ಇಂಡಿ : ಪಕ್ಷದ ಬಲವರ್ಧನೆಗಾಗಿ ರಾಜ್ಯ ಮತ್ತು ಜಿಲ್ಲಾ ಜೆಡಿಎಸ್ ಪಕ್ಷದ ಪದಾಧಿಕಾರಿಗಳು ನೇಮಕ್ಕೆ ಮಾಡಿದ್ದಕ್ಕೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಯವರಿಗೆ ಇಂಡಿ ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಬಿಡಿ ಪಾಟೀಲ ಅಭಿನಂದನೆ ಸಲ್ಲಿಸಿದರು.
ಇಂಡಿ ಪಟ್ಟಣದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆ ಮಾಡಲು ಪರಿಶಿಷ್ಟ ಜಾತಿ ಪಟ್ಟಿ ಘಟಕದ ರಾಜ್ಯ ಉಪಾಧ್ಯಕ್ಷರಾಗಿ ಭೋವಿ ಸಮಾಜದ ಮರೇಪ್ಪ ಗಿರಣಿವಡ್ಡರ, ಪಕ್ಷದ ಕಿತ್ತೂರ ಕರ್ನಾಟಕದ ಅಧ್ಯಕ್ಷರಾಗಿ ಮರಾಠಾ ಸಮಾಜದ ಸಮಾಜದ ವಿಜಯಕುಮಾರ ಭೋಸಲೆ, ಅಲ್ಪಸಂಖ್ಯಾತರ ಹಿಂದುಳಿದ ವರ್ಗಗಳ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಅಯುಬ ನಾಟೀಕಾರ, ತಾಲೂಕಿನ ಡೋರ ಸಮಾಜದ ಪಿರಪ್ಪ ಹೋಟಗಾರ ಪಕ್ಷದ ಜಿಲ್ಲಾ ಉಪಾಧ್ಯಕ್ಷ, ವಸಂತ ಜಾಧವ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಶ್ರೀಶೈಲಗೌಡ ಬಿರಾದಾರ, ಸಿದ್ದು ಡಂಗಾ,ಮೈಹಿಬೂಬ ಬೇವನೂರ ಉಪಸ್ಥಿತರು.