ಲಿಂಗಸೂಗೂರು: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸತತ ಐದು ದಿನಗಳ ಕಾಲ ನಡೆದ ಈಚನಾಳ ಗ್ರಾಮ ದ ಗದ್ದೆಮ್ಮ ದೇವಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಇಂದು ಜಾತ್ರಾ ಕೊನೆಯ ದಿನವಾಗಿದ್ದರಿಂದ ದೇವರಗಡ್ಡಿ ಗದ್ದೆಮ್ಮ ದೇವಿ ಯನ್ನು ಈಚನಾಳ ಗ್ರಾಮ ದಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಅದ್ದೂರಿಯಾಗಿ ಬಿಳ್ಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಆದಪ್ಪ ಮೇಟಿ, ಜೆಡಿಎಸ್ ರಾಜ್ಯ ಯುವ ಮುಖಂಡ ಸಿದ್ದು ಬಂಡಿ, ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ರೂಪಾ ನಾಯಕ, ಲಿಂಗಸುಗೂರು ರೈತ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಜಾಗೀರನಂದಿಹಾಳ, ಬಸವರಾಜ ಮಾಕಾಪುರ, ಆನಂದ ಕುಂಬಾರ, ಇನ್ನಿತರರಿದ್ದರು.