ಜೈ ಭೀಮ ಸೇನಾ ಸಂಘಟನೆಯ ವತಿಯಿಂದ ನಿರಾಶ್ರಿತರ ಕೇಂದ್ರದಲ್ಲಿ ನಿರಾಶ್ರೀತರಿಗೆ ರಾಖಿ ಕಟ್ಟಿ ರಕ್ಷಾ ಬಂಧನ..!
ವಿಜಯಪುರ– ಜೈ ಭೀಮ ಸೇನಾ ಸಂಘಟನೆಯ ವತಿಯಿಂದ ನಿರಾಶ್ರಿತರ ಕೇಂದ್ರದಲ್ಲಿ ನಿರಾಶ್ರೀತರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಲಾಯಿತು.
ಜೈ ಭೀಮ ಸೇನಾ ರಾಜ್ಯ ಸಂಚಾಲಕರಾದ ಸಂತೋಷ ಭಾಸ್ಕರ ಅವರ ಅಧ್ಯಕ್ಷತೆಯಲ್ಲಿ ಹಾಗೂ ನಗರ ಘಟಕ ಅಧ್ಯಕ್ಷರಾದ ವಿಜಯ ಆಲೂರ ಅವರ ನೇತೃತ್ವದಲ್ಲಿ ರಕ್ಷಾ ಬಂಧನವು ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸುವ ಪವಿತ್ರ ಹಬ್ಬ. ರಕ್ಷಾ ಬಂಧನ ಹಬ್ಬವು ಕೇವಲ ದಾರ ಕಟ್ಟುವುದಲ್ಲ, ಬದಲಾಗಿ ಸಹೋದರ ಮತ್ತು ಸಹೋದರಿಯ ನಡುವಿನ ಬಲವಾದ ಸಂಬAಧವನ್ನು ಸಂಕೇತಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಘ ಆಶಾರಾಣಿ ಮಾಲವಾಡೆಕರ, ರೋಶನಬಿ ಮುಲ್ಲಾ , ಶೋಭಾ ಲೌವಂಗಿ, ಪರವೀನ ಮುಲ್ಲಾ, ಜ್ಯೋತಿ ಮರಬಗಿ, ಸುಶೀಲಾ ನಡುವಿನಕೇರಿ, ಸುನಂದಾ ಕಾಂಬಳೆ, ನೀಲಮ್ಮ ಹೇಳವಾರ, ರವಿ ಮಲಕಗೊಂಡ, ಅಲ್ತಾಫ ಡೋಣೂರ ಮತ್ತಿತರರು ಉಪಸ್ಥಿತರಿದ್ದರು.