ಶೋಷಿತ ಸಮಾಜದ ನಾಡಿ ಮಿಡಿತ ಜೋತಿಬಾ ಪುಲೆ : ಡಿಸಿಪಿ ಸಿದ್ದರಾಜು..
ಶಿಕ್ಷಣದ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವ ರಕ್ಷಣೆಗಾಗಿ ಬಹುಜನರ ಜಾಗೃತಿ ಸಮಾವೇಶ..!
ಬೆಂಗಳೂರು : ಶೋಷಿತ ಸಮುದಾಯಕ್ಕೆ ಅನನ್ಯ ಕೊಡುಗೆ ಕೊಟ್ಟಿದ್ದು ಜೋತಿಬಾ ಪುಲೆ ದಂಪತಿಗಳೆಂದು ಡಿಸಿಪಿ ಸಿದ್ದರಾಜು ಹೇಳಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಗ್ರಾಮಾಂತರ ಜಿಲ್ಲೆಯಲ್ಲಿ ಆಯೋಜಿಸಿದ ಜೋತಿಬಾ ಪೂಲೆ, ಸಾವಿತ್ರಿಬಾಯಿ ಪೂಲೆ ಅವರ ಜಯಂತಿ ನಿಮಿತ್ಯ ಭಾರತೀಯ ಶಿಕ್ಷಣದ ಮೌಲ್ಯಗಳು ಮತ್ತು ಪ್ರಜಾ ಪ್ರಭುತ್ವದ ರಕ್ಷಣೆಗಾಗಿ ಬಹುಜನರ ಜನಜಾಗೃತಿ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದ ದೇಶದ ಶೋಷಿತ ಸಮಾಜದ ಪ್ರತಿಯೊಬ್ಬರ ನಾಡಿ ಮಿಡಿತದಲ್ಲಿಯು ಜೋತಿಬಾ ಪುಲೆ ದಂಪತಿಗಳ ಆದರ್ಶವು ನೇಲೆಯಾಗಿಬೇಕು. ಅಲ್ಲದೇ
ತತ್ವ ಆದರ್ಶಗಳು ಈ ಸಮಾಜದಲ್ಲಿ ಸಾಗಲಿ ಎಂಬುದೆ ಆಶಯ ಎಂದು ಹೇಳಿದರು.
ಇನ್ನೂ ಪ್ರತಿಯೊಂದು ಸಮಾಜವನ್ನು ಸಮಾನ ಮನಸ್ಥಿತಿಯ ಮೂಲಕ ಕಾಣುವ ನಿಟ್ಟಿನಲ್ಲಿ ಜೋತಿಬಾ ಪುಲೆ ದಂಪತಿಗಳ ಕೊಡುಗೆ ಅನನ್ಯ. ಅದರಂತೆ ಈ ಸಮಾಜಕ್ಕೆ ಆದರ್ಶ ಪ್ರಿಯರಾಗಿ ಬದುಕುವ ನಿಟ್ಟಿನಲ್ಲಿ ಜೀವನದ ಮೌಲ್ಯವನ್ನು ಮಹಾತ್ಮರ ಮಾರ್ಗದಲ್ಲಿ ಸಂತೃಪ್ತರನ್ನಾಗಿಸಿಕೊಳ್ಳಬೇಕು.
ಸಮುದಾಯಕ್ಕೆ ಸಮಾಜಕ್ಕೆ ನಿಮ್ಮ ಕೊಡುಗೆ ಎಷ್ಟು..? ಆದರ್ಶದ ಬದುಕಿನ ಬಗ್ಗೆ ಆದರ್ಶ ತತ್ವದಡಿಯಲ್ಲಿ ನಾವು ಸಾಗುವ ಬಗ್ಗೆ ಒಮ್ಮೆ ಅವಲೋಕನ ಮಾಡಿಕೊಳ್ಳಬೇಕು.
ನಾವು ಎಸ್ಟು ದಿನ ಬದುಕಿದಿವಿ ಅನ್ನೊದು ಮುಖ್ಯವಲ್ಲ ನಾವು ಸಮಾಜಕ್ಕೆ ಮಾಡಿದ ಕಾರ್ಯ ಮತ್ತು ಕೊಡುಗೆ ಏನು ಅನ್ನೊದನ್ನ ಅವಲೋಕಿಸಿ ಕೊಳ್ಳಬೇಕು ಆವಾಗಲೆ ಈ ಜೀವನಕ್ಕೆ ಒಂದು ಅರ್ಥ ಸಿಗುವುದು ಆದರಿಂದ ದಲಿತ ಸಂಘರ್ಷ ಸಮಿತಿ ಭೀಮವಾದದ ಇಂತಹ ಕಾರ್ಯಕ್ರಮಗಳು ಸಂವಿಧಾನ ಉಳಿವಿಗಾಗಿ ಸಮಾನ ಮನಸ್ಕರರ ಸೇವಾ ಮನೋಭಾವದ ಜೊತೆಗೆ ಸದಾ ಸಾಗೋಣ ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ರಾಜ್ಯ ಸಂಚಾಲಕರಾದ ಪರಶುರಾಮ ನೀಲನಾಯಕ ಸೇರಿದಂತೆ ಸಂಘಟನೆಯ ಜಿಲ್ಲಾ ಸಂಚಾಲಕರು ರಾಜ್ಯ ಸಂಘಟನಾ ಸಂಚಾಲಕರು ರಾಜ್ಯ ಸಮಿತಿ ಸದಸ್ಯರು ದಲಿತ ಸಂಘರ್ಷ ಸಮಿತಿ ಸರ್ವ ಸದಸ್ಯರು ವೇದಿಕೆಯ ಮೇಲೆ ಆಸಿನರಿದ್ದರು.