ಜೆಡಿಎಸ್ ಅಧಿಕಾರಕ್ಕೆ ಬಂದರೆ ನಿಂಬೆನಾಡು ಸಮಗ್ರ ನೀರಾವರಿ ಯೋಜನೆಗೆ ಸಂಕಲ್ಪ..!
ಇಂಡಿ : ನೇನಗುದ್ದಿಗೆ ಬಿದ್ದ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ, ರೇವಣಸಿದ್ದ ಏತ ನೀರಾವರಿ ಯೋಜನೆ, ಕೆರೆಗಳಿಗೆ ನೀರು ತುಂಬಿಸುವ ಕೇಲಸ ಮುಂತಾದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸಂಕಲ್ಪವನ್ನು ಜೆಡಿಎಸ್ ಮಾಡಿದೆ ಎಂದು ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ್ ಮಾತನಾಡಿದರು.
ತಾಲೂಕೀನ ವಿವಿಧ ಗ್ರಾಮಗಳ ನೂರಾರು ರೈತರು ಜೆಡಿಎಸ್ ಪಕ್ಷದ ಕಾರ್ಯಾಲಯಕ್ಕೆ ಆಗಮಿಸಿ ಜೆಡಿ ಎಸ್ ಮುಖಂಡ ಬಿ.ಡಿ. ಪಾಟೀಲರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆ ಯಾದರು. ಅದಲ್ಲದೇ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ನೇಮಕ ಮಾಡಿದರು. ತದನಂತರ ಮಾತಾನಾಡಿ ಜೆಡಿಎಸ್ ಪಕ್ಷ ಯಾವ ಯಾವ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದಿದೆಯೋ..! ಆ ಸಂದರ್ಭದಲ್ಲಿ ನೀರಾವರಿ ಯೋಜನೆಗೆ ಕಾಮಗಾರಿ ಅನುಷ್ಠಾನಕ್ಕೆ ಶ್ರಮೀಸಿದ ಪಕ್ಷವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿಮ್ಮತಲಾಲ ಜಮಾದಾರ ಹಿಂಗಣಿ ಓಬಿಸಿ ಘಟಕದ ಅಧ್ಯಕ್ಷರಾಗಿ, ರಮೇಶ ಭೀಮಶಂಕರ ಬಿಜಾಪೂರ ಹಿಂಗಣಿ ತಾ.ಪಂ ಘಟಕದ ಅಧ್ಯಕ್ಷರಾಗಿ, ಯಲಪ್ಪ ಕಟ್ಟಿಮನಿ ಎಸಿ.ಎಸ್ಟಿ. ಘಟಕದ ಅಧ್ಯಕ್ಷರಾಗಿ, ಅಕ್ಬರ್ ಜಮಾದಾರ ಪ್ರಧಾನಕಾರ್ಯದರ್ಶಿ, ಹುಸೇನಿ ಬಳಗಾನೂರ, ಕಾರ್ಯದರ್ಶಿ, ಹಾಗೂ ಮಲ್ಲಿಕಾರ್ಜುನ ಬೂತೆ, ಅಭಿಮನ್ಯು ಬಿಜಾಪುರ, ಬಾಬು ಪಠಾಣ, ಮಲ್ಲಿಕಾರ್ಜುನ ಆಳೂರ ಹಿಂಗಣಿ ಕಾರ್ಯಕಾರಿಣಿ ಸದಸ್ಯರಾಗಿ ನೇಮಕ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಶೈಲಗೌಡ ಪಾಟೀಲ, ಅಯೂಬ್ ನಾಟೀಕಾರ, ಭೀಮ ಪೂಜಾರಿ, ಸಿದ್ದು ಡಂಗಾ, ಸಂಜು ಪಾಯಕರ, ಶ್ರೀಶೈಲ ಪಾಯಕರ, ನಿಯಾಝ್ ಅಗರಖೇಡ. ಶಾಂತಯ್ಯ ಪತ್ರಿಮಠ, ಬಸು ಪೂಜಾರಿ, ವಿಠ್ಠಲ ಪೂಜಾರಿ, ರಮೇಶ್ ರಾಠೋಡ, ಬಾಳು ರಾಠೋಡ, ಶರಣು ಕೂಟ್ಟಲಗಿ, ಸುನೀಲ ಬೂತಾಳಿ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.