Voice of Janata : Sports NEWS : IPL 2024 :
KKR Vs RR
Voiceofjanata Desk NEWS : ಕೊಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ಮಂಗಳವಾರ ರಾತ್ರಿ ನಡೆದ ಐಪಿಎಲ್ 2024 ಟೂರ್ನಿಯ 31ನೇ ಪಂದ್ಯದಲ್ಲಿ ಕೆಕೆಆರ್ ವಿರುದ್ದ 2 ವಿಕೆಟ್ ಗಳಿಂದ ರಾಜಸ್ಥಾನ ರಾಯಲ್ಸ್ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ್ದ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 224 ಗಳಿಸುವುದರೊಂದಿಗೆ ಗೆಲುವು ಸಾಧಿಸಿತು.
ಜೊಸ್ ಬಟ್ಲರ್ ಫ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
ಕೋಲ್ಕತಾ ನೈಟ್ ರೈಡರ್ಸ್: 20 ಓವರ್ಗಳಲ್ಲಿ 223/6
(ಸುನೀಲ್ ನರೇನ್ 109, ರಘುವಂಶಿ 30, ರಿಂಕು ಸಿಂಗ್ ಔಟಾಗದೆ 20, ಅವೇಶ್ ಖಾನ್ 2-35, ಕುಲದೀಪ್ ಸೇನ್ 2-46)
ರಾಜಸ್ಥಾನ ರಾಯಲ್ಸ್: 20 ಓವರ್ಗಳಲ್ಲಿ 224/8
(ಜೋಸ್ ಬಟ್ಲರ್ 74, ಪರಾಗ್ 34, ರೊವ್ಮನ್ ಪೊವೆಲ್ 26, ಸುನೀಲ್ ನರೇನ್ 2-30, ಹರ್ಷಿತ್ ರಾಣಾ 2-45, ವರುಣ್ ಚಕ್ರವರ್ತಿ 2-36)