ಇಂಡಿ : ಮಡಿವಾಳ ಮಾಚಿದೇವ, ಸಂತ ಸೇವಾಲಾಲ್, ಸವಿತಾ ಮಹರ್ಷಿ, ಕಾಯಕ ಶರಣ, ಛತ್ರಪತಿ ಶಿವಾಜಿ ಮತ್ತು ಸರ್ವಜ್ಞ ಜಯಂತಿ ಸೇರಿದಂತೆ ಮಹನೀಯರ ಜಯಂತಿಗಳನ್ನು ತಾಲ್ಲೂಕು ಆಡಳಿತವತಿಯಿಂದ ಅರ್ಥಪೂರ್ಣವಾಗಿ ಹಾಗೂ ಸಾಂಕೇತಿಕವಾಗಿ ಆಚರಿಸಲಾಗುವುದು ಎಂದು ಗ್ರೇಡ್ -2 ತಹಶೀಲ್ದಾರ ಧನಪಾಲಶೆಟ್ಟಿ ದೇವೂರ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಕಚೇರಿಯಲ್ಲಿರುವ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಹನೀಯರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅನೇಕ ಮುಖಂಡರ ಹಾಗೂ ಸಾಮಾಜಿಕ ಕಾರ್ಯಕರ್ತರ ಸಲಹೆ ಸ್ವೀಕರಿಸಿ ಈ ಕುರಿತು ನಿರ್ಧಾರ ಕೈಗೊಳ್ಳಲಾಯಿತು.
ಕಾರ್ಯಕ್ರಮಗಳಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಾಗೂ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಬೇಕು’ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.
ಇನ್ನೂ ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಹೊಸಮನಿ ಮಾತನಾಡಿದ ಅವರು, ತಾಲೂಕು ಆಡಳಿತ ವತಿಯಿಂದ ಜರುಗುವ ವಿವಿಧ ಮಹನೀಯರ ಜಯಂತಿಗಳು ಕಳಕಳಿಯಿಂದ, ಕಾಟಾಚಾರದಿಂದ ಅಥವಾ ಸರಕಾರಿ ನೌಕರಸ್ಥರಿದ್ದೆವೆ, ನೌಕರಿಗೆ ಸಮಸ್ಯೆ ಬರಬಹುದು ಎಂಬ ವಿಚಾರದಿಂದ ಆಚರಣೆ ಮಾಡುತ್ತಿರೋ ಎಂಬ ಆರೋಪ ಪ್ರಶ್ನೆ ಮಾಡಿದರು.
ಸರಕಾರ ಸದುದ್ದೇಶ ಇಟ್ಟುಕೊಂಡು ಅನೇಕ ಮಹನೀಯರ ಜಯಂತಿ ಆಚರಣೆ ಮಾಡುವ ಮೂಲಕ ಜನ ಕಲ್ಯಾಣ ಹಾಗೂ ಆದರ್ಶಗಳನ್ನು ನಿರೀಕ್ಷೆ ಮಾಡುತ್ತದೆ. ಆದರೆ ಆ ಕಾರ್ಯಕ್ರಮಗಳು ಜನಸಮೂಹಕ್ಕೆ ತಲುಪುವುದಿಲ್ಲಂದರೆ, ಸರಕಾರದ ಕಾರ್ಯಕ್ರಮಗಳು ವೈಫಲ್ಯ ಕಂಡಂತೆ. ಹಾಗಾಗಿ ಸರಕಾರದ ಕಾರ್ಯಕ್ರಮಗಳು ವಿಶೇಷ ರೀತಿಯಲ್ಲಿ ನಡೆಯಬೇಕು. ವಿಜೃಂಭಣೆ ಅಥವಾ ಅದ್ದೂರಿ ಮಾಡಲು ಅನುದಾನದ ಕೊರತೆಯಿದ್ದರೆ, ವಿಶೇಷ ಜ್ಞಾನ, ಅನುಭವ ವಿಚಾರವುಳ್ಳ ವ್ಯಕ್ತಿಗಳಿಂದ ಉಪನ್ಯಾಸ ನೀಡುವ ಕಾರ್ಯಕ್ರಮ ಕಛೇರಿಯಲ್ಲಿ ನಡೆಯಲಿ ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಅರಣ್ಯ ಇಲಾಖೆ ಅಧಿಕಾರಿ ಎಸ್ ಜಿ ಸಂಗಾಲಕ, ಮಂಜುನಾಥ ದುಳೆ,ತಳವಾರ ಪರಿವಾರ ಸಮಾಜದ ಅಧ್ಯಕ್ಷ ಧರ್ಮರಾಜ ವಾಲಿಕಾರ, ಕುಂಬಾರ ಸಮಾಜದ ಮುಖಂಡ ಸತೀಶ ಕುಂಬಾರ, ಬಾಬು ಗುಡಮಿ, ಗೋವಿಂದ ರಾಠೋಡ, ಸಂಜೀವ ರಾಠೋಡ,ಅಮರ ಬಾಸುತ್ಕರ, ಸಂತೋಷ ಕಾಳೆ, ದಯಾನಂದ ಹೊಸಮನಿ ವಿಶ್ವನಾಥ ವಾಘಮೋರೆ, ಪ್ರಧಿಪ ಡೊಳ್ಳಿನ, ಸಂಜು ಭತಗುಣಕಿ ಅವಿನಾಶ ಸಿಂಧೆ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.