತ್ಯೋತ್ಸವದಲ್ಲಿ ಅವರು ಮಾತನಾಡಿದರು.
ಅಸ್ಪ್ರಶ್ಯತೆ ಎಂಬುದು ಮಾನವ ಕುಲಕ್ಕೆ ಅಂಟಿಕೊಂಡಿರುವ ಶಾಪ. ಇದನ್ನು ಹೊಡೆದು ಹಾಕಲು ಬುಧ್ಧ, ಬಸವಣ್ಣ, ಕನಕದಾಸರು ಅನೇಕ ಸಮಾಜ ಸುಧಾರಕರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಹೋರಾಡಿದರು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರು ನಡೆಯಬೇಕೆಂದರು.
ಸಂಸ್ಥೆಯ ಸಂಸ್ಥಾಪಕ ಪಿ.ಜಿ. ಕಲ್ಮನಿ ಮಾತನಾಡಿ, ನಾವೆಲ್ಲರು ಇಂದು ಸ್ವತಂತ್ರ್ಯವಾಗಿ ಶಿಕ್ಷಣ ಪಡೆಯುತ್ತಿದ್ದೇವೆ ಎಂದರೆ ಅದರ ಹಿಂದೆ ಬಸವಣ್ಣ, ಕನಕದಾಸರಂತ ಸಮಾಜ ಸುಧಾರಕರ ಹೋರಾಟದ ತ್ಯಾಗದಿಂದ ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಗತಿಪರ ರೈತರಾದ ಶಂಕರಗೌಡ ಬಿರಾದಾರ, ಸೂರ್ಯನ ಬೆಳಕಿನಲ್ಲಿರುವ ಬಣ್ಣಗಳಿಗೆ ಯಾವುದೇ ಜಾತಿಗಳಿಲ್ಲ. ಆದರೆ ನಾವು ಜಾತಿಗೊಂದು ಬಣ್ಣ ಎಂಬಂತೆ ಬಿಂಬಿಸಿ ಸಮಾಜದ ಶಾಂತಿ, ಸೌಹಾರ್ದತೆ, ಸಮಾನತೆ – ಯನ್ನು ಹಾಳು ಮಾಡಿ ನಮ್ಮನ್ನು ಆಳುವ ನಾಯಕರು ತಮ್ಮ ರಾಜಕೀಯ ಲಾಭ ಪಡೆದುಕೊಳ್ಳುವ ವಿಪರ್ಯಾಸವೇ ಸರಿ. ಬಸವಣ್ಣ, ಕನಕದಾಸರು ಮುಂತಾದ ದಾರ್ಶನಿಕರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು ಎಂದರು.
ಮಾಳಪ್ಪ ಪೂಜಾರಿ ಮಾತನಾಡಿ, ಕನಕದಾಸರು ನಾನು ಎಂಬ ಅಹಂಕಾರ ಹೋಗಲಾಡಿಸಲು ನಾನು ಸ್ವರ್ಗಕ್ಕೆ
ಹೋಗುತ್ತೇನೆ ಎಂದು ಹೇಳಿದಾಗ ವ್ಯಾಸರಾಯರು
ಕನಕದಾಸರಲ್ಲಿರುವ ಜ್ಞಾನವನ್ನು ಮೆಚ್ಚಿಕೊಂಡರು
ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕನಕದಾಸರ
ಕುರಿತು ಭಾಷಣ ಮಾಡಿದರು. ಬುಯ್ಯಾರ ಗ್ರಾಮದ ಗಣ್ಯರಾದ ಶಿವಯೋಗಪ್ಪ ಅಜಗೊಂಡ, ಗ್ರಾಮದ ಗಣ್ಯರಾದ ಮಾಯಪ್ಪ ಪರಗೊಂಡ, ನೀಲಪ್ಪ ಕರಜಗಿ, ನಿಂಗಪ್ಪ ತಾಂಬೆ, ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ಶ್ರೀದೇವಿ ಕಲ್ಮನಿ, ಮುಖ್ಯಗುರು ಸುನೀಲ್ ವಿ.ಆರ್, ರಾಜು ಪಡನೂರ, ಗುರುಮಾತೆಯರಾದ ಜೆ.ಎ. ಬಿರಾದಾರ, ಎಸ್.ಎಮ್. ಭಾಸಗಿ, ಬಿ.ಕೆ. ಉಕ್ಕಲಿ, ಶಿಕ್ಷಕರಾದ ಸಚಿನ್ ಅಡಿಗುಂಡಿ, ರಾಮ್ ಚವಾಣ್,
ಪರಮೇಶ ಇಂಗಳೇಶ್ವರ, ಅನಿತಾ ಗೌಡ, ರಾಜೇಶ್ವರಿ
ಗೌಡ, ಬೌರಮ್ಮ ನಾಟೀಕಾರ, ಗಿರೀಜಾ ಬಾಗೇವಾಡಿ, ರಾಜಶ್ರೀ ಸಂಗಮ್, ಅಶ್ವಿನಿ ಚವಾಣ್, ಪ್ರಕಾಶ್ ಕಲ್ಮನಿ, ಪ್ರವೀಣ್ ಹೊಸಗೌಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕ ಶಿವಾನಂದ ಕಲ್ಮನಿ ನಿರೂಪಿಸಿ ವಂದಿಸಿದರು.
ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದ ವಿಶ್ವಭಾರತಿ ವಿದ್ಯಾಕೇಂದ್ರ ಪ್ರಾಥಮಿಕ, ಪ್ರೌಢ ಹಾಗೂ ಶ್ರೀ
ಬೀರಲಿಂಗೇಶ್ವರ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ
ಹಮ್ಮಿಕೊಂಡಿ ಭಕ್ತ ಕನಕದಾಸರ 536ನೇ ಜಯಂತ್ಯೋತ್ಸವದಲ್ಲಿ ವಿ.ಜಿ. ಕಲ್ಮನಿ ಮಾತನಾಡಿದರು.