ಲಿಂಗಸೂಗೂರು: ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ರಾಜ್ಯಾದ್ಯಂತ ತಾರಕ್ಕೇರಿದೆ. ಈಗಾಗಲೇ ಹೈ ಕೋರ್ಟ್ ತ್ರಿಸದಸ್ಯ ಪೀಠ “ಧಾರ್ಮಿಕ ಗುರುತುಗಳನ್ನು (ಹಿಜಾಬ್-ಕೇಸರಿ ಶಾಲು) ಬಳಸುವಂತಿಲ್ಲ” ಎಂದು ಮಧ್ಯಂತರ ಆದೇಶವನ್ನು ಹೊರಡಿಸಿದೆ.
ಈ ಬೆನ್ನಲ್ಲೆ ಸೋಮವಾರದಿಂದ 9 ಮತ್ತು 10 ನೇ ತರಗತಿಯ ಶಾಲೆಗಳು ಪ್ರಾರಂಭವಾಗುತ್ತಿದ್ದು, ತಹಶೀಲ್ದಾರ ಬಲರಾಮ ಕಟ್ಟಿಮನಿ ಹಾಗೂ ಡಿ.ವಾಯ್.ಎಸ್.ಪಿ. S.S. ಹೂಲ್ಲೂರು ಅವರ ನೇತೃತ್ವದಲ್ಲಿ ಪಟ್ಟಣದ ಗುರು ಭವನದಲ್ಲಿ ಧಾರ್ಮಿಕ ಮುಖಂಡರ ಹಾಗೂ ವಿಧ್ಯಾರ್ಥಿಗಳ ಪಾಲಕರ ಸಭೆಯನ್ನು ನಡೆಸಲಾಯಿತು. ಈ ವೇಳೆ DySP ಎಸ್.ಎಸ್. ಹೂಲ್ಲೂರು ಮಾತನಾಡಿ ಜಾತಿ ಧರ್ಮದ ಆಧರದ ಮೇಲೆ ದೇಶವನ್ನು ಒಡೆಯುವ ಕೆಲಸ ಆಗಬಾರದು. ಯಾವುದೇ ಧರ್ಮಗಳು ಹಿಂಸೆಗೆ ಅವಕಾಶವನ್ನು ಕಲ್ಪಿಸಿಲ್ಲ. ಎಲ್ಲರೂ ಸರ್ವ ಧರ್ಮ ಸಹಿಷ್ಣುತೆಯಿಂದ ಇರಬೇಕು. ಬೇರೊಬ್ಬರ ಹಕ್ಕುಗಳಿಗೆ ಧಕ್ಕೆ ತರುವಂತಹ ಕೆಲಸ ಯಾರಿಂದಲೂ ಆಗಬಾರದು. ಯಾರಾದರೂ ಬೆಂಕಿ ಹಚ್ಚುವ ಕೆಲಸಕ್ಕೆ ಮುಂದಾದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದರು.
ಈ ಮದ್ಯೆ ಪಿ.ಎಸ್.ಐ ಪ್ರಕಾಶ್ ಡಂಬಳ ಮಾತನಾಡಿ ಮಾನವೀಯತೆ ಮತ್ತು ಭಾವೈಕ್ಯತೆಗೆ ಎಲ್ಲರೂ ಮಹತ್ವವನ್ನು ನೀಡಬೇಕು. ಮಕ್ಕಳು ಹಾಳಾಗದಂತೆ ಪೋಷಕರು ನಿಗಾವಹಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಪೋಷಕರು ಮುಂದಾಗಬೇಕು. ವಿಧ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಅವಶ್ಯಕತೆ ಇದೆ ಎಂದರು.
ಈ ಸಂದರ್ಭದಲ್ಲಿ ಕಂದಾಯ , ಶಿಕ್ಷಣ, ಪೊಲೀಸ್, ವಿವಿಧ ಧಾರ್ಮಿಕ ಮುಖಂಡರು, ಪೋಷಕರು ಉಪಸ್ಥಿತರಿದ್ದರು.