ಪತ್ರಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾದ ಅನಿವಾರ್ಯತೆ
ವಿಜಯಪುರ : ಬಡ ವಿದ್ಯಾರ್ಥಿಗಳಿಗೆ ಉಚಿತ ಸೀಟು ಕೊಡಿಸುವ ಮೂಲಕ ವೇದಿಕೆಯಾಗುವ ಪತ್ರಿಕೆಗಳು ಮಾನವ ಕಳಕಳಿಯ ಪ್ರತಿಬಿಂಬಗಳು ಕೂಡಾ ಹೌದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.
ವಿಜಯಪುರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೀಟು ತೆಗೆದುಕೊಳ್ಳಲು ಪರದಾಡುವ ಬಡ ವಿದ್ಯಾರ್ಥಿಗಳು, ಚಿಕಿತ್ಸೆಗಾಗಿ ಹಂಬಲಿಸುವ ಬಡ ರೋಗಿಗಳು ಹೀಗೆ ಎಲ್ಲ ವಿಷಯಗಳನ್ನು ಮಾನವೀಯ ಅಂತ:ಕರಣ ದೊಂದಿಗೆ, ಆ ಸುದ್ದಿಗಳನ್ನು ಪ್ರತಿಬಿಂಬಿಸುವ ಪತ್ರಿಕೆಗಳಿಂದಾಗಿ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಸೀಟು ದೊರಕಿದೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕಿದೆ ಎಂದರು.
ಒAದು ಸಾರಿ ಇದೇ ತೆರನಾಗಿ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ಸಂದರ್ಭದಲ್ಲಿ ಸಂತೋಷಗೊAಡ ಆ ವಿದ್ಯಾರ್ಥಿ `ಸರ್ ನನ್ನ ವಿಷಯ ಪತ್ರಿಕೆಯಲ್ಲಿ ಬಂದಿದೆ, ಇನ್ನೋರ್ವ ನನ್ನ ಸ್ನೇಹಿತ ನನಗಿಂತ ಕಡುಬಡವ ಆತನಿಗೂ ಅನುಕೂಲ ಮಾಡಿ ಹೇಳಿದ, ಆಗ ಆ ಹೃದಯ ವೈಶ್ಯಾಲ್ಯತೆಯಿಂದ ಮನಸೋತ ನಾನು ಆ ವಿದ್ಯಾರ್ಥಿಗೂ ಅನುಕೂಲ ಮಾಡಿದೆ, ಹೀಗೆ ಇಬ್ಬರಿಗೂ ಅನುಕೂಲವಾಯಿತು, ಈ ಕಾರಣದಿಂದಾಗಿಯೇ ಪತ್ರಿಕೆಗಳು ಈ ರೀತಿಯ ವಿಷಯಗಳನ್ನು ಬೆಳಕಿಗೆ ತರಲು ಸಾಧ್ಯ ಎಂದರು.
ಆಧುನಿಕ ಮಾಧ್ಯಮಗಳಿಂದ ಪತ್ರಿಕೆಗಳು ಅಸ್ತಿತ್ವವೇ ಕಳೆದುಕೊಳ್ಳಲಿವೆ ಎಂದು ಅನೇಕರು ಭಾವಿಸಿದ್ದರು, ಪರಿಸ್ಥಿತಿ ಸಹ ಅದೇ ರೀತಿ ಭಾಸವಾಗುವಂತೆ ಮಾಡಿದ್ದರು, ಆದರೆ ಇಂದಿಗೂ ಪತ್ರಿಕೆ ಓದಿದರೆ ಸಮಾಧಾನ, ಹೀಗಾಗಿ ಪತ್ರಿಕೆಗಳು ಇಂದಿಗೂ ಬಹುಮುಖ್ಯ ಪಾತ್ರ ವಹಿಸಿವೆ ಎಂದರು.
ರಾಜ್ಯಸಭೆ ಹಾಗೂ ವಿಧಾನ ಪರಿಷತ್‌ಗಳು ಅಂದಿನ ಅನುಭವ ಮಂಟಪದ ಸ್ವರೂಪಗಳು, ಚುನಾವಣೆಯಿಂದ ಆಯ್ಕೆಯಾಗಲು ಸಾಧ್ಯವಾಗದ ಸಣ್ಣ ಸಮುದಾಯಗಳಿಗೆ, ಕ್ರೀಡೆ, ಪತ್ರಿಕೋದ್ಯಮ, ಸಾಹಿತ್ಯ, ಸಂಗೀತದಲ್ಲಿ ದಿಗ್ಗಜರು ಆಡಳಿತಕ್ಕೆ ಮಾರ್ಗದರ್ಶನ ನೀಡಲು ರಾಜ್ಯಸಭೆ, ವಿಧಾನ ಪರಿಷತ್ ಅಸ್ತಿತ್ವದಲ್ಲಿವೆ, ಆದರೆ ಈಗ ಅವುಗಳು ಸಹ ರಿಯಲ್ ಎಸ್ಟೇಟ್ ಉದ್ಯಮಿದಾರರ ತಾಣವಾಗುತ್ತಿರುವುದು ನೋವಿನ ಸಂಗತಿ ಎಂದರು.
ವಚನಪಿತಾಮಹ ಡಾ.ಫ.ಗು. ಹಳಕಟ್ಟಿ, ಮೊಹರೆ ಹನುಮಂತರಾಯರAತಹ ಅನೇಕ ಧೀಮಂತ ಪತ್ರಕರ್ತರು ಪತ್ರಿಕಾ ಕ್ಷೇತ್ರವನ್ನು ಬೆಳಗಿದ್ದಾರೆ ಎಂದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಪತ್ರಕರ್ತರ ಭವನಕ್ಕೆ ಪೂರಕ ಸೌಲಭ್ಯ ಹಾಗೂ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ೧೦ ಲಕ್ಷ ರೂ. ಅನುದಾನ ಒದಗಿಸುವುದಾಗಿ ವಾಗ್ದಾನ ಮಾಡಿದರು.
ಪತ್ರಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾದ ಅನಿವಾರ್ಯತೆ ಕಾನಿಪ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ನೈಜ ಪತ್ರಕರ್ತರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ತಾವೇ ಹೋರಾಟ ಮಾಡುವ ಅವಶ್ಯಕತೆ ಇದೆ, ಇಂದಿನ ಬ್ಲಾಕ್‌ಮೇಲ್ ಮಾಡುವ ಕೆಲವು ವಿಸಿಟಿಂಗ್ ಕಾರ್ಡ್ ಪತ್ರಕರ್ತರ ಮಧ್ಯೆ ನೈಜತೆ, ನಿಖರತೆಯ ಜವಾಬ್ದಾರಿ ನಿಭಾಯಿಸುವತ್ತ ಮುನ್ನಡೆಯಬೇಕಿದೆ ಎಂದರು.
ಸದುದ್ದೇಶದಿಂದ ಪತ್ರಿಕೋದ್ಯಮಕ್ಕೆ ಧುಮುಕುವ ಎಲ್ಲರಿಗೂ ಬೆನ್ನು ತಟ್ಟಿ ಪ್ರೋತ್ಸಾಹಿಸೋಣ, ಬ್ಲಾಕ್ ಮೇಲ್ ಅನುಸರಿಸಿ ಪತ್ರಿಕೋದ್ಯಮದ ಪವಿತ್ರ ವೃತ್ತಿಗೆ ಮಸಿ ಬಳಿಯುವವರ ವಿರುದ್ಧ ಧ್ವನಿ ಎತ್ತೋಣ, ಇಂದು ಕಳೆದು ಹೋಗಿರುವ ಪತ್ರಿಕೋದ್ಯಮದ ಘನತೆ ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಕಂಕಣ ಬದ್ದರಾಗೋಣ ಎಂದರು.
ಬ್ರೇಕಿAಗ್ ನ್ಯೂಸ್ ಧಾವಂತದಿAದ ಅನೇಕರ ಮನಸ್ಸುಗಳಿಗೆ ಬ್ರೇಕ್ ಆಗಿದ್ದುಂಟು, ಅನೇಕರಿಗೆ ಘಾಸಿಉಂಟಾಗಿದ್ದುAಟು. ನಮ್ಮ ಸುದ್ದಿಗಳಿಂದ ಇನ್ನೊಬ್ಬರ ಮನಸ್ಸಿಗೆ ಘಾಸಿಯಾಗಬಹುದು ಎಂಬ ಪ್ರಜ್ಷೆ ಪ್ರತಿಯೊಬ್ಬರಲ್ಲಿ ಇರಬೇಕು ಎಂದರು.
ಕಾನಿಪ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಅಶೋಕ ಯಡಹಳ್ಳಿ ಮಾತನಾಡಿ, ಮಹತ್ವದ ಜವಾಬ್ದಾರಿಯನ್ನು ಪತ್ರಕರ್ತ ಬಾಂಧವರು ನನ್ನ ಹೆಗಲಿಗೆ ಏರಿಸಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪತ್ರಕರ್ತರ ಧ್ವನಿಯಾಗಿ ಕಾರ್ಯ ಮಾಡುವೆ, ಎಲ್ಲರ ಆಶೀರ್ವಾದವೇ ನನಗೆ ಶ್ರೀರಕ್ಷೆ ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷö್ಮಣ ನಿಂಬರಗಿ, ಹಿರಿಯ ಪತ್ರಕರ್ತ ಗೋಪಾಲ ನಾಯಕ, ಕಾನಿಪ[ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ರಾಜ್ಯ ಕಾರ್ಯದರ್ಶಿ ಪುಂಡಲೀಕ ಬಾಳೋಜಿ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಪ್ರಕಾಶ ಬೆಣ್ಣೂರ, ಉಪಾಧ್ಯಕ್ಷರಾದ ಶಶಿಕಾಂತ ಮೆಂಡೆಗಾರ, ಬಸವರಾಜ ಉಳ್ಳಾಗಡ್ಡಿ, ಮೊಹ್ಮದ್ ಸಮೀರ್ ಇನಮಾಮದಾರ, ಕಾರ್ಯದರ್ಶಿಗಳಾದ ಅವಿನಾಶ ಬಿದರಿ, ಸದ್ದಾಂ ಹುಸೇನ ಜಮಾದಾರ, ವಿನೋದ ಸಾರವಾಡ, ಕೋಶಾಧ್ಯಕ್ಷ ರಾಹುಲ್ ಆಪ್ಟೆ, ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯರು, ವಿವಿಧ ಪದಾಧಿಕಾರಿಗಳು, ತಾಲೂಕಾ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಎಲ್ಲ ತಾಲೂಕಾ ಘಟಕದ ಪದಾಧಿಕಾರಿಗಳಿಗೆ ಹೃದಯಸ್ಪರ್ಶಿಯಾಗಿ ಅಭಿನಂದಿಸಲಾಯಿತು.
ಇದೇ ವೇಳೆ ಹಿರಿಯ ಪತ್ರಕರ್ತ ಗೋಪಾಲ ನಾಯಕ ಅವರು ರಚಿಸಿದ `ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳ ಸೂಕ್ತಿಗಳು’ ಪುಸ್ತಕ ಲೋಕಾರ್ಪಣೆಗೊಂಡಿತು.


















