ಇಂಡಿ : ತಾಲೂಕಿನ ನಾದ ಬಿಕೆ ಗ್ರಾಮದಲ್ಲಿ ನೂತನ ಅಮೋಘ ಸಿದ್ಧೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಜಾತ್ರಾ ಮಹೋತ್ಸವ ಕಾರ್ಯಕ್ರಮ ಜರುಗಿತು.
ಬೆಳಗ್ಗೆ 9ಘಂಟೆಗೆ ಸುಕ್ಷೇತ್ರ ಸಾತಲಗಾಂವ ಪಿ.ಐ.ದಿಂದ ನಾದ ಬಿಕೆ ಅಮೋಘ ಸಿದ್ಧೇಶ್ವರ ದೇವಾಲಯದವರೆಗೆ ಪಲ್ಲಕ್ಕಿ ವಾದ್ಯ ಮೇಳಗಳೊಂದಿಗೆ ಆಗಮನವಾಯಿತು.
ಮಧ್ಯಾಹ್ನ ದೇವಾಲಯದ ಶಾಂತಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಭಾವಚಿತ್ರ ಪೂಜೆಯನ್ನು ಶ್ರೀ ಗುರುರಾಜ ಲಾಳಸಂಗಿ ಹಾಗೂ ಶ್ರೀ ಗಂಗಾಧರ ಮೂಲಿ ನೆರವೇರಿಸಿದರು.
ನಂತರ ಮಂಜುನಾಥ ಕಾಮಗೊಂಡ ಹಾಗೂ ನೀಲಕಂಠ ಬಿರಾದಾರ ಇವರು ಜ್ಯೋತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಧ್ಘಾಟನೆಯನ್ನು ಶ್ರೀ ರುದ್ರಗೌಡ ಆಲಗೊಂಡ ರೋಡಗಿ ಗ್ರಾಮದ ಇವರು ಮಾಡಿದರು.
ಕಾರ್ಯಕ್ರಮ ಉದ್ದೇಶಿಸಿ ಉಪನ್ಯಾಸ ಭಾಷಣವನ್ನು ಖ್ಯಾತ ಶಾಸ್ತ್ರೀಗಳಾದ ಶ್ರೀ ಯಶವಂತರಾಯ ಕೊಳ್ಳೂರ ಮಾತನಾಡಿ ಇಂಡಿ ತಾಲೂಕಿನ ಈ ಭಾಗದ ರೈತರ ಪರವಾಗಿ ಶಾಸಕರಿಗೆ ಸಾರ್ವಜನಿಕರ ಮನವಿ ರೂಪದಲ್ಲಿ ಈ ಭಾಗದಲ್ಲಿ ರೈತರಿಗೆ ನೀರಿನ ಸಮಸ್ಯೆವಿದೆ ಅದನ್ನು ಮಾನ್ಯ ಶಾಸಕರು ಪರಿಹರಿಸಬೇಕು. ಇಂದಿನ ರಾಜಕೀಯದಲ್ಲಿ ಇಂಡಿ ಶಾಸಕರು ಸಾಮಾನ್ಯರಲ್ಲ. “ಹುಲಿಯ ಹೊಟ್ಟೆಯಿಂದ ಹುಲಿನೇ ಹುಟ್ಟಿದಂತೆ ನಮ್ಮ ಶಾಸಕರು. ಸರಕಾರ ವಿರೋಧವಿರಲಿ, ಪರವಿರಲಿ, ಆದರೆ ಇಂಡಿ ಶಾಸಕರು “ಕಾಡಿನಲ್ಲಿ ಆನೆ ನಡೆದಿದ್ದೇ ದಾರಿ ಎಂಬಂತೆ “ಕೆಲಸವಾಗುತ್ತದೆ ಎಂದು ಹೇಳಿದರು.
ಮಾಜಿ ಗ್ರಾಮಪಂಚಾಯತ ಸದಸ್ಯರಾದ ಅನಿಲಗೌಡ ಅಳ್ಳಗಿಯವರು ಮಾತನಾಡಿ ಈ ನಾದ ಗ್ರಾಮಕ್ಕೆ ದೊಡ್ಡ ದೇವಾಸ್ಥಾನ ಎಂದರೆ ಅದು ಮೊದಲಿನಿಂದಲೂ ಲಕ್ಷ್ಮೀ ದೇವಾಲಯವಿದ್ದು ಈ ದೇವಾಲಯಕ್ಕೆ ಬಸ್ ತಂಗುದಾಣದಿಂದ ಸಾರ್ವಜನಿಕರಿಗೆ ಅನುಕೂಲವಾಗಲು ಸಿ.ಸಿ ರಸ್ತೆಯ ವ್ಯವಸ್ಥೆ ಮಾಡಿಸುವುದು, ಹಾಗೂ ಅಂಬೇಡ್ಕರ್ ಮೂರ್ತಿಯನ್ನು ಪ್ರತಿಷ್ಠಾಪಿಸುವ ಕುರಿತು ಮಾತನಾಡಿದರು.
ಮಾಜಿ ಬಿ.ಎಸ್.ಎಫ್. ಸೈನಿಕರಾದ ಸೋಮನಿಂಗ ಭೀ ಅವಜಿಯವರು ಮಾತನಾಡಿ-ಈ ಬೇಸಿಗೆ ಕಾಲ ಹೆಚ್ಚಾಗುತ್ತಿದೆ. ಭೂಮಿಯೊಳಗಿನ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದಾಗಿ ರೈತರು ನೀರಿಗಾಗಿ ಪರಿತಪಿಸುವಂತಾಗಿದೆ. ಆದರೆ ಶಾಸಕರು ಈ ಭಾಗದ ಹಳ್ಳಿ,ಕಾಲುವೆಗೆ ನೀರು ಹರಿಸುವ ವ್ಯವಸ್ಥೆ ಮಾಡಿಸಬೇಕು. ಆದರೆ ಆ ನೀರಿಗಾಗಿ ರೈತರಾದ ನಾವು ನೀರಿಗೆ ತಕ್ಕಂತೆ ಸರ್ಕಾರಕ್ಕೆ ಎಷ್ಟು ಬೇಕಾದಷ್ಟು ಕರ ಹಾಕಿದರೂ ಅದನ್ನು ನಾವು ತುಂಬಲು ಸಿದ್ಧರಿದ್ದೇವೆ. ದಯಮಾಡಿ ಈ ಭಾಗದ ರೈತರಿಗೆ ನೀರು ತಲುಪಿಸುವ ವ್ಯವಸ್ಥೆ ಮಾಡಿದರೆ ತಮ್ಮ ಋಣ ನಾವು ಯಾವ ಕಾಲಕ್ಕೂ ಮರೆಯುವುದಿಲ್ಲ ಎಂದು ಹೇಳಿದರು.
ಶಾಸಕರಾದ ಯಶವಂತರಾಯಗೌಡ ಪಾಟೀಲ ಮಾತನಾಡಿ ಮೂರ್ತಿಗಳ ಪ್ರತಿಷ್ಠಾಪನೆಗೆ ಅನುದಾನವಿಲ್ಲ. ಆದರೆ ಕಡಿಮೆ ಖರ್ಚಿನಲ್ಲಿದ್ದರೆ ಈ ನಾದ ಗ್ರಾಮಕ್ಕೆ ಅಂಬೇಡ್ಕರ್ ಮೂರ್ತಿಗೆ ಒಂದು ಲಕ್ಷ ರೂ.ಗಳು ಹಣ ಕೊಡುವ ವ್ಯವಸ್ಥೆ ಮಾಡುವುದಾಗಿ ಹಾಗೂ ಗ್ರಾಮ ದೇವಾಲಯಕ್ಕೆ ಸಾರ್ವಜನಿಕರಿಗೆ ಹೋಗಲು ನನ್ನ ಅವಧಿ ಮುಗಿಯುವದರೊಳಗೆ ಮಾಡಿಸಿ ಕೊಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಶೇಷವಾಗಿ ಮಾಜಿ ಸೈನಿಕರಿಗೆ, ಹಾಲಿ ಸೈನಿಕರಿಗೆ, ನಾದ ಬಿಕೆ ಗ್ರಾಮದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಸುಕ್ಷೇತ್ರ ಗೊಳಸಾರ ಗ್ರಾಮದ ಶ್ರೀ ಪರಮಪೂಜ್ಯ ಅಭಿನವ ಪುಂಡಲಿಂಗ ಮಹಾರಾಜರು, ಸಿದ್ಧ ಸಂಸ್ಥಾನ ಮಠದ ಶ್ರೀ ಪ.ಪೂ.ಮದ್ದಾನಿ ಮಹಾರಾಜರು, ಹಲಸಂಗಿಯ ಮಲಕಾರಿ ಮಹಾರಾಜರು, ಕಾರ್ಯಕ್ರಮದ ಘನ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಯಶವಂತರಾಯಗೌಡ ವ್ಹಿ ಪಾಟೀಲ, ಕಾಂಗ್ರೇಸ್ ಪಕ್ಷದ ಯುವ ನಾಯಕರಾದ ರುದ್ರಗೌಡ ಆಲಗೊಂಡ, ಮಂಜುನಾಥ ಕಾಮಗೊಂಡ , ನೀಲಕಂಠ ಬಿರಾದಾರ, ಗುರುರಾಜ ಲಾಳಸಂಗಿ, ಗಂಗಾಧರ ಮೂಲಿ, ಶಾಸ್ತ್ರಿಗಳಾದ ಯಶವಂತರಾಯ ಕೊಳ್ಳೂರ, ದಶರಥ ಗೊಂದಳಿ, ಅಪ್ಪಾಸಾಬ ಆಲಮೇಲ ಎ.ಕೆ.ನಂದಿ ಉಪನ್ಯಾಸಕರಾದ ಶಿವಾನಂದ ಉಪ್ಪಾರ ಇವರು ಕಾರ್ಯಕ್ರಮದ ನೀರೂಪಣೆ ಹಾಗೂ ವಂದನಾಪ೯ಣೆ ಮಾಡಿದರು.