ಇಂಡಿಯಲ್ಲಿ 10 ವರ್ಷದಿಂದ ಸುಳ್ಳಿನ ಸುರಿಮಳೆ..!
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಘೋಷಿತ ಅಭ್ಯರ್ಥಿ ಮಹಿಬೂಬ್ ಅರಬ್..
ಇಂಡಿ : ರಾಜಕೀಯದಲ್ಲಿ ಬಲಿಪಶು ಮಾಡಿದಕ್ಕೆ ಈ ಸಮಾವೇಶ ಮೊದಲ ತಕ್ಕು ಉತ್ತರ. ಇದು ಪ್ರಾರಂಭ, ಅಂತ್ಯ ಅಲ್ಲ, ಆರಂಭ. ಅಭಿ ಪಿಚ್ಚರ್ ಬಾಕಿ ಹೈ ಎಂದು ಮೈಹಿಬೂಬ ಅರಬ್ ಪರೋಕ್ಷವಾಗಿ ರಾಜಕೀಯ ಪಕ್ಷಗಳಿಗೆ ಟಾಂಗ್ ನೀಡಿದರು.
ಇಂಡಿ ಪಟ್ಟಣದ ಹಿರೇ ಇಂಡಿಯ ರಸ್ತೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಮಾವೇಶದಲ್ಲಿ ಮಾತಾನಾಡಿದ ಅವರು, ಸತತ 30 ವರ್ಷದ ಶ್ರಮ ಇವತ್ತು ರಾಜಕೀಯ ಬಲದಲ್ಲಿ ಜನರು ಕೊಟ್ಟಿದ್ದಾರೆ ಎಂದು ಹೇಳಿದರು. ಸುಮಾರು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಪರವಾಗಿ ಶ್ರಮ ಮಾಡಿದ್ದೆನೆ. ಆದರೆ ಕಾಂಗ್ರೆಸ್ ಕೊಟ್ಟಿದ್ದು ಮನೆಯಿಂದ ಹೊರಗೆ ಹಾಕಿದ್ದಾರೆ. ಅದಕ್ಕೆ ತಕ್ಕ ಉತ್ತರ ಕೊಡೋಣ. ಕಾರ್ಮಿಕರ, ಅಟೋ ಚಾಲಕರ, ರೈತರ ಗಂಭೀರ ಸಮಸ್ಯೆ ಗಳು ಈ ಭಾಗದಲ್ಲಿವೆ. 10 ವರ್ಷದಿಂದ ಸುಳ್ಳಿನ ಸುರಿಮಳೆ ಇಂಡಿಯಲ್ಲಿ ನಡೆದಿದೆ. ಈ ಬಾರಿ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಮುಖ್ಯ ಮಂತ್ರಿ ಮಾಡೋಣ. ಜಾತಿ, ಧರ್ಮ ಮರೆತು ಮತದಾನ ಮಾಡಿ ಬದಲಾವಣೆ ತರೋಣ ಎಂದರು.