ರೈತರ, ಹಿಂದುಳಿದ ಹಾಗೂ ಮಧ್ಯಮ ವರ್ಗದ ಜನ ವಿರೋಧಿ ಬಜೆಟ್ ಇದಾಗಿದೆ.ನಿರ್ಜೀವ ಬಜೆಟ್, ನಾಲ್ಕು ಲಕ್ಷ ಕೋಟಿ ಬಜೆಟ್ ಖಾಲಿ, ಸಾಲದ ಬಜೆಟ್ ಮಂಡಿಸಿದ್ದಾರೆ. ನಿರಾಶಾದಾಯಕ ವಾಗಿದೆ.
ಮಲ್ಲಿಕಾರ್ಜುನ ಕಿವಡೆ ಮಂಡಳ ಅಧ್ಯಕ್ಷರು ಬಿಜೆಪಿ ಇಂಡಿ
ಇವತ್ತಿನ ರಾಜ್ಯ ಸರ್ಕಾರದ ಬಜೆಟ್ ಒಂದೇ ಕೋಮಿಗೆ ಓಲೈಸಲು ಮಾಡಿದಂತಹ ಬಜೆಟ್ ಆಗಿದೆ. ಹೊಸ ಹೊಸ ಯೋಜನೆಗಳಿಗೆ ಯಾವುದೇ ಹಣ ನೀಡಿರುವುದಿಲ್ಲ. ಇತರೆ ಚಿಕ್ಕ ಪುಟ್ಟ ಸಮಾಜಗಳಿಗೆ ಲೆಕ್ಕಕ್ಕೆ ತೆಗೆದುಕೊಂಡಿರುವುದಿಲ್ಲ ಒಟ್ಟಾರೆಯಾಗಿ ರಾಜ್ಯದ ಬಜೆಟ್ ಕಳಪೆಯಾಗಿದ್ದು ಇರುತ್ತದೆ.
ಎಸ್ ಜೆ ವಾಲಿಕಾರ ಹಿರಿಯ ನ್ಯಾಯವಾದಿ ಇಂಡಿ
ರೈತರಿಗೆ ತೊಗರಿ ಪರಿಹಾರವಿಲ್ಲ, ಶಿಕ್ಷಣ, ಉದ್ಯೋಗ ಮತ್ತು ನೀರಾವರಿಗೆ ಒತ್ತು ನೀಡಿಲ್ಲ . ವಿಜಯಪುರ ಜಿಲ್ಲೆಗೆ ಯಾವದೇ ರೀತಿಯ ಅನುದಾನ ನೀಡಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಜನರಿಗೆ ಏನೂ ಪ್ರಯೋಜನ ಇಲ್ಲ
ರಾಮಸಿಂಗ ಕನ್ನೊಳ್ಳಿ ಇಂಡಿ ಭಾಜಪ ಯುವ ಧುರೀಣರು.
ಆರ್ಥಿಕ ವ್ಯವಸ್ಥೆಯಲ್ಲಿ ಅತ್ಯಂತ ಸುವ್ಯವಸ್ಥಿತವಾಗಿ ಎಲ್ಲಾ ವರ್ಗದ ಜೊತೆಗೆ ಎಲ್ಲಾ ಕ್ಷೇತ್ರಕ್ಕೂ ಅತ್ಯಂತ ಪ್ರಾಮುಖ್ಯತೆ ನೀಡಿದ ಬಜೇಟ್ ಇದಾಗಿದೆ. ಇಂಡಿಯಲ್ಲಿ ನಬಾರ್ಡ್ ಸಹಯೋಗದೊಂದಿಗೆ ಹೊಸ GTTC ಕಾಲೇಜ್ ಸ್ಥಾಪನೆಗೆ ಮುಂದಾಗಿದ್ದು ಹರ್ಷ ತಂದಿದೆ.
ಮಹೇಶ ಹೊನ್ನಬಿಂದಗಿ
ತಾಲೂಕು ಗ್ಯಾರಂಟಿ ಸಮಿತಿ ಸದಸ್ಯರು ಇಂಡಿ
ತಿಡಗುಂದಿ ಬ್ರ್ಯಾಂಚ್ ಕ್ಯಾನಲ್ ಮೂಲಕ ಇಂಡಿ ತಾಲೂಕಿನ 16 ಕೆರೆಗಳ ಭರ್ತಿಗೆ ಕ್ರಮ ಹಾಗೂ ಚಡಚಣ-ಗಾಣಗಾಪೂರ ಹೊಸ ರಾಜ್ಯ ಹೆದ್ದಾರಿ ಝಳಕಿ, ಇಂಡಿ ಮಾರ್ಗವಾಗಿ ಹೊಸ ಹೆದ್ದಾರಿ ಘೋಷಣೆ ಮಾಡಿದ್ದು ಗಡಿಭಾಗದ ಜನರಿಗೆ ಸಹಕಾರ ವಾಗಲಿದೆ.
ಹುಚ್ಚಪ್ಪ ತಳವಾರ, ಕಾಂಗ್ರೆಸ್ ಮುಖಂಡ
ಕರ್ನಾಟಕ ರಾಜ್ಯದಲ್ಲಿ ಸುಮಾರು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಆರೋಗ್ಯ ಇಲಾಖೆಯಲ್ಲಿ ಜೀತದ ಪದ್ಧತಿಯ ಆಳದಂತೆ ದುಡಿಯುತ್ತಿರುವ ನಮ್ಮ ನೌಕರರನ್ನು ಘನ ಸರ್ಕಾರ ಯಾವುದೇ ತರ ನಮ್ಮ ನೌಕರರನ್ನು ಭದ್ರಪಡಿಸಿರುವುದಿಲ್ಲ ಈ ಬಜೆಟ್ ಮಲತಾಯಿ ಧೋರಣೆ ಮಾಡಿದಂತೆ. ಎಲ್ಲಾ ನೌಕರರನ್ನು ನಿರಾಸೆ ತಂದಿದೆ.
ಚಂದ್ರಾಮ ಮೇಡೆದಾರ,
ಅಧ್ಯಕ್ಷರು, ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರ ಸಂಘ ಇಂಡಿ