ಹಿರೇಬೇವನೂರ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಪಾದಯಾತ್ರೆ..!
ಇಂಡಿ : ನಿಜವಾದ ನೀರಾವರಿ ಹರಿಕಾರರು ಮಾಜಿ ಪ್ರಧಾನಿ ದೇವೆಗೌಡರು, ಅವರ ಶ್ರಮ, ಕಂಡ ಕನಸುಗಳು ಸಾಕಾಲಗೋಳ್ಳಲು ಜೆಡಿಎಸ್ ಪಕ್ಷಕ್ಕೆ ಅಧಿಕಾರಕ್ಕೆ ತನ್ನಿ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಡಿ. ಪಾಟೀಲ ಹೇಳಿದರು.
ಮತಕ್ಷೇತ್ರದ ಹಿರೇಬೇವನೂರ ಗ್ರಾಮದ ಮನೆ ಮನೆಗೆ ತೆರಳಿ ಪಂಚರತ್ನ ಯೋಜನೆಯ ಮಹತ್ವ ತಿಳಿಸಿ ಮತಯಾಚನೆ ಮಾಡಿದರು.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಪಂಚರತ್ನ ಕಾರ್ಯಕ್ರಮಗಳು ಬಡವರ ಬದುಕಗೆ ಆಶಾದಾಯಕವಾಗಿವೆ,ಸರಳ ಸಾದಾ ಜೀವನ ನನ್ನುದು, ಬಡವರ, ರೈತರ, ಕಾರ್ಮಿಕರ, ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಈ ಬಾರಿ ನನಗೆ ಒಂದು ಅವಕಾಶ ನೀಡಬೇಕು ಎಂದು ಹಿರೇಬೆವನೂರ ಗ್ರಾಸ್ದರಿಗೆ ವಿನಂತಿ ಮಾಡಿದರು.
ಇದೇ ಸಂದರ್ಭದಲ್ಲಿ ಅಣ್ಣಪ್ಪ ಬಿರಾದಾರ, ಬಾಬಾಸಾಹೇಬ, ಶ್ರೀಶೈಲ ಸೋಲಾಪೂರ, ಸೈನಸಾಬ ಮುಖಾಂದಾರ, ಚಾಂದ ಶೇಖ್, ತಾಯಣ್ಣ ಬಾಳಗಿ, ಬಾಳುಗೌಡ ಬಿರಾದಾರ, ಪುಂಡಲೀಕ ನಾಟೀಕರ, ಈರಪ್ಪ ನಾಟೀಕರ, ವಿಠ್ಠಲ ಹಂಜಗಿ,ಅರವಿಂದ ಮೈದರಿಗಿ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.