ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಜಂಟಿ ಕೃಷಿ ನಿರ್ದೇಶಕರ ದಿಢೀರ್ ಭೇಟಿ ಪರಿಶೀಲನೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಪಟ್ಟಣದ ವಿವಿಧ ಕೃಷಿ ಹಾಗೂ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ರಸಗೊಬ್ಬರ ಗಳ ದಾಸ್ತಾನು ಹಾಗೂ ವಿತರಣೆಯನ್ನು ಪರಿಶೀಲಿಸಿದ ವಿಜಯಪುರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಬುಧವಾರ ದಿಢೀರ್ ಭೇಟಿ ನೀಡಿದರು.
ತಾಲ್ಲೂಕಿನ ವಿವಿಧ ಮಾರಾಟ ಮಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿ, ಅವಶ್ಯಕತೆ ಗೆ ತಕ್ಕಂತೆ ರಸಗೊಬ್ಬರಗಳು ದಾಸ್ತಾನಿರುವದನ್ನು ಖಚಿತಪಡಿಸಿಕೊಂಡರು.
ರೈತ ಭಾಂದವರು ಹರಳು ಯೂರಿಯಾ ರಸಗೊಬ್ಬರ ಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಕೆ ಮಾಡಬೇಕು ಇದರಿಂದ ಶೇಕಡಾ 5 ರಿಂದ 10 ರಷ್ಟು ಇಳುವರಿ ಹೆಚ್ಚಳವಾಗುತ್ತದೆ, ಹಾಗೂ ಕೀಟನಾಶಕ ಮತ್ತು ರೋಗನಾಶಕ ಗಳ ಜೊತೆಗೆ ಮಿಶ್ರಣ ಮಾಡಿ ಬಳಸಿದಲ್ಲಿ ಸಿಂಪರಣೆಗೆ ತಗಲುವ ವೆಚ್ಚ ವನ್ನು ಸಹಿತ ತಗ್ಗಿಸಬಹುದು ಎಂದರು. ಅದೇ ರೀತಿ ಕೇವಲ ಡಿ ಎ ಪಿ ರಸಗೊಬ್ಬರ ಬಳಸದೇ ಕಾಂಪ್ಲೆಕ್ಸ್ ರಸಗೊಬ್ಬರಗಳಾದ ಎನ್. ಪಿ. ಕೆ. 10:26:26, 20:20:0:13, 12:32:16 ಹಾಗೂ ನ್ಯಾನೋ ಡಿ ಎ ಪಿ ಗೊಬ್ಬರಗಳನ್ನು ಬಳಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎಸ್ ಡಿ ಭಾವಿಕಟ್ಟಿ, ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ, ತಾಲೂಕು ಕೃಷಿ ಪರಿಕರ ಮಾರಾಟಗಾರರ ಸಂಘ ದ ಅಧ್ಯಕ್ಷರಾದ ಶಂಕರಗೌಡ ಹಿರೇಗೌಡರ,ಸೇರಿದಂತೆ ಉಪಸ್ಥಿತರಿದ್ದರು.