ಜ- 21,22 ಗಿರಿಜಾ ಮಾತಾಜಿಯವರ 85ನೇ ಪುಣ್ಯರಾಧನೆ
ಇಂಡಿ : ತಾಲೂಕಿನ ಹಿರೇರೂಗಿ ಗ್ರಾಮದ ಶ್ರೀ ಗುರುಬಸವಲಿಂಗ ಗಿರಿಜಾ ಮಾತಾಜಿಯವರ 85ನೇ ಪುಣ್ಯರಾಧನೆ ಹಾಗೂ ಜಾತ್ರಾ ಮಹೋತ್ಸವ ಜನವರಿ 21 ಮತ್ತು 22 ರಂದು ನಡೆಯಲಿದೆ ಎಂದು ಜಾತ್ರಾ ಕಮಿಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
21ರಂದು ಗೋಳಸಾರದ ಅಭಿನವ ಪುಂಡಲಿಂಗ ಮಹಾರಾಜರ ಅಮೃತ ಹಸ್ತದಿಂದ ಬೆಳಿಗ್ಗೆ 9 ಗಂಟೆಗೆ ಧರ್ಮ ಧ್ವಜಾರೋಹಣ ನಡೆಯಲಿದ್ದು, ಜಾತ್ರಾ ಮಹೋತ್ಸವದ ಪಾವನ ಸಾನಿಧ್ಯವನ್ನು ಬಂಥನಾಳ ಲಚ್ಯಾಣ ಮಠದ ವೃಷಭ ಲಿಂಗ ಮಹಾಶಿವಯೋಗಿಗಳು ವಹಿಸಿಕೊಳ್ಳಲಿದ್ದಾರೆ. ಇನ್ನೂ ಸಮ್ಮುಖವನ್ನು ಮುರುಗೇಂದ್ರ ಮಹಾಸ್ವಾಮಿಗಳು, ನೇತೃತ್ವವನ್ನು ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಅಧ್ಯಕ್ಷತೆಯನ್ನು ಶಾಸಕ ಯಶವಂತರಾಯಗೌಡ ಪಾಟೀಲ್ ವಹಿಸಲಿದ್ದಾರೆ.
21ರಂದು ಬೆಳಿಗ್ಗೆ 11 ಗಂಟೆಗೆ ಗಿರಿಜಾ ಮಾತಾಜಿಯವರ ಗೋಪುರಕ್ಕೆ ಕಳಸಾ ರೋಹಣ ಹಾಗೂ ಸಪ್ತಾಹ ಕಾರ್ಯಕ್ರಮ, ಅದೇ ದಿನ ರಾತ್ರಿ 9:00 ಗಂಟೆಗೆ ವಿದ್ಯಾಶ್ರೀ ಮಸಬಿನಾಳ ಹಾಗೂ ಸುರೇಶ್ ಹಂಗರಗಿ ಅವರಿಂದ ಸುಪ್ರಸಿದ್ಧ ನಾಗೇಶಿ ಗೀಗೀ ಪದಗಳು, 22ರಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ ಶ್ರೀ ಗುರು ಬಸವಲಿಂಗ ಗಿರಿಜಾ ಮಾತಾಜಿಯವರ ಅಕ್ಷತಾರೋಹಣ ಕಾರ್ಯಕ್ರಮ ನಡೆಯುವುದು ತದನಂತರ ಅನ್ನಪ್ರಸಾದ ಹಾಗೂ ಡೊಳ್ಳಿನ ಪದಗಳು ಕಾರ್ಯಕ್ರಮ ಜರುಗಲಿದೆ ಸಾಯಂಕಾಲ 4:00ಗೆ ವೃಷಭ ಲಿಂಗ ಮಹಾಶಿವಯೋಗಿಗಳ ಅಮೃತ ಹಸ್ತದಿಂದ ಜಂಗಿ ನಿಕಾಲಿ ಕುಸ್ತಿಗಳ ಉದ್ಘಾಟನೆ ಜರುಗುವುದು, ಸಾಯಂಕಾಲ 5:00 30 ನಿಮಿಷಕ್ಕೆ ಲಿಂಗಕ್ಕೆ ಸಂಗನಬಸವ ಮಹಾಸ್ವಾಮಿಗಳ ಭಾವಚಿತ್ರದ ಅಡ್ಡ ಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ಜರುಗುವುದು ತಾಲೂಕಿನ ಸಮಸ್ತ ಭಕ್ತವೃಂದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಪುನೀತರಾಗಬೇಕೆಂದು ಜಾತ್ರಾ ಕಮಿಟಿ ಪ್ರಕಟಣೆ ತಿಳಿಸಿದೆ.



















