ಜೆಡಿಎಸ್ ಪಕ್ಷದ ಯುವ ಅಭ್ಯರ್ಥಿ ಉತ್ಕರ್ಷ.ಎ ನಾಮಪತ್ರ ಸಲ್ಲಿಕೆ..
ಬೆಂಗಳೂರು ಏಪ್ರಿಲ್ 20: “ಮಲ್ಲೇಶ್ವರಂನಲ್ಲಿ ಬದಲಾವಣೆಯ ಪರ್ವ ತರುತ್ತೇನೆ” ಎಂದು ಜೆಡಿಎಸ್ ಪಕ್ಷದ ಯುವ ಅಭ್ಯರ್ಥಿ ಉತ್ಕರ್ಷ.ಎ ಹೇಳಿದರು.
ಇಂದು ಬೆಳಿಗ್ಗೆ (ಏಪ್ರಿಲ್ 20) ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು “ ಜೆಡಿಎಸ್ ಪಕ್ಷ ಯುವಚೈತನ್ಯ ಎಂದು ಮಾಡುತ್ತಿರುವುದು ಕೇವಲ ಬಾಯಿಮಾತಿಗಲ್ಲ. ಯುವಕರ ಶಕ್ತಿಯನ್ನು ತೋರಿಸಲು ಯುವಕರಿಗೆ ಟಿಕೆಟ್ ನೀಡಿದೆ. ಸೋಲು ಗೆಲುವಿನ ಲೆಕ್ಕಾಚಾರಕ್ಕಿಂತ ಜನ ಬೆಂಬಲ ತುಂಬಾ ಮುಖ್ಯ. ಜನರು ಕೂಡ ನನಗೆ ತುಂಬಾ ಬೆಂಬಲ ನೀಡುತ್ತಿದ್ದಾರೆ. ಬದಲಾವಣೆಯ ಪರ್ವ ಇನ್ನು ಶುರುವಾಗುತ್ತೆ. ಯುವಕನ ಕೈಯಲ್ಲಿ ಮಲ್ಲೆಶ್ವರಂ ಅನ್ನು ಕೊಡಿ. ಯಾವ ರೀತಿ ಬೆಳೆಸುತ್ತಾನೆ ಎಂದು ನೀವೇ ನೋಡಿ. ನಾನು ಹುಟ್ಟಿ ಬೆಳೆದುದ್ದಲ್ಲವೂ ಮಲ್ಲೇಶ್ವರಂನಲ್ಲಿಯೇ, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡಬೇಕು ಎಂಬ ಆಸೆ, ಕನಸು ನನಗಿದೆ” ಎಂದು ಹೇಳಿದರು.
ಇದಕ್ಕೂ ಮುನ್ನ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಉತ್ಕರ್ಷ.ಎ ಶ್ರೀ ಮಾರಮ್ಮ ದೇವಸ್ಥಾನ ಪ್ಯಾಲೇಸ್ ಗುಟ್ಟಹಳ್ಳಿಯಿಂದ ಬಿ.ಡಬ್ಲ್ಯೂ.ಎಸ್.ಎಸ್.ಬಿ.ಸುವರ್ಣ ಸೌಧವರೆಗೆ ಪಾದಯಾತ್ರೆ ಮಾಡಿ ಜನರ ಬೆಂಬಲ ಪಡೆದರು. ಅಪಾರ ಬೆಂಬಲಿಗರು ಹಾಗೂ ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.