Voiceofjanata.in : IPL 2025
IPL 2025 : ಇಂದು ಗುಜರಾತ್ ಟೈಟನ್ಸ್ – ಪಂಜಾಬ್ ಕಿಂಗ್ಸ್ ತಂಡಗಳು ತೊಡೆ ತಟ್ಟುತ್ತಿವೆ.
Sports NEWS ಐಪಿಎಲ್ 2025 : ರ ಸೀಸನ್ ಅತ್ಯಂತ ಸಡಗರದಿಂದ ನಡೆಸುತ್ತಿದೆ. ಇಂದು ಅಂದರೆ, ಮಂಗಳವಾರ ಐಪಿಎಲ್ 2025ರ ಐದನೇ ಪಂದ್ಯದಲ್ಲಿ ಭವಿಷ್ಯದ ನಾಯಕರು ಸೆಣಸಾಟ ನಡೆಸಲಿದ್ದಾರೆ. ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿರುವ ಪಂಜಾಬ್ ಕಿಂಗ್ಸ್ ಮತ್ತು ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮತ್ತೊಂದು ಮೆಗಾ ಬ್ಯಾಟಲ್ಗೆ ವೇದಿಕೆ ಸಜ್ಜಾಗಿದೆ. ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟನ್ಸ್ – ಪಂಜಾಬ್ ಕಿಂಗ್ಸ್ ತಂಡಗಳು ತೊಡೆ ತಟ್ಟಲು ಸಜ್ಜಾಗಿವೆ. ಈ ಹಿಂದಿನದ್ದೇ ಒಂದು ಲೆಕ್ಕ.. ಈ ಸೀಸನ್ನಿಂದಲೇ ಒಂದು ಲೆಕ್ಕಾ.. ಅಂತಾ ಅಖಾಡಕ್ಕಿಳಿಯಲು ಉಭಯ ತಂಡಗಳು ರೆಡಿಯಾಗಿವೆ.
ಸಂಭಾವ್ಯ ಪ್ಲೇಯಿಂಗ್-11
ಗುಜರಾತ್ ಟೈಟಾನ್ಸ್
ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ಕೀಪರ್), ಸಾಯಿ ಸುದರ್ಶನ್, ಗ್ಲೆನ್ ಫಿಲಿಪ್ಸ್, ವಾಷಿಂಗ್ಟನ್ ಸುಂದರ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಕಗಿಸೊ ರಬಾಡ ಮತ್ತು ಮೊಹಮ್ಮದ್ ಸಿರಾಜ್.
ಪಂಜಾಬ್ ಕಿಂಗ್ಸ್
ಪ್ರಭಾಸಿಮ್ರಾನ್ ಸಿಂಗ್, ಜೋಶ್ ಇಂಗ್ಲಿಸ್ (ವಿಕೆಟ್ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೊಯಿನಿಸ್, ಶಶಾಂಕ್ ಸಿಂಗ್, ಹರ್ಪ್ರೀತ್ ಬ್ರಾರ್, ಮಾರ್ಕೊ ಜಾನ್ಸೆನ್, ಅರ್ಷ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ವಿಜಯ್ಕುಮಾರ್ ವೈಶಾಕ್.


















