Voice Of Janata : Sports News :IPL 2024 :
GT Vs SRH
IPL 2024: ಸನ್ ರೈಜರ್ಸ ವಿರುದ್ಧ ಬೇಟಿಯಾಡಿದ ಗುಜರಾತ್ ಟೈಟನ್ಸ್
DESK NEWS : ಡೇವಿಡ್ ಮಿಲ್ಲರ್ ಮತ್ತು ಸಾಯಿ ಸುದರ್ಶನ್ ಬ್ಯಾಟ್‌ನೊಂದಿಗೆ ಗಮನಾರ್ಹ ಕೊಡುಗೆಯೊಂದಿಗೆ ಗುಜರಾತ್ ಟೈಟಾನ್ಸ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಏಳು ವಿಕೆಟ್‌ಗಳ ಆರಾಮದಾಯಕ ಜಯವನ್ನು ದಾಖಲಿಸಿದೆ.
ಆಲ್‌ರೌಂಡ್ ಆಟವಾಡಿದ ಗುಜರಾತ್ ಟೈಟನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡದ ‘ಓಟ’ಕ್ಕೆ ತಡೆಯೊಡ್ಡಿತು.
ಐಪಿಎಲ್ 2024ರ 12ನೇ ಪಂದ್ಯವು ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ (SRH vs GT) ನಡುವಿನ ಪಂದ್ಯವು ಗುಜರಾತ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಮಾಡಿ ಗುಜರಾತ್ ಟೈಟಾನ್ಸ್‌ಗೆ 163 ರನ್‌ಗಳ ಟಾರ್ಗೆಟ್ ನೀಡಿತು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದಂತಹ ಹೈದರಾಬಾದ್ ಬ್ಯಾಟರ್ಗಳು ಜಿಟಿ ವಿರುದ್ಧ ಸ್ಪಿನ್ ದಾಳಿಗೆ ಉತ್ತರಿಸಲಾಗದೇ ತೆಣಕಾಡಿದರು. ಆದರೂ ಅಂತಿಮವಾಗಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾದರು. ಈ ಮೊತ್ತ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡವು ನಿಗದಿತ 19.1 ಓವರ್ಗೆ 3 ವಿಕೆಟ್ ನಷ್ಟಕ್ಕೆ 168 ರನ್ ಗಳಿಸುವ ಮೂಲಕ 7 ವಿಕೆಟ್ ಗಳಿಂದ ಗೆಲುವು ಸಾಧಿಸಿತು.