ಅಪಜಲಪುರ : ಜಗನ್ಮಾತೆ ಏಳು ಮಕ್ಕಳ ತಾಯಿ ಎಂದು ಪ್ರಖ್ಯಾತಿ ಪಡೆದಿರುವ ದೇವಿಯ ಜಾತ್ರೆಯು ತಾಲೂಕಿನ ಕೊಳನೂರ ಗ್ರಾಮದಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಜಾತ್ರೆ ಮಾಡುತ್ತಿದ್ದಾರೆ ಇದು ಸರಿಸುಮಾರು 27 ವರ್ಷಗಳಿಂದ ಈ ಜಾತ್ರೆಯನ್ನ ಬಹಳಷ್ಟು ವಿಶೇಷವಾಗಿ ಆಚರಣೆ ಮಾಡುತ್ತ ಬಂದಿದ್ದಾರೆ ಏಳು ಮಕ್ಕಳ ತಾಯಿಯ ದೇವಸ್ಥಾನವು ಸುಪ್ರಸಿದ್ಧ ಶ್ರೀ ಭಾಗ್ಯವಂತಿ ದೇವಸ್ಥಾನ ಘತ್ತರಗಿ ಗ್ರಾಮದಿಂದ ಕೋಳನೂರ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಇದ್ದು ಗ್ರಾಮಸ್ಥರೆಲ್ಲರೂ ತಮ್ಮ ತಮ್ಮ ಕೈಯಿಂದ ಸಹಾಯ ಮಾಡಿ ಈ ಜಾತ್ರೆಯನ್ನು ಮಾಡುತ್ತಾರೆ ಈ ಜಾತ್ರೆಯಲ್ಲಿ ದೇವಿಯ ಉಡಿ ತುಂಬುವ ಕಾರ್ಯಕ್ರಮ ವಿಶೇಷ ಪೂಜೆ ಪ್ರಸಾದ ಸೇವೆ ಗೀಗಿ ಪದಗಳು ಸುಪ್ರಸಿದ್ಧ ಮಹಿಳಾ ಗಾಯಕಿಯರಿಂದ ಚೌಡಕಿ ಪದಗಳು ವಿಶೇಷವಾಗಿತ್ತು.
ಈ ಕಾರ್ಯಕ್ರಮದ ವ್ಯವಸ್ಥಾಪಕರು ಭೀಮರಾಯಗೌಡ ಮಾಲಿ ಪಾಟೀಲ್ ಗ್ರಾ.ಪಂ.ಉಪಾಧ್ಯಕ್ಷರು ಘತ್ತರಗಾ ಮತ್ತು ಮಹದೇವಪ್ಪ ಮಾಲಿಂಗಪುರ ಅರ್ಜುನ ಕುಂಬಾರ, ಶರಣಪ್ಪ ಕುಂಬಾರ ಗೌಡಪಗೌಡ ಪಾಟೀಲ್, ಶರಣಪ್ಪ ಪೂಜಾರಿ ಸಾತವೀರಪ್ಪ ದಸ್ಮಾ ಶಾಮರಾಯಗೌಡ ಪಾಟೀಲ್, ಚಂದ್ರಕಾಂತ ಮಾಲಿಂಗಪುರ್, ಸಿದ್ದು ಪೂಜಾರಿ ಲವಪ್ಪ ತಳವಾರ, ಸೇರಿದಂತೆ ಗ್ರಾಮದ ಹಿರಿಯರು ಮಹಿಳೆಯರು ಯುವಕರು ಉಪಸ್ಥಿತರಿದ್ದರು.