Voiceofjanata.in : SPORTS News
IPL 2025 : ಇಂದು ಬಲಿಷ್ಠ SRH ಗೆ LSG ಸವಾಲು ಒಡ್ಡುತ್ತಾ..?
ಐಪಿಎಲ್ 2025 : ರ ಏಳನೇ ಪಂದ್ಯ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಐಪಿಎಲ್ 2025ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಜಯಗಳಿಸುವ ಮೂಲಕ ಪ್ಯಾಟ್ ಕಮ್ಮಿನ್ಸ್ ಮುನ್ನಡೆಸುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಗೆಲುವು ಕಂಡಿದೆ. ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲ ಪಂದ್ಯ ಸೋತಿರುವ ರಿಷಭ್ ಪಂತ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಗೆಲುವಿನ ಹುಡುಕಾಟದಲ್ಲಿದೆ.
ಹೈದರಾಬಾದ್ ಮೊದಲ ಪಂದ್ಯದಲ್ಲಿ 286 ರನ್ ಗಳಿಸಿತ್ತು. ಇದರಲ್ಲಿ ಇಶಾನ್ ಕಿಶನ್ ಅಜೇಯ 106 ರನ್ ಗಳಿಸಿದರು. ಎಸ್‌ಆರ್‌ಹೆಚ್ ತಂಡ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಮತ್ತು ಹೆನ್ರಿಕ್ ಕ್ಲಾಸೆನ್‌ರಂಥ ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಲಕ್ನೋ ಮೊದಲ ಪಂದ್ಯದಲ್ಲಿ 200ಕ್ಕೂ ಹೆಚ್ಚು ರನ್ ಗಳಿಸಿತ್ತು. ಎರಡು ಬಲಿಷ್ಠ ಬ್ಯಾಟಿಂಗ್ ಲೈನ್ಅಪ್ ಹೊಂದಿದೆ. ಹೀಗಾಗಿ ಇಂದು ರನ್ ಸುನಾಮಿ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಸಂಭಾವ್ಯ ಪ್ಲೇಯಿಂಗ್-11
ಸನ್‌ರೈಸರ್ಸ್ ಹೈದರಾಬಾದ್
ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್‌ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅಭಿನವ್ ಮನೋಹರ್, ಅನಿಕೇತ್ ವರ್ಮಾ, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ ಮತ್ತು ರಾಹುಲ್ ಚಹಾರ್.
ಲಕ್ನೋ ಸೂಪರ್ ಜೈಂಟ್ಸ್
ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ರಿಷಬ್ ಪಂತ್ (ನಾಯಕಿ ಮತ್ತು ವಿಕೆಟ್‌ಕೀಪರ್), ನಿಕೋಲಸ್ ಪೂರನ್, ಆಯುಷ್ ಬಡೋನಿ, ಡೇವಿಡ್ ಮಿಲ್ಲರ್, ಶಹಬಾಜ್ ಅಹ್ಮದ್, ಪ್ರಿನ್ಸ್ ಯಾದವ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್ ಮತ್ತು ದಿಗ್ವೇಶ್ ರಾಠಿ.
ವೇಳಾಪಟ್ಟಿ
ದಿನಾಂಕ: ಗುರುವಾರ, ಮಾರ್ಚ್ 27
ಸಮಯ: ಸಂಜೆ 7:30
ಸ್ಥಳ: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್
ನಾಯಕರು: ಪ್ಯಾಟ್ ಕಮ್ಮಿನ್ಸ್ (ಎಸ್‌ಆರ್‍ಹೆಚ್), ರಿಷಭ್ ಪಂತ್ (ಎಲ್‌ಎಸ್‌ಜಿ)