ಧಾನಮ್ಮದೇವಿ ಮೂರ್ತಿ ಪ್ರತಿಷ್ಠಾಪನೆ, ಮುತ್ತೈದೆಯರು ಕುಂಭಹೊತ್ತು ಮೆರವಣಿಗೆ
ಇಂಡಿ: ಪಟ್ಟಣದ ಬೀರಪ್ಪನಗರದ ಧಾನಮ್ಮದೇವಿ ಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ ಬುಧವಾರರಂದು ಪಟ್ಟಣದ ಮಲ್ಲಯ್ಯ ದೇವರ ದೇವಸ್ಥಾನದಿಂದ ಧಾನಮ್ಮ
ದೇವಿಯ ಮೂರ್ತಿ ಹಾಗೂ ಮಿರಗಿ ಗ್ರಾಮದ ದಾನೇಶ್ವರಿ
ಪಲ್ಲಕ್ಕಿ, ಸದ್ಗುರು ಶಾಂತೇಶ್ವರರ ಪಲ್ಲಕ್ಕಿಯ ಮೆರವಣಿಗೆಯಲ್ಲಿ ನೂರಾರು ಮುತ್ತೈದೆಯರು
ಕುಂಭಹೊತ್ತು ಮೆರವಣಿಗೆಯುದ್ದಕ್ಕೂ ಧಾನಮ್ಮ ದೇವಿಯ ಸ್ತುತಿ ಮಾಡುತ್ತ ಸಾಗಿದರು.
ಮೆರವಣಿಗೆ ಧಾನಮ್ಗಮ ದೇವಿಯ ದೇವಸ್ಥಾನ
ತಲುಪುತ್ತಿದ್ದಂತೆ ದೇವಸ್ಥಾನದಲ್ಲಿ ಹೋಮ, ಹವನ,
ಪೂಜಾ ಕೈಂಕರ್ಯಗಳು ಜರುಗಿದವು. ಮೆರವಣಿಗೆಯ ನೇತೃತ್ವವನ್ನು ಶಿರಶ್ಯಾಡ ಹಿರೆಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ವಹಿಸಿದ್ದರು.
ಕಾಸುಗೌಡ ಬಿರಾದಾರ, ಶಿವಾನಂದ ತಾಂಬೆ, ಅನೀಲಗೌಡ ಬಿರಾದಾರ, ಬಾಳು ಮುಳಜಿ, ರಾಚು ಬಡಿಗೇರ, ಅನೀಲ ಏಳಗಿ, ಅಶೋಕ ಅಕಲಾದಿ ಸೇರಿದಂತೆ ಮತ್ತಿತರರು ಇದ್ದರು.
ಇಂಡಿ: ಧಾನಮ್ಮದೇವಿ ಮೂರ್ತಿ ಪ್ರತಿಷ್ಠಾಪನೆ ನಿಮಿತ್ಯ ನೂರಾರು ಮಹಿಳೆಯರು ಕುಂಭಮೇಳ ನಡೆಸಿದರು.