ರಾಮನಗರ : ಆದಿವಾಸಿಗಳ ಅಂತರಾಷ್ಟ್ರೀಯ ಕವಿಗೋಷ್ಠಿಯಲ್ಲಿ ರಾಮನಗರ ಜಿಲ್ಲೆಯ ರಂಗ ತಜ್ಞರು, ಹಿರಿಯ ಕಲಾವಿದರು ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಬರಹಗಾರ ಡಾ.ಎ.ಆರ್ ಗೋವಿಂದ ಸ್ವಾಮಿ ಅಮ್ಮನಪುರ ರವರು ಭಾರತವನ್ನು ಪ್ರತಿನಿಧಿಸಿ ತಮ್ಮ ಮಣ್ಣಿನ ಕವಿತೆ ವಾಚಿಸಿದರು.
ಹೌದು ಕೇಂದ್ರ ಸಾಹಿತ್ಯ ಅಕಾಡೆಮಿಯು 75 ವರ್ಷಗಳ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಮಧ್ಯಪ್ರದೇಶದ ಭೂಪಾನಲ್ಲಿ ಆಯೋಜಿಸಿದ ಉನ್ವೇಶ್ 2023ರ ಆದಿವಾಸಿಗಳ ಅಂತರಾಷ್ಟ್ರೀಯ ಕವಿಗೋಷ್ಠಿಯಲ್ಲಿ, ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಬರಹಗಾರ ಡಾ.ಎ.ಆರ್ ಗೋವಿಂದ ಸ್ವಾಮಿ ಅಮ್ಮನಪುರ ರವರು ಭಾರತವನ್ನು ಪ್ರತಿನಿಧಿಸಿ ತಮ್ಮ ಮಣ್ಣಿನ ಕವಿತೆ ವಾಚಿಸಿದರು.
ಇದು ಇಡೀ ರಾಜ್ಯಕ್ಕೆ ಹಾಗೂ ದೇಶಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಕೆಪಿಟಿಸಿಎಲ್ ಕನ್ನಡ ಸಂಘದ ಕಾರ್ಯದರ್ಶಿಯಾಗಿದ್ದು ಕೆಪಿಟಿಸಿಎಲ್ ಗೂ ಇದು ಹಿರಿಮೆಯ ಗರಿಯಾಗಿದೆ. ಇವರ ಜೊತೆ ಗೋಷ್ಠಿಯ ಅಧ್ಯಕ್ಷತೆ ಮಹೂವ ರಾಜ್ಯ ಸಭಾ ಮಾಜಿ ಸದಸ್ಯರು ಜಾರ್ಖಂಡ್ ವಹಿಸಿದ್ದರು. ಇನ್ನೂ ಗೋಷ್ಠಿಯಲ್ಲಿ ಶೀತಲ್ ಕುಮಾರಿ ಮಹಾರಾಷ್ಟ್ರ, ಗುದ್ದು ಬಾಬು ಉಡಿಯ ,ಕಿರಣ್ ಕುಮಾರ್ ಗೋಂಡಿ, ಡಾ ಎ ಆರ್ ಗೋವಿಂದ ಸ್ವಾಮಿ ಕರ್ನಾಟಕ ಬಂಜಾರ, ಪಾರ್ವತಿ ತಿರ್ಕೆ, ಕುಡುಕ್, ತೈಲು, ಮೂಂಗ್ ತ್ರಿಪುರ ಮುಂತಾದವರು ಭಾಗವಹಿಸಿದ್ದರು.
ಕರ್ನಾಟಕದಿಂದ ಚಂದ್ರಶೇಖರ ಕಂಬಾರರು, ಎಸ್ ಎಲ್ ಭೈರಪ್ಪ, ಎಚ್ ಎಸ್ ಶಿವಪ್ರಕಾಶ್, ಬಸವರಾಜ ಕಲ್ಗುಡಿ, ಡಾ ಜೆ ಶ್ರೀನಿವಾಸ್ ಮೂರ್ತಿ ಮುಂತಾದವರು ಭಾಗವಹಿಸಿದ್ದು ವಿಶೇಷ ಎಂದು ವಿಶ್ವಮಾನವ ವೇದಿಕೆ ಡಾ. ಮುತ್ತುರಾಜ್, ಬಂಜಾರ ಸಾಹಿತಿ ಕಲಾವಿದರ ಕೂಟದ ಜಾಗೇರಿ, ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿಯ ವರಲಕ್ಷ್ಮಿ, ಬಂಜಾರ ಜನ ಸೇವಾ ಸಂಘದ ಅಧ್ಯಕ್ಷ ಹನುಮಂತ ನಾಯಕ್, ಕೆಪಿಟಿಸಿಎಲ್ ಕಾರ್ಮಿಕ ಮುಖಂಡ ರಾಜಾ ನಾಯಕ್, ಕರನ್ ಶೀಲಾ, ಕೇಶವಮೂರ್ತಿ, ರಾಜ್ಯಸಾಹಿತಿ ಮತ್ತು ಕಲಾವಿದರ ಒಕ್ಕೂಟದ ಕುಮಾರ್, ರಾಮನಗರ ಜಿಲ್ಲೆಯ ಸಾಹಿತಿ ಕಲಾವಿದರು ಹಾಗೂ ಚಿಂತಕರ ವೇದಿಕೆ ಮುಂತಾದವರು ಅಭಿನಂದಿಸಿದ್ದಾರೆ .ಇವರು ಈ ಹಿಂದೆ ಕೂಡ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಬಾರಿ ರಂಗಭೂಮಿ ಸಾಹಿತ್ಯಕ್ಕೆ ಭಾಗವಹಿಸಿರುವುದು ವಿಶೇಷ.
ಇವರು ಬಂಜಾರ ಸಮುದಾಯದ ಅನರ್ಘ್ಯ ಪ್ರತಿಭೆಯಾಗಿದ್ದಾರೆ ಇವರನ್ನು ಅಭಿನಂದಿಸುತ್ತೇವೆ ಹಾಗೂ ಇವರ ಸೇವೆ ಹೀಗೆ ಸಾಗಲಿ ಎಂದಿದ್ದಾರೆ.