ಲಿಂಗಸೂಗೂರು: ಅದು ಗಡಿ ಭಾಗಕ್ಕೆ ಹೊಂದಿಕೊಂಡ ಅಧಿ ದೇವತೆಯ ಗ್ರಾಮ. ಅದೇ ಗ್ರಾಮದ ಯುವಕನೊಬ್ಬ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದು ನಾಡಿನ ಹಾಗೂ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾನೆ.
ಹೌದು ರಾಯಚೂರ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ತೊಂಡಿಹಾಳ ಗ್ರಾಮದ ಹುಲ್ಲೇಶ್ ಕಪನೂರು ಕಲ್ಕಾತ್ತಾದಲ್ಲಿ ನಡೆದ 6 ನೇ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ನಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾನೆ.
ಇನ್ನು ಹುಲ್ಲೇಶನ ಕುಟುಂಬಸ್ಥರು ಕೃಷಿಯನ್ನೆ ನಂಬಿ ಜೀವನ ಸಾಗಿಸುತ್ತಿದ್ದಾರೆ. ಕಡು ಬಡತನದಲ್ಲೆ ವಿದ್ಯಾಭ್ಯಾಸ
ಮಾಡಿ ಸಧ್ಯ ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಬಿ.ಎ.ಫೈನಲ್ ಇಯರ್ ಓದುತ್ತಿದ್ದಾನೆ. ಬಾಗಲಕೋಟೆಯ ರಾಥೋಡ್ ಮಾರ್ಶಲ್ ಆರ್ಟ್ಸ್ ಅಸೋಶಿಯೇಶನ್ನಿಂದ ಕರಾಟೆಯನ್ನು ಕಲಿತು ಸ್ಪರ್ಧೆಯಲ್ಲಿ ಗೆದ್ದು ಭಾರತಕ್ಕೆ ಹೆಸರು ತಂದಿದ್ದಾನೆ.
ಇನ್ನು ಹುಲ್ಲೇಶನ ಸಾಧನೆಯನ್ನು ಮೆಚ್ಚಿ ಆಮ್ ಆದ್ಮಿ ಪಕ್ಷದ ಮುಖಂಡರು, ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಸನ್ಮಾನಿಸಿ ಶುಭ ಹಾರೈಸಿದರು.
ಈ ವೇಳೆ ಸಿಂಧನೂರಿನ ಚಾರ್ವಾಕ ಅಕಾಡೆಮಿಯ ಸಂಸ್ಥಾಪಕ ಶಂಕರ್ ವಾಲಿಕಾರ್ ಮಾತನಾಡಿ, ಒಂದು ಕುಗ್ರಾಮದ ಯುವಕ ಕರಾಟೆ ಸ್ಪರ್ಧೆಯಲ್ಲಿ 2 ನೇ ಸ್ಥಾನ ಪಡೆದು ಇಡೀ ಭಾರತ ಹೆಮ್ಮೆ ಪಡುವಂತೆ ಮಾಡಿದ್ದಾನೆ. ಕರಾಟೆ ಎನ್ನುವದು ಆತ್ಮ ರಕ್ಷಣೆಯ ಕಲೆಯಾಗಿದೆ. ಸಾವಿರಾರು ವರ್ಷಗಳ ಹಿಂದೆ ಬುದ್ಧ ಭಗವಾನರು ಈ ದೇಶಕ್ಕೆ ಕರಾಟೆ ಕಲೆಯನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ.
ಇನ್ನೊಬ್ಬ ವ್ಯಕ್ತಿ ತನ್ನ ಮೇಲೆ ಹಲ್ಲೆ ಮಾಡದೇ ಇರಲಿ, ಜೀವವನ್ನು ತೆಗೆಯದೇ ಇರಲಿ, ನಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಕಲಿಯುವ ವಿದ್ಯೆಯಾಗಿದೆ.
ನಮ್ಮೂರಿನ ಸುಪುತ್ರ ಮುದೊಂದು ದಿನ ಬೇರೆ ಬೇರೆ ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಲು ನಾವು ನೀವೂ ಸೇರಿ ಸಹಕಾರ ಮಾಡಬೇಕಿದೆ. ಭಾರತದ ಹೆಸರನ್ನು ಹೆಮ್ಮೆಯಿಂದ ಹೇಳಿಕೊಳ್ಳಲು ಇಂತಹ ಸುಪುತ್ರನನ್ನು ಹೆತ್ತ ತಂದೆ ತಾಯಿಗೆ ಗೌರವ ಸಲ್ಲಬೇಕು ಎಂದರು.