Voiceofjanata.in : Sports News
IPL : MI vs GJ ಇಂದು ಸೋತವರ ಹೈವೊಲ್ಟೇಜ್ ಕದನ
IPL 2025;: ಇವತ್ತು ಐಪಿಎಲ್ ಅಖಾಡದಲ್ಲಿ ಸೋತವರ ಕದನ ನಡೀತಿದೆ. ಗುಜರಾತ್ ಟೈಟನ್ಸ್, ಮುಂಬೈ ಇಂಡಿಯನ್ಸ್ ತಂಡಗಳು ಇಂದು ಮುಖಾಮುಖಿ ಆಗಲಿವೆ.
ಮಾರ್ಚ್ 29ರ ಶನಿವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದ್ದು, ಉಭಯ ತಂಡಗಳು ಟೂರ್ನಿಯ ಮೊದಲ ಗೆಲುವಿಗೆ ಎದುರು ನೋಡುತ್ತಿವೆ. ತವರು ಕ್ರೀಡಾಂಗಣದಲ್ಲಿ ಗುಜರಾತ್ ತಂಡ ಆಡಿದ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಕಂಡಿತ್ತು. ಹೀಗಾಗಿ ತವರಿನ ಅಭಿಮಾನಿಗಳ ಮುಂದೆ ಶುಭ್ಮನ್ ಗಿಲ್ ಬಳಗಕ್ಕೆ ಗೆಲುವು ಅನಿವಾರ್ಯವಾಗಿದೆ.
ಮೊದಲ ಗೆಲುವಿನ ಹುಡುಕಾಟದಲ್ಲಿರುವ ಮುಂಬೈ ಇಂಡಿಯನ್ಸ್ ಚೆನ್ನೈನಿಂದ ಅಹ್ಮದಬಾದ್ಗೆ ಬಂದಿಳಿದಿದೆ. ತವರಿನಲ್ಲೇ ಸೋತಿರುವ ಗುಜರಾತ್, ಸೋತಲ್ಲೇ ಗೆಲುವಿನ ಕನಸು ಕಾಣ್ತಿದೆ. ಹೀಗೆ ಗೆಲುವಿನ ಹುಡುಕಾಟದಲ್ಲಿರುವ ಉಭಯ ತಂಡಗಳ ನಡುವಿನ ಇಂದಿನ ಫೈಟ್ನಲ್ಲಿ ಸ್ಟಾರ್ ಆಟಗಾರರೇ ಸೆಂಟರ್ ಆಫ್ ಅಟ್ರಾಕ್ಷನ್.
ಗುಜರಾತ್ ಟೈಟಾನ್ಸ್ ಸಂಭಾವ್ಯ ತಂಡ
ಶುಭ್ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಶಾರುಖ್ ಖಾನ್, ಗ್ಲೆನ್ ಫಿಲಿಪ್ಸ್, ಸಾಯಿ ಕಿಶೋರ್, ರಶೀದ್ ಖಾನ್, ಕಗಿಸೊ ರಬಾಡ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ. (ಇಂಪ್ಯಾಕ್ಟ್ ಆಟಗಾರ: ಇಶಾಂತ್ ಶರ್ಮಾ / ರಾಹುಲ್ ತೆವಾಟಿಯಾ)
ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ
ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್ (ವಿಕೆಟ್ ಕೀಪರ್), ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧಿರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್, ಟ್ರೆಂಟ್ ಬೌಲ್ಟ್, ಸತ್ಯನಾರಾಯಣ ರಾಜು. (ಇಂಪ್ಯಾಕ್ಟ್ ಆಟಗಾರ: ವಿಘ್ನೇಶ್ ಪುತ್ತೂರು/ ಕಾರ್ಬಿನ್ ಬಾಷ್)



















