ಸಿಂದಗಿ :ಜೆಡಿಎಸ್ ಅಭ್ಯರ್ಥಿ ಹೃದಯಾಘಾತದಿಂದ ನಿಧನ. ಜಿಲ್ಲೆಯ ಸಿಂದಗಿ ಮತಕ್ಷೇತ್ರದ ೨೦೨೩ ರ ಅಭ್ಯರ್ಥಿಯಾಗಿ ಗುರುತಿಸಿಕೊಂಡಿರುವ ಶಿವಾನಂದ ಸೋಮಜಾಳ (೫೫) ನಿಧನರಾಗಿದ್ದಾರೆ. ಸಿಂದಗಿ ಪಟ್ಟಣದ ಪರಿಚಯಸ್ತರ ಮನೆಯಲ್ಲಿ ಮಾತಾಡುತ್ತಾ ಕುಳುತ್ತಿರುವಾಗ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿಯೇ ತೀವ್ರ ಹೃದಯಾಘಾತದಿಂದ ಅಸುನೀಗಿದ್ದಾರೆ. ಮಾಜಿ ಸಿಎಮ್ ಕುಮಾರಸ್ವಾಮಿ ವಿಜಯಪುರ ಜಿಲ್ಲೆಯಲ್ಲಿ ಪಂಚರತ್ನೆ ಯಾತ್ರೆಯಲ್ಲಿ ಇರುವಾಗಲೇ ಅಭ್ಯರ್ಥಿ ಮೃತಪಟ್ಟಿದ್ದಾರೆ. ಸಿಂದಗಿ ಮತಕ್ಷೇತ್ರದ ಅಭ್ಯರ್ಥಿ ಸಾವು ಅಭಿಮಾನಿಗಳಿಗೆ ಶಾಕ್ ತಂದಿದೆ.