ಇಂಡಿ : ಲಿಂಬೆನಾಡಿನ ಕ.ನಿ.ಪ. ಸಂಘದ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಅಬುಶಾಮ್ ಹವಾಲ್ದಾರ್ ಮತ್ತು ಉಪಾಧ್ಯಕ್ಷರಾಗಿ ನಾಗರಾಜ್ ಆಸಂಗಿ ಆಯ್ಕೆಯಾದರು.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದ ಕ.ನಿ.ಪ.ಸಂಘದ ಚುನಾವಣೆಯು ಇಂದುಶೇಖರ ಮಣ್ಣೂರ, ಮೋಹನ್ ಕುಲಕರ್ಣಿ, ಅವಿನಾಶ್ ಬಿದರಿ ಮತ್ತು ರಾಹುಲ್ ಅಪ್ಟೆ ಅವರ ನೇತೃತ್ವದಲ್ಲಿ ಜರುಗಿತು.
ಇನ್ನೂಳಿದಂತೆ ಪ್ರ.ಕಾರ್ಯದರ್ಶಿಯಾಗಿ ಲಾಲೂಸಿಂಗ ರಾಠೋಡ, ಕಾರ್ಯದರ್ಶಿಯಾಗಿ ಅಲ್ಲಾಭಕ್ಷ ಘೋರೆ, ಖಜಾಂಚಿಯಾಗಿ ಲಕ್ಷ್ಮಣ ಹಿರೇಕುರಬರ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಈ ಸಂಧರ್ಭದಲ್ಲಿ ತಾಲೂಕಿನ ಹಿರಿಯ ಪತ್ರಕರ್ತರು ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಿದರು.