ಕಮಲಾಪುರ ತಾಲೂಕಿನ ಮಹಾಗಾಂವ ಕಳ್ಳಿಮಠದಲ್ಲಿ ಜರುಗಿದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ.
ಕಮಲಾಪುರ ತಾಲೂಕಿನ ಮಹಾಗಾಂವ
ಕಳ್ಳಿಮಠದ ಶ್ರೀ ವಿರೂಪಾಕ್ಷ ದೇವರು ಶಾಲಾ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು,
ಕಮಲಾಪುರ : ಜನ್ಮ ನೀಡಿದ ತಾಯಿ ಹಾಗೂ ಜನ್ಮಭೂಮಿಯ ಖುಣ ತೀರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ, ನೀವು ಸಮಾಜದ ಒಳಿತಿಗಾಗಿ ಶ್ರಮಿಸಿದಾಗ ಮಾತ್ರ ಪಡೆದ ಶಿಕ್ಷಣ ಸಾರ್ಥಕವಾಗುತ್ತದೆ, ನಿರಂತರ ಅಧ್ಯಯನದಿಂದ ಅಂದುಕೊಂಡ ಯಶಸ್ಸು ದೊರಕುತ್ತದೆ ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಹೇಳಿದರು.
ಕಮಲಾಪುರ ತಾಲೂಕಿನ ಮಹಾಗಾಂವ ಗ್ರಾಮದಲ್ಲಿರುವ ಕಳ್ಳಿಮಠದಲ್ಲಿ ಶ್ರೀ ಮಹಾಂತೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ೭ ನೇ ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಯ ಮುಕ್ತವಾಗಿ ಪರಿಕ್ಷೆ ಎದುರಿಸಿದರೆ ಅಂದುಕೊಂಡ ಅಂಕ ಗಳಿಕೆ ಸಾಧ್ಯವಾಗುತ್ತದೆ, ಯಾವುದೇ ಕೊಸ್೯ ಸೇರಿದರು ಸಂಪೂರ್ಣ ಜ್ಞಾನ ಪಡೆದರೆ ನಿರ್ದಿಷ್ಟ ಗುರಿ ಸಾಧ್ಯವಾಗುತ್ತದೆ ಎಂದರು
ಕಲಬುರಗಿ ವಿಜಿ ವುಮೆನ್ಸ್ ನಿವೃತ್ತ ಉಪನ್ಯಾಸಕ ವಿಜಯಕುಮಾರ ಪರುತೆ ಮಾತನಾಡಿ ಪರೀಕ್ಷೆಯಲ್ಲಿ ಫೆಲ್, ಕಡಿಮೆ ಅಂಕ ಪಡೆದಾಗ ನೊಂದು ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಅದೇ ಅಂತಿಮವಲ್ಲ, ಏಕೆಂದರೆ ಹತ್ತನೇ ತರಗತಿಯಲ್ಲಿ ಫೇಲ್ ಆಗಿದ್ದ ಬಾಲಕ ಸಚೀನ ತೆಂಡೂಲ್ಕರ್ ಇಂದು ಕ್ರಿಕೆಟ್ ದೇವರೆನಿಸಿಕಂಡರು, ೬ ತರಗತಿ ಓದಿದ್ದ ರವಿಚಂದ್ರನ್ ಖ್ಯಾತ ಚಲನಚಿತ್ರ ನಟರಾಗಿದ್ದಾರೆ ಎಂದರು .
ನಿವೃತ್ತ ಉಪನ್ಯಾಸಕ ಡಾ.ಶಿವಲಿಂಗಯ್ಯ ಕಳ್ಳಿಮಠ ಮಾತನಾಡಿ ಮಠ ಮಾನ್ಯಗಳು ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರಗಳು ಬೆಳೆಸುವ ಕೇಂದ್ರಗಳಾಗಿವೆ, ನಮ್ಮಲ್ಲಿ ಶಿಕ್ಷಣ ಪಡೆದ ನೀವು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಿದರೆ ನಮಗೆ ಹೆಮ್ಮೆ ಎಂದರು.
ಈ ಸಂದರ್ಭದಲ್ಲಿ ಕಳ್ಳಿಮಠದ ಶ್ರೀ ವಿರೂಪಾಕ್ಷ ದೇವರು ಸಾನಿಧ್ಯ ವಹಿಸಿದ್ದರು. ನಿವೃತ್ತ ಉಪನ್ಯಾಸಕ ಡಾ. ಶಿವಲಿಂಗಯ್ಯ ಕಳ್ಳಿಮಠ, ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ನಿವೃತ್ತ ಶಿಕ್ಷಕ ಶರಣಬಸ್ಸಪ್ಪ ವಿರಶೆಟ್ಟಿ, ಮುಖ್ಯ ಗುರು ಅನೀಲಕುಮಾರ ಕೋರೆ, ರೇವಣಸಿದ್ದಪ್ಪ ನಿಂಬಾಜಿ, ಶಿವಯೋಗಿ ಕಳ್ಳಿಮಠ, ಮಹಾಗಾಂವ ಕಸಾಪ ವಲಯ ಅಧ್ಯಕ್ಷ ಅಂಬಾರಾಯ ಮಡ್ಡೆ, ಶೋಭಾ ಕಳ್ಳಿಮಠ, ಮುರುಘರಾಜೇಂದ್ರ ಹಿರೆಮಠ, ಸುಭಾಷ್ ಪಂಚಾಳ, ನಾಗಣ್ಣ ಕಳ್ಳಿಮಠ, ಸಂತೋಷ ಪಾಟೀಲ, ಪ್ರಕಾಶ ದಸ್ತಾಪುರ, ಸಂಜುಕುಮಾರ ಲೋಣಿ, ಶಶಿಕಲಾ ಜಮಾದಾರ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ದಾನೇಶ್ವರಿ ಹಿರೆಮಠ ಸ್ವಾಗತಿಸಿದರು, ಅಂಜಲಿ, ದಿವ್ಯಾ ಸ್ವಾಗತಿಸಿದರು, ಬಸಮ್ಮ ಗೌಡನೂರ ವಂದಿಸಿದರು.