ಜಗದ ಕವಿಗೆ ಜಯಂತೋತ್ಸವ ಆಚರಣೆ
ಹನೂರು: ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಎಂಬ ಶ್ರೇಷ್ಠ ಕಾವ್ಯ ರಚಿಸಿ ಕುವೆಂಪು ಕಾವ್ಯನಾಮಂಕಿತರಾದ ಜ್ಞಾನಪೀಠ ಪುರಸ್ಕೃತ ರಾಷ್ಟ್ರಕವಿ ಡಾ. ಕೆ ವಿ ಪುಟ್ಟಪ್ಪ ರವರ ಜನ್ಮ ಸ್ಮರಣೆ ಆಚರಿಸುತ್ತಿರುವ ನಾವುಗಳೇ ಧನ್ಯರು.
ಪಟ್ಟಣದಲ್ಲಿ ಕುವೆಂಪು ಅವರ ಜಯಂತಿ ಆಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸರ್ವ ಜನಾಂಗದ ಶಾಂತಿಯ ತೋಟ ಎಂಬ ಪದ್ಯ ರಚಿಸಿದ ಜಗದಕವಿ, ರಾಷ್ಟ್ರಕವಿ, ವಿಶ್ವಮಾನವರಿಗೆ ಹನೂರು ಪಟ್ಟಣದ ಆಟೋ ನಿಲ್ದಾಣದ ಬಳಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ವನ್ನು ಸರ್ವ ಜನಾಂಗದವರು ಸಲ್ಲಿಸಲಾಯಿತು.
ಪ ಪಂ ಸದಸ್ಯ ಹರೀಶ್ ಕುಮಾರ್ ಮಾತನಾಡಿ ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ರಾಜ್ಯ ಹಾಗೂ ರಾಷ್ಟ್ರಕ್ಕೆ ನೀಡಿರುವ ಸೇವೆ ಅನನ್ಯವಾದುದ್ದು ಕುವೆಂಪು ಅವರು ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಅವರಿಂದ ಕನ್ನಡ ನಾಡು ನುಡಿ ಜಲ ಶ್ರೀಮಂತಗೊಂಡಿದೆ. ತಮ್ಮ ಸೃಜನ ಶೀಲ ಕಾವ್ಯದ ಮೂಲಕ ನಾಡಗೀತೆ, ರೈತ ಗೀತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜಾತಿ, ತಾರತಮ್ಯ, ಧರ್ಮ ವ್ಯಾಮೋಹವನ್ನು ಕುಟುವಾಗಿ ಟೀಕಿಸುತ್ತಿದ್ದವರು. ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದವರು ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಗಿರೀಶ್, ನಟರಾಜು, ನಾಗೇಂದ್ರ, ಸುರೇಶ್ ಪಾಪಣ್ಣ ಶಶಿ,ಸಂತೋಷ್ ,ದೇಸೇಗೌಡ, ನಾರಾಯಣ , ಜಡೆ ಸ್ವಾಮಿ ಸಲೀಂ ,ಸುರೇಶ್ , ಮಂಜುನಾಥ್ ,ಮಹೇಶ್ ,ನಾಗೇಂದ್ರ, ನಂದೀಶ್, ವೆಂಕಟೇಶ್ ಹಾಗೂ ಇನ್ನು ಮುಂತಾದವರು ಹಾಜರಿದ್ದರು.