ಇಂಡಿ: ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಪಾತ್ರ
ಮಹತ್ವದ್ದು, ಮನೆಯೇ ಮೊದಲ ಪಾಠಶಾಲೆ ತಾಯಿಯೇ
ಮೊದಲ ಗುರು, ಮಕ್ಕಳಿಗೆ ಉತ್ತಮ ಸಂಸ್ಕಾರ
ನೀಡುವಲ್ಲಿ ತಾಯಿ ಪಾತ್ರ ಮುಖ್ಯವಾಗಿದೆ, ಇಂದಿನ
ಆಧುನಿಕತೆಯ ದಿನಗಳಲ್ಲಿ ಪುರಾಣ ಮತ್ತು
ಪ್ರವಚನಗಳು ಹೆಚ್ಚು ಪ್ರಸ್ತುತವಾಗಿವೆ ಎಂದು
ಪುರಾಣಿಕ ಶಿವಾನಂದ ಶಾಸ್ತ್ರಿಗಳು ಹೇಳಿದರು.
ಬುಧವಾರ ತಾಲ್ಲೂಕಿನ ಸುಕ್ಷೇತ್ರ ತಡವಲಗಾ
ಗ್ರಾಮದ ಜೋಡುಗುಡಿಯ ಶ್ರೀ ಮರುಳಸಿದ್ದೇಶ್ವರ
ನೂತನ ಕಟ್ಟಡ ಲೋಕಾರ್ಪಣೆ ಹಾಗೂ ಕಳಸಾರೋಣ
ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಉತ್ಸವ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡಿದ್ದ ಕಲಬುರಗಿ
ಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಅವರು
ಮಾತನಾಡಿದರು.
ಪುರಾಣ-ಪ್ರವಚನ ಆಲಿಸುವುದರಿಂದ ಧರ್ಮ, ಸಂಸ್ಕøತಿ, ಮಹಾತ್ಮರ ಮತ್ತು ಶರಣರ ತತ್ವ ಸಿದ್ಧಾಂತಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಹನ್ನೆರಡನೆಯ ಶತಮಾನದಲ್ಲಿ ಹೇಗೆ ಕಲ್ಯಾಣದ ಕಡೆಗೆ ಜನರು ಹರಿದು ಬರುತ್ತಿದ್ದರೋ, ಅದೇ ರೀತಿ ಇಂದು ಇಂಡಿ ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಜೋಡುಗುಡಿಯ ಶ್ರೀ ಮರುಳಸಿದ್ದೇಶ್ವರ ದೇವಾಲಯಕ್ಕೆ ಪುರಾಣ ಕೇಳಲು ಮಹಿಳೆಯರು, ಮಕ್ಕಳು, ವೃದ್ಧರು, ಹಿರಿಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದು ಸಂತಸ ತಂದಿದೆ. ಇಂಥ ಮಹಾತ್ಮರ ಜೀವನ ಚರಿತ್ರೆ ಕೇಳುವುದರಿಂದ ಮತ್ತು ಓದುವುದರಿಂದ ಜೀವನ ಪಾವನವಾಗುತ್ತದೆ. ಜನರು ಪುರಾಣ, ಪ್ರವಚನ
ಮತ್ತು ಸತ್ಸಂಗಗಳಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ಪಡೆಯುವುದರ ಜೊತೆಗೆ
ದಾರಿದ್ರ್ಯ ಮತ್ತು ಪಾಪಗಳಿಂದ ಮುಕ್ತರಾಗಲು ಕೂಡಾ
ಸಾಧ್ಯ ಎಂದು ಹೇಳಿದರು.
ಪುರಾಣದ ನಂತರ ಭಕ್ತಾದಿಗಳಿಗೆ ನಿರಂತರ ಅನ್ನ
ದಾಸೋಹಗದ ವ್ಯವಸ್ಥೆ ಮಾಡಲಾಗಿತ್ತು.
ಇಂಡಿ: ತಾಲೂಕಿನ ತಡವಲಗಾ ಜೋಡಗುಡಿಯಲ್ಲಿ
ನಡೆಯುತ್ತಿರುವ ಕಲಬುರಗಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಪುರಾಣಿಕ ಶಿವಾನಂದ ಶಾಸ್ತ್ರಿಗಳು ಮಾತನಾಡಿದರು.
ಇಂಡಿ: ತಾಲೂಕಿನ ತಡವಲಗಾ ಜೋಡಗುಡಿಯಲ್ಲಿ
ನಡೆಯುತ್ತಿರುವ ಕಲಬುರಗಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಪುರಾಣಿಕ ಶಿವಾನಂದ ಶಾಸ್ತ್ರಿಗಳ ಪ್ರವಚನ ಆಲಿಸಲು ಬಂದ ಭಕ್ತಸಾಗರ.