ಇಂಡಿ | ಸ್ಮಶಾನ ಭೂಮಿಗಳು ಇದ್ದರೂ ಕೂಡಾ ಸ್ಮಶಾನ ಭೂಮಿ ಬೇಡಿಕೆ ಏಕೆ..?
ಇಂಡಿ : ತಾಲೂಕಿನ ಪ್ರತಿ ಗ್ರಾಮದಲ್ಲೂ ಸಾರ್ವಜನಿಕರು ಸ್ಮಶಾನ ಭೂಮಿಗಳು ಇದ್ದರೂ ಕೂಡಾ ಸ್ಮಶಾನ ಭೂಮಿ ಬೇಡಿಕೆ ಏಕೆ ಬಂದಿದೆ ಎಂಬುದನ್ನು ಆತ್ಮವಲೋಕನ ಮಾಡಿಕೊಳ್ಳಬೇಕು. ಬಹುತೇಕ ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನ ಭೂಮಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮುದಾಯದವರಿಗೆ ಅಂತ್ಯ ಸಂಸಾರ ಮಾಡಲು ಅವಕಾಶವಿರಲಿಕ್ಕಿಲ್ಲ. ಹೀಗಾಗಿ ಸ್ಮಶಾನ ಬೇಡಿಕೆ ಹೆಚ್ಚಾಗಿದೆ ಎಂಬ ಚರ್ಚೆ ಸಭೆಯಲ್ಲಿ ವ್ಯಕ್ತವಾಯಿತು.
ಇಂಡಿ ನಗರದ ಪೊಲೀಸ್ ಉಪವಿಭಾಗಧಿಕಾರಿ ಸಭಾ ಭವನದಲ್ಲಿ ಡಿವಾಯ್ ಎಸ್ಪಿ ಜಗದೀಶ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕುಂದು ಕೊರತೆ ಸಭೆ ನಡೆಯಿತು.
ತಾಲೂಕಿನ ಗ್ರಾಮಗಳಲ್ಲಿ ಇರುವ ಸ್ಮಶಾನ ಭೂಮಿಗಳಿಗೆ ಸಾರ್ವಜನಿಕ ಸ್ಮಶಾನಭೂಮಿ ಎಂದು ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ದೌರ್ಜನ್ಯ ಸಮಿತಿ ಸದಸ್ಯರಾದ ಬಾಬು ಗುಡಿಮಿ ಅಧಿಕಾರಿಗಳಿಗೆ ಒತ್ತಾಯಿಸಿದರು ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಸಮುದಾಯ ಭವನಗಳನ್ನು ಗ್ರಂಥಾಲಯಗಳನ್ನಾಗಿ ಪರಿವರ್ತಿಸಬೇಕೆಂದು ಅಗ್ರಹಿಸಿದರು.ಇದಕ್ಕೆ ಉತ್ತರಿಸಿದ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಉಮೇಶ್ ಲಮಾಣಿ, ಜಾತಿವಾರು ಸ್ಮಶಾನಭೂಮಿ ಮಾಡಲು ಅವಕಾಶವಿರುವುದಿಲ್ಲ. ಸಾರ್ವಜನಿಕ ಸ್ಮಶಾನ ಭೂಮಿಯಲ್ಲಿ ಎಲ್ಲರಿಗೂ ಅಂತ್ಯಸಂಸ್ಕಾರ ಮಾಡಲು ಅವಕಾಶ ಇದೆ. ಸ್ಥಳೀಯವಾಗಿ ಯಾರಾದರೂ ಸಮಸ್ಯೆ ಮಾಡಿದರೆ ಅದನ್ನು ನಮ್ಮ ಗಮನಕ್ಕೆ ತಂದರೆ ಪರಿಹರಿಸುತ್ತೇವೆ ಎಂದು ಮಾಹಿತಿ ನೀಡಿದರು.
ಡಿ ವೈ ಎಸ್ ಪಿ ಜಗದೀಶ ಮಾತನಾಡಿ,ಎಲ್ಲಾ ಸಮುದಾಯದವರು ಸೌಜನ್ಯದಿಂದ ಬದುಕಬೇಕು. ಮಾನವೀಯತೆ ವಿರುದ್ಧ ಯಾರೂ ಕೆಲಸ ಮಾಡಬಾರದು. ಜಿಲ್ಲೆಯನ್ನು ಅಪರಾಧ ಮುಕ್ತ ಮಾಡಲು ಇಲಾಖೆ ಶ್ರಮಿಸುತ್ತಿದೆ,ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.ಉಪವಿಭಾಗದ ಎಲ್ಲಾ ಕಡೆ ಕುಂದು ಕೊರೆತೆ ಸಭೆ ನಡೆಯುತ್ತಿದ್ದೂ ಗ್ರಾಮೀಣ ಬಾಗಗಳಲ್ಲಿ ಸಮಸ್ಯೆ ಇದ್ದಲ್ಲಿ ಅಧಿಕಾರಿಗಳು ಈಗಾಗಲೇ ಸೂಚನೆ ನೀಡಲಾಗಿದೆ.ತಮ್ಮ ಸಮಸ್ಯೆಗಳಿದ್ದರೆ ಸಭೆಯ ಗಮನಕ್ಕೆ ತರಬೇಕು ಎಂದು ಹೇಳಿದರು.
ಸಭೆಯಲ್ಲಿ ವಿನಾಯಕ ಗುಣಸಾಗರ,ಮಲ್ಲಿಕಾರ್ಜುನ ಮಡ್ಡಿಮನಿ,ಸುರೇಶ ನಡುಗಡ್ಡಿ,ಚಂಡಾರಶೇಖರ ಹೊಸಮನಿ,ಧರ್ಮರಾಜ ಸಾಲೋಟಗಿ,ನಾಗೇಂದ್ರ ಮೇತ್ರಿ,ಯಲ್ಲಪ್ಪ ಬಂದಿವಡ್ಡರ,ಹುಚ್ಚಪ್ಪ ತಳವಾರ,ಧರ್ಮ ವಾಲಿಕಾರ ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು.


















