ನಿಂಬೆ ನಾಡಿನ ಜಹೀರ ಅತನೂರ ರಾಜ್ಯಕ್ಕೆ ಎರಡನೇ ರಾಂಕ್..!
ಇಂಡಿ: ಕರ್ನಾಟಕ ಕಾನೂನು ಸೇವಗಳ ಸಿವಿಲ್ ಜಡ್ಜ್ ನೇರ ನೇಮಕಾತಿ ಪರೀಕ್ಷೆಯಲ್ಲಿ ತಾಲೂಕಿನ ಸಾಲೂಟಗಿ ಗ್ರಾಮದ ಅತನೂರ ಮನೆತನದ ವಕೀಲರು ಜಹೀರ ಅತನೂರ ರಾಜ್ಯಕ್ಕೆ ಎರಡನೇ ರಾಂಕ್ ಪಡೆದು ಸಿವಿಲ್ ಜಡ್ಜ್ ಯಾಗಿ ನೇಮಕವಾಗಿದ್ದಾರೆ. ಜಿಲ್ಲೆಯ ಕಿರಿಯ ವಯಸ್ಸಿನ ವಕೀಲ ಜಹೀರ ಅತನೂರ ಸಾಧನೆಗೆ ಇಂಡಿ ಪಟ್ಟಣದ ಬಿ.ಎಲ್.ಈ ಸಂಸ್ಥೆ ಹಾಗೂ ಪಟ್ಟಣದ ಯುವಕರು ಸನ್ಮಾನಿಸಿ ಹರ್ಷ ವ್ಯಕ್ತಪಡಿಸಿದರು.
ಇವರು ವಿಜಯಪುರದಲ್ಲಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಸ್ನಾತಕೋತ್ತರ ಅಧ್ಯಯನ ಪೂರೈಸಿರುವ ಇವರು ಬೆಳಗಾವಿಯ ಬಿ.ವಿ.ಬೆಲ್ಲದ ಕಾನೂನು ಕಾಲೇಜೀನಲ್ಲಿ ಕಾನೂನು ಪದವಿ ಪಡೆದಿದ್ದಾರೆ. ವಿಜಯಪುರ ನ್ಯಾಯಾಲಯ ಹಾಗೂ ಕಲಬುರಗಿ ಉಚ್ಚ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದರು. ಜಹೀರ ಅತನೂರ ಅವರ ತಂದೆಯವರು ಸಹ ವಕೀಲರಾಗಿದ್ದಾರೆ.
ಈ ಸಂದರ್ಭದಲ್ಲಿ ಬಿ.ಎಲ್.ಈ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸದ್ದಾಂ ಹುಸೇನ ಜಮಾದಾರ, ಜುಬೇರ ಇಂಡಿಕರ, ಇರ್ಶಾದ ಬೋರಾಮಣಿ, ನವಾಜ ಮಕಾಂದಾರ, ಮೌಲಾನಾ ಮುಕ್ತಾರ ಉಮರಿ, ಸದ್ದಾಂ ಆಳಗಿ, ಶಕೀಲ್ ಅರಬ, ರಫೀಕ ಶೇಖ್, ಇಮ್ರಾನ ಮಕಾಂದಾರ ಸೇರಿದಂತೆ ಇತರರು ಇದ್ದರು.