2024 ರ ಲೋಕಸಭಾ ಚುನಾವಣೆಗೆ ಕೆ ಆರ್ ಎಸ್ ಪಕ್ಷದಿಂದ ಸ್ಪರ್ಧಿಸುವ ಆಕಾಂಕ್ಷಿಗಳಿಗೆ ಅರ್ಜಿಗಳ ಮೂಲಕ ಅಹ್ವಾನ..! ಸಂದರ್ಶನ..!
ಕರ್ನಾಟಕದ ಲೋಕಸಭಾದ ಎಲ್ಲಾ ಕ್ಷೇತ್ರದಗಳಲ್ಲಿ ಕೆ ಆರ್ ಎಸ್ ಪಕ್ಷ ಅಭ್ಯರ್ಥಿಗಳು ಕಣಕ್ಕೆ..
ವಿಜಯಪುರ : 2024 ರ ಲೋಕಸಭಾ ಚುನಾವಣೆಗೆ ಕರ್ನಾಟಕ ರಾಷ್ಟ್ರ ಪಕ್ಷ ಸಮಿತಿ ಚುನಾವಣೆ ಕಣಕ್ಕೆ ಇಳಿಯುವ ಅಭ್ಯರ್ಥಿಗಳ ಸಂದರ್ಶನಕ್ಕೆ ಕರೆಯಲಾಗಿದೆ ಎಂದು ಕೆ ಆರ್ ಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಅಶೋಕ ಜಾಧವ ಹೇಳಿದರು.
ವಿಜಯಪುರ ನಗರದಲ್ಲಿ ಸುದ್ದಿಗೊಷ್ಠಿ ಉದ್ದೇಶಿಸಿ ಮಾತಾನಾಡಿದ ಅವರು, ರಾಜ್ಯಾದ್ಯಂತ 28 ಲೋಕಸಭಾ ಕ್ಷೇತ್ರಗಳಲ್ಲಿ ಕೆ ಆರ್ ಎಸ್ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ರಾಜ್ಯಾಧ್ಯಕ್ಷರ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ.
2024 ಜನವರಿ 6 ಮತ್ತು 7 ರಂದು ಬೆಂಗಳೂರಿನ ಪಕ್ಷದ ಕಛೇರಿಯಲ್ಲಿ ಸಂದರ್ಶನ ಜರುಗುಲಿದೆ. ಅದಕ್ಕಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಹಾಲಿ ಆಕಾಂಕ್ಷೆಗಳಿಗೆ ರೂ 5 ಸಾವಿರ ಹಾಗೂ ಹೊಸದಾಗಿ ಸ್ಪರ್ಧಿಸುವ ನೀರಿಕ್ಷೆಯಲ್ಲಿರುವ ಅಭ್ಯರ್ಥಿಗಳಿ ರೂ 10 ಸಾವಿರ ಶುಲ್ಕ ನಿಗದಿ ಪಡಿಸಲಾಗಿದೆ. ಆಸಕ್ತ ಆಕಾಂಕ್ಷಿಗಳು ಸಂದರ್ಶನಕ್ಕೆ ಶುಲ್ಕ ಭರಸಿ ಹಾಜರಾಗಬೇಕು. ತದನಂತರ ರಾಜ್ಯ ಸಮಿತಿಯು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೆ ಎಂದು ಹೇಳಿದರು. ಸಾಮನ್ಯ ಜನರಿಗೆ ಉತ್ತಮ ರಾಜಕೀಯ ವೇದಿಕೆ ಕೆ ಆರ್ ಎಸ್ ಪಕ್ಷದಿಂದ ದೊರೆಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಂಡಿ ತಾಲೂಕ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ, ಪ್ರಧಾನ ಕಾರ್ಯದಶಿ ಲಕ್ಷ್ಮಣ ಚಡಚಣ, ಕಾರ್ಯದರ್ಶಿ ಅಜೀತ್ ಭಾವಿಕಟ್ಟಿ, ತಾಲೂಕಾ ರೈತ ಘಟಕ ಅಧ್ಯಕ್ಷ ಸುರೇಶ ನಿಂಬೋಣಿ ಮತ್ತು ಎಲ್ಲಾ ತಾಲೂಕಿನ ಸದಸ್ಯ ಉಪಸ್ಥಿತರಿದ್ದರು.