ಕನಕದಾಸರ ಜಯಂತಿ: ಒಳ್ಳೆಯದು, ಕೆಟ್ಟದ್ದು ಗಮನಿಸುತ್ತಾರೆ..! ಅಸಿಸ್ಟೆಂಟ್ ಕಮೀಷನರ್ ಆಬೀದ್ ಗದ್ಯಾಳ
ಇಂಡಿ ತಾಲೂಕು ಆಡಳಿತ ಸೌಧದಲ್ಲಿ ಕನಕದಾಸ ಜಯಂತಿ..
ಇಂಡಿ: ಕನಕದಾಸರ ತ್ರಿಪದಿಗಳು, ಸಾಹಿತ್ಯ, ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ದಿನವಿದು ಎಂದು ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಸಂತ ಕವಿ ಕನಕದಾಸ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚಾಣೆ ಮಾಡುವ ಮೂಲಕ ಗೌರವ ಸಲ್ಲಿಸಿ ಮಾತಾನಾಡಿದರು. ಕನಕದಾಸರ ಜೀವನ ಕುರಿತು ನೋಡುವುದಾದರೆ, ಅವರು ಗುರುಗಳು ಹೇಳುತ್ತಾರೆ. ಯಾರಿಗೂ ಕಾಣಿಸದಂತೆ ಬಾಳೆ ಹಣ್ಣು ತಿನ್ನಲು ಎಲ್ಲಾ ವಿಧ್ಯಾರ್ಥಿಗಳ ಜೊತೆಗೆ ಕನಕದಾಸರಿಗೂ ಹೇಳಿರುತ್ತಾರೆ. ಅದರಂತೆ ಕೆಲವು ವಿದ್ಯಾರ್ಥಿಗಳು ಎಲ್ಲೆಲ್ಲೂ ನಿಂತು ಬಾಳೆ ಹಣ್ಣು ತಿಂದು ಬರುತ್ತಾರೆ. ಅದರಂತೆ ಪ್ರತಿಯೊಬ್ಬ ವಿಧ್ಯಾರ್ಥಿಯೂ ಹಣ್ಣು ತಿಂದ ಬಗ್ಗೆ ವಿವರಣೆ ನೀಡುತ್ತಾರೆ. ಆದರೆ ಇದೆ ಸಂದರ್ಭದಲ್ಲಿ ಕನಕದಾಸರಿಗೆ ಪ್ರಶ್ನೆ ಮಾಡಿದಾಗ ಬಾಳೆ ಹಣ್ಣು ತಿನ್ನಲು ಹೋದಾಗ ಎಲ್ಲಾ ಕಡೆಯೂ ಭಗಂವತ ಕಾಣಿಸುವ ಬಗ್ಗೆ ನುಡಿಯುತ್ತಾರೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಕೆಟ್ಟದ್ದು ಮತ್ತು ಒಳ್ಳೆಯದ್ದು ಒಬ್ಬರಿಲ್ಲ, ಒಬ್ಬರು ಗಮನಿಸುತ್ತಾರೆ.
ಆದ್ದರಿಂದ ಸಮಾಜದಲ್ಲಿ ಜಾತಿ ಮತ ಪಂತ ಮರೆತು ಸೌಹಾರ್ದ ಜೀವನ ನಡೆಸಬೇಕು. ಅದಲ್ಲದೇ ಊರಿಯುವ ಜ್ಯೋತಿಗೆ ಯಾವ ಜಾತಿ, ಯಾವ ಧರ್ಮ ಗೊತ್ತಿರುವುದಿಲ್ಲ, ಬೆಳಕು ನೀಡುವುದು ಅದರ ಧರ್ಮವಾಗಿದೆ. ಇನ್ನೂ ದಾಸರಲ್ಲಿ ಅತ್ಯಂತ ಶ್ರೇಷ್ಠ ದಾಸರು ಕನಕದಾಸರು.ಕನ್ನಡ ನಾಡು ಕಂಡ ದಾಸ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ ತತ್ವಜ್ಞಾನಿ ಹಾಗೂ ಸಮಾಜ ಸುಧಾರಕರು. ವಿಶ್ವ ಮಾನವ ಕಲ್ಪನೆ ಹೊಂದಿದ್ದ ಮಾನವೀಯ ಗುಣಗಳನ್ನು ಪ್ರತಿಪಾದಿಸಿ, ಸಮಾನತೆ ಸಾರಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡ ಜೆಟ್ಟಪ್ಪ ರವಳಿ, ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ್, ಕಾಂಗ್ರೆಸ್ ಮುಖಂಡ ಪ್ರಶಾಂತ ಕಾಳೆ, ಪುರಸಭೆ ಸದಸ್ಯ ಮುಸ್ತಾಕ ಇಂಡಿಕರ, ಅನೀಲಗೌಡ ಬಿರಾದಾರ, ಯಲ್ಲಪ್ಪ ಹದರಿ, ಶ್ರೀಶೈಲ ಪೂಜಾರಿ, ಬುದ್ದುಗೌಡ ಪಾಟೀಲ್, ಹಾಗೂ ಪುರಸಭೆ ಮುಖ್ಯ ಅಧಿಕಾರಿ ಮಹಾಂತೇಶ ಹಂಗರಗಿ, ತಾ.ಪಂ ಅಧಿಕಾರಿ ಬಾಬು ರಾಠೋಡ, ಕ್ಷೇತ್ರ ಶಿಕ್ಷಣ ಅಧಿಕಾರಿ ಟಿ ಎಸ್ ಆಲಗೂರ, ಕೃಷಿ ಇಲಾಖೆ ಸಹಾಯ ನಿರ್ದೇಶಕ ಮಹಾದೇವಪ್ಪ ಏವೂರ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಎಚ್ ಎಸ್ ಪಾಟೀಲ್, ಗ್ರೇಡ್ ೨ ತಹಶಿಲ್ದಾರ ದನಪಾಲಶೇಟಟ್ಟಿ ದೇವೂರ, ಶಿರಸ್ತೆದಾರ ರಾಜು ಮೂಗಿ ಕಂದಾಯ ವೃತ್ ನಿರೀಕ್ಷಿಕ ಎಚ್ ಎಸ್ ಗುನ್ನಾಪೂರ, ಇನ್ನೂ ಅನೇಕ ಇಲಾಖೆ ಸಿಬ್ಬಂದಿ ವರ್ಗ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.