ಇಂಡಿ | ಲಚ್ಯಾಣದಲ್ಲಿ ಶೇ 64.95 ಮತ್ತು ಭತಗುಣಕಿಯಲ್ಲಿ ಶೇ 67.50 ರಷ್ಟು ಮತದಾನ
ಗ್ರಾ,ಪಂ ಗೆ ಶಾಂತಿಯುತ ಮತದಾನ
ಇಂಡಿ : ತಾಲೂಕಿನ ಲಚ್ಯಾಣ, ಭತಗುಣಕಿ ಗ್ರಾಮ ಪಂಚಾಯತಿಯ ಸದಸ್ಯರು ನಿಧನ ಹೊಂದಿದ ನಿಮಿತ್ಯ ತೆರವಾದ ಸ್ಥಾನಕ್ಕೆ ಇಂದು ಶಾಂತಿಯುತ ಮತದಾನ ನಡೆಯಿತು.
ಲಚ್ಯಾಣದಲ್ಲಿ ಶೇ ೬೪.೯೫ ಮತ್ತು ಭತಗುಣಕಿಯಲ್ಲಿ ಶೇ ೬೭.೫೦ ರಷ್ಟು ಮತದಾನವಾಗಿದೆ.ಲಚ್ಯಾಣದಲ್ಲಿ ಚನ್ನಮ್ಮ ಸಿದ್ದರಾಮ ಕೊತಲಿ, ಜಗದೇವಿ ಶಂಕರೆಪ್ಪ ಮುಜಗೊಂಡ ಮತ್ತು ಸುವರ್ಣಾ ಯಶವಂತ ಬಿರಾದಾರ ಸ್ಪರ್ಧಿಸಿದ್ದರು ಈ ಸ್ಥಾನ ಸಾಮಾನ್ಯ ಮಹಿಳೆಗೆ ಮಿಸಲಾಗಿತ್ತು.
ಭತಗುಣಕಿ ಗ್ರಾ.ಪಂ ದಲ್ಲಿ ಯಲ್ಲವ್ವ ಮಾಳಪ್ಪ ವಾಘೆ, ರೇಖಾ ಶ್ರೀಮಂತ ಕಂಠಿಕರ, ಶಹಿರಬಾನು ಅಬ್ಬಾಸ ಬಾಗವಾನ ಸ್ಫರ್ಧಿಸಿದ್ದರು.
ಮುಕ್ತಾಬಾಯಿ ಬಸಣ್ಣ ಕಂಠಿಕರ ಮತ್ತು ಕಲಾವತಿ ಹಣಮಂತ ಬಿರಾದಾರ ಇವರ ನಿಧನದಿಂದ ಗ್ರಾ.ಪಂ ಸ್ಥಾನ ತೆರವಾಗಿತ್ತು.
ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತçದ, ತಹಸೀಲ್ದಾರ ಬಿ.ಎಸ್.ಕಡಕಬಾವಿ ಮತ್ತು ಚುನಾವಣೆ ಉಸ್ತುವಾರಿ ಆರ್.ಬಿ ಮೂಗಿ ಭೇಟಿ ನೀಡಿದ್ದರು.
ಭತಗುಣಕಿ ಗ್ರಾ.ಪಂ ಗೆ ಎಸಿ ಅನುರಾಧಾ ವಸ್ತçದ ಭೇಟಿ ನೀಡಿ ವೀಕ್ಷಸುತ್ತಿರುವದು