IPL 2024 :T20 ಮ್ಯಾಚ್ ಲ್ಲಿ 523 ರನ್ ಕಲೆ ಹಾಕಿರುವ ಹೊಸ ದಾಖಲೆ..!
ಒಂದೇ ಪಂದ್ಯದಲ್ಲಿ 38 ಸಿಕ್ಸ್ ಬಾರಿಸಿದ್ದು ಹೊಸ ದಾಖಲೆ
ಮುಂಬೈ: ಐಪಿಎಲ್ 2024 ರ 17 ನೇ ಅವೃತ್ತಿಯ 8 ನೇ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮೊತ್ತ 277 ರನ್ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಸನ್ ರೈಜರ್ಸ ಹೈದರಾಬಾದ್ ತಂಡ ಕಲೆಹಾಕಿದೆ.
ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2024 ರಲ್ಲಿ ಸತತ ಎರಡನೇ ಸೋಲನ್ನು ಎದುರಿಸಿದೆ. ಬುಧವಾರ ನಡೆದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ (MI) ತಂಡವನ್ನು ಸನ್‌ರೈಸರ್ಸ್ ಹೈದರಾಬಾದ್ (SRH) 31 ರನ್‌ಗಳಿಂದ ಸೋಲಿಸಿತು. ಸನ್‌ರೈಸರ್ಸ್ ಹೈದರಾಬಾದ್ (SRH) ಮೊದಲು ಬ್ಯಾಟಿಂಗ್ ಮಾಡಿ, 3 ವಿಕೆಟ್ ನಷ್ಟಕ್ಕೆ 277 ರನ್ ಕಲೆ ಹಾಕಿತು. ಇದು ಐಪಿಎಲ್‌ನಲ್ಲಿ ಹೊಸ ದಾಖಲೆಯಾಗಿದೆ.
ಮುಂಬೈ ಇಂಡಿಯನ್ಸ್ (MI) ತಂಡವೂ ಕಠಿಣ ಸವಾಲನ್ನು ನೀಡಿತು. ಉತ್ತಮ ಆರಂಭವನ್ನು ಪಡೆದರೂ 5 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಪಂದ್ಯದಲ್ಲಿ ಒಟ್ಟು 523 ರನ್ ಗಳಿಸಿದ್ದು ಐಪಿಎಲ್ ನಲ್ಲಿ ಹೊಸ ದಾಖಲೆಯಾಗಿದೆ. ಅಷ್ಟೇ ಅಲ್ಲ, ಈ ಪಂದ್ಯದಲ್ಲಿ 38 ಸಿಕ್ಸರ್‌ಗಳನ್ನ ಬಾರಿಸಿದ್ದು, ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆಯಾಗಿದೆ.